ಸಾಸ್ವೆಹಳ್ಳಿ :14 :ಮೇ ಗುರುವಾರದಂದು ಬೀದಿ ಬದಿಯ ಕಬ್ಬಿನ ಹಾಲಿನ ಕೈಗಾಡಿಯ ಹಾಲು ಸೇವಿಸಿ ವಾಂತಿ ಭೇದಿ ಪ್ರಾರಂಭವಾದ್ದರಿಂದ ಕೂಡಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು.
ಗುರುವಾರ ಮಧ್ಯಾಹ್ನ ಇಲ್ಲಿನ ಸಂತೆ ಮೈದಾನದ ಬಳಿ ಇರುವ ರಸ್ತೆ ಬದಿಯ ಕಬ್ಬಿನ ಹಾಲಿನ ಕೈಗಾಡಿಯಲ್ಲಿ ಹಾಲು ಖರೀದಿಸಿ ಬಾಟಲ್ ನಲ್ಲಿ ಮನೆಗೆ ತೆಗೆದುಕೊಂಡು ಹೋದ ಹೋಬಳಿಯ ಬೀರಗೊಂಡನಹಳ್ಳಿ ಗ್ರಾಮದ ವಿಜಯ್ ಕುಮಾರ್ ಮನೆಯಲ್ಲಿ ತನ್ನ ಪತ್ನಿ ಮಗಳೊಂದಿಗೆ ಈ ಕಬ್ಬಿನ ಹಾಲನ್ನು ಸೇವಿಸಿದ ಕೆಲವೇ ನಿಮಿಷದಲ್ಲಿ ಮೂರು ಜನಕ್ಕೂ ವಾಂತಿಬೇದಿ ಪ್ರಾರಂಭವಾಗಿ ಅಸ್ವಸ್ಥರಾಗುತ್ತಿದ್ದಂತೆ ಪಕ್ಕದ ಮನೆಯವರ ಸಹಾಯ ಪಡೆದು ವಾಹನ ಒಂದರಲ್ಲಿ ಹೋಬಳಿ ಕೇಂದ್ರ ಸಾಸ್ವೆಹಳ್ಳಿಯ ಪ್ರಾಥಮಿಕ ಕೇಂದ್ರಕ್ಕೆ ಬಂದು ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಘಟನೆಯ ನಂತರ ಕಬ್ಬಿನ ಹಾಲಿನ ಅಂಗಡಿಯ ಮಾಲೀಕನನ್ನು ವಿಚಾರಿಸಿದಾಗ ಬೇಜವಾಬ್ದಾರಿಯ ಹಾರಿಕೆ ಉತ್ತರ ನೀಡಿದ್ದು, ಈ ಬಗ್ಗೆ ವಿಜಯ್ ಕುಮಾರ್ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಇವರಿಗೆ ಮೌಖಿಕ ದೂರು ನೀಡಿದ್ದಾರೆ.

ಈ ಬಗ್ಗೆ ಕಬ್ಬಿನ ಹಾಲಿನ ಅಂಗಡಿಯವನಿಗೆ ನೋಟಿಸ್ ಜಾರಿ ಮಾಡಲಾಗುವುದು, ಆತ ಬಳಕೆ ಮಾಡುತ್ತಿರುವ ನೀರು, ಮಂಜುಗಡ್ಡೆ ಪರೀಕ್ಷೆಗೆ ಕಳಿಸಲಾಗುವುದು.ಡಾ.ಮಂಜುನಾಥ್ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಸಾಸ್ವೆಹಳ್ಳಿ.

Leave a Reply

Your email address will not be published. Required fields are marked *