????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಹೊನ್ನಾಳಿ : ತಾಲ್ಲೂಕಿನ ತಿಮ್ಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಎಂ. ಹನುಮನಹಳ್ಳಿ ಇದರ ಆಡಳಿತ ಮಂಡಳಿಯ 12 ಸ್ಥಾನಗಳ ಪೈಕಿ 8 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.
ಬಿ.ಜಿ. ಬಸವರಾಜಪ್ಪ (319), ಟಿ.ಬಿ. ನಾಗರಾಜಪ್ಪ (324), ಎಚ್.ಜಿ. ರುದ್ರೇಶಪ್ಪ ( 303), ಜಿ.ಬಿ. ರೇವಣಸಿದ್ದಪ್ಪ ( 293), ಅಬ್ದುಲ್ ರಬ್ಬಾನಿಸಾಬ್ ( 264), ಮಹಿಳಾ ಮೀಸಲು ಕ್ಷೇತ್ರದಿಂದ ನೇರಲಗುಂಡಿ ಮಂಜಮ್ಮ (270), ಹಾಗೂ ಎಂ. ಹನುಮನಹಳ್ಳಿ ಸಿದ್ದಮ್ಮ ( 265) ಹಾಗೂ ಎಚ್.ಜಿ. ಶಂಕರಮೂರ್ತಿ ( 273) ಅವರು ಚುನಾವಣೆಯಲ್ಲಿ ವಿಜೇತರಾದರು.
ಅವಿರೋಧ ಆಯ್ಕೆ : ಸಾಲಗಾರರ ಕ್ಷೇತ್ರದಿಂದ ಮಹಮದ್‍ಸಾದಿಕ್ ಉಲ್ಲಾ (ಪ್ರ ವರ್ಗ ಎ ) ಎಚ್.ಜಿ. ಶಂಕರಮೂರ್ತಿ ( ಪ್ರ ವರ್ಗ ಬಿ ) ಬಿ. ಮಲ್ಲೇಶನಾಯ್ಕ,( ಪ ಜಾತಿ ), ನಾಗೇಶಪ್ಪ,( ಪ ಪಂಗಡ ) ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ನೇರಲಗುಂಡಿಯ ಜಯನಾಯ್ಕ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಸಿ.ಜಿ. ಜಗದೀಶ್ ದಾವಣಗೆರೆ ಅವರು ಕಾರ್ಯನಿರ್ವಹಿಸಿದರು. ಸಂಘದ ಕಾರ್ಯನಿರ್ವಹಣಾಧಿಕಾರಿ ಜಿ. ಬಸವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಜಿ. ಜಗದೀಶ್, ಮುಖಂಡರಾದ ವೈ. ಚಂದ್ರಪ್ಪ, ಎಂ.ಬಿ. ರುದ್ರೇಶ್, ಶಿವಕುಮಾರ್ ಅವರು ಹಾಜರಿದ್ದರು.
ಈ ಚುನಾವಣೆಯಲ್ಲಿ ಶಿಮುಲ್ ನಿರ್ದೇಶಕರಾದ ಬಿ.ಜಿ. ಬಸವರಾಜಪ್ಪ ಅವರು ಈ ಹಿಂದೆ ಚುನಾವಣೆಯಲ್ಲಿ ಸತತವಾಗಿ ಈ ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುತ್ತ ಬಂದಿರುವುದು ವಿಶೇಷವಾಗಿದೆ.
ಜಿದ್ದಾಜಿದ್ದಿನ ಚುನಾವಣೆಯಾಗಿದ್ದರಿಂದ ಸಿಪಿಐ ಸುನೀಲ್‍ಕುಮಾರ್ ಅವರು ಚುನಾವಣೆ ಕರ್ತವ್ಯದಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *