107-ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ – 2026 ರ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಾಪ್ತಿಯಲ್ಲಿ, 85 ವರ್ಷ ಹಾಗೂ ಮೇಲ್ಪಟ್ಟ (85+) ಮತ್ತು ವಿಶೇಷ ವಿಕಲಚೇತನರ ಮನೆ ಬಾಗಿಲಿಗೆ ತೆರಳಿ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡುವ ಪ್ರಕ್ರಿಯೆ ಏಪ್ರಿಲ್ 1 ಮತ್ತು 2 ರಂದು ಬೆಳಗ್ಗೆ 7-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ನಡೆಯಲಿದೆ. ಈಗಾಗಲೇ ಅಂಚೆ ಮತದಾನ ಮಾಡಲು ಅರ್ಜಿ ಸಲ್ಲಿಸಿರುವ ಎಲ್ಲಾ ಮತದಾರರು ತಮ್ಮ ಮನೆಯ ಮತಕ್ಷೇತ್ರದಲ್ಲಿ ಇದ್ದು, ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಸಹಕಾರ ನೀಡಿ ಮತದಾನ ಮಾಡುವಂತೆ ಚುನಾವಣಾಧಿಕಾರಿ, ನಂ-107 ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಹಾಗೂ ಉಪ ವಿಭಾಗಾಧಿಕಾರಿಗಳು ದಾವಣಗೆರೆ ಉಪ ವಿಭಾಗ ಸಂತೋಷ್ ಕುಮಾರ್ ತಿಳಿಸಿದ್ದಾರೆ.
