ನ್ಯಾಮತಿ ತಾಲೂಕು ಬೆಳಗುತ್ತಿ ಗ್ರಾಮದಲ್ಲಿರುವ ಶ್ರೀ ಪಾಂಡುರಂಗ ಸತ್ಯಭಾಮ ರುಕ್ಮಿಣಿ ಮಂದಿರದಲ್ಲಿ ದ್ವಿತೀಯ ವರ್ಷದ ದಿಂಡಿ ಉತ್ಸವ ಭಾನುವಾರದಂದು ಕಾರ್ಯಕ್ರಮ ಜರುಗಿದೆ.
ಆರು ಹನುಮಂತ್ ರಾವ್ ರಂಗದೋಳ್ ಪಂಡಿತ ತುಕಾರಾಂ ರಂಗದೋಳ್ ಇವರ ನೇತೃತ್ವದಲ್ಲಿ ಪೋತಿಸ್ಥಾಪನೆ ನಂತರ ಬೆಳಗ್ಗೆ ಒಂಬತ್ತು ಗಂಟೆಗೆ ಪಂಡರಿ ಭಜನೆ ಯೊಂದಿಗೆ ಪ್ರಮುಖ ರಾಜ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಪಾಂಡುರಂಗ ಸತ್ಯಭಾಮ ರುಕ್ಮಿಣಿ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವ ಜರುಗಿತು.
ತದನಂತರ ಮಧ್ಯಾಹ್ನ 1:00ಗೆ ಸರಿಯಾಗಿ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿತು.
ಸಿಂಪಿ ಸಮಾಜದ ಅಧ್ಯಕ್ಷರಾದ ಜಯರಾಜು, ಉಪಾಧ್ಯಕ್ಷರಾದ ದಶರಥರಾವ ಕಾರ್ಯದರ್ಶಿ ಎಸ್ ಆರ್ ನವೀನ್, ಚೇತನ್, ರಮೇಶ್, ಸದಸ್ಯರಾದ ರಾಜೇಂದ್ರ ಪ್ರಸಾದ್ ಎಸ್ ಜೆ, ಜನಾರ್ಧನ್, ಪುಂಡಲಿಕ ರಾವ್, ಎಸ್ ಎಂ ರಮೇಶ್ ,ಬಿ ಎಚ್ ವಿಠೋಬಾ ರಾವ್, ಇನ್ನು ಮುಂತಾದ ಸರ್ವ ಭಕ್ತಾದಿಗಳು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದರು.