ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖಾ ಅಧೀನ ಸಮಗ್ರ ಜೈವಿಕ ಕೇಂದ್ರ ಚಿಕ್ಕನಹಳ್ಳಿ ರಸ್ತೆ, ಹಣ್ಣಿನ ಮಾರುಕಟ್ಟೆ ಹತ್ತಿರ, ಎ.ಪಿ.ಎಂ.ಸಿ ಆವರಣದಲ್ಲಿ ಉತ್ತಮ ಗುಣಮಟ್ಟದ ಜಿ-9ತಳಿಯ ಅಂಗಾಂಶ ಕೃಷಿ ಬಾಳೆಯನ್ನು ಇಲಾಖಾ ದರದಲ್ಲಿ ಮಾರಾಟಮಾಡಲಾಗುತ್ತದೆ.
ಆಸಕ್ತ ರೈತಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬಾಳೆ ಸಸಿಗಳನ್ನು ಇಲಾಖೆ ದರದಲ್ಲಿ ಕೊಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕಾ ಅಧಿಕಾರಿ, ಅಂಗಾಂಶ ಕೃಷಿ ಬಾಳೆ, ಜೈವಿಕ ಕೇಂದ್ರ, ಎಪಿಎಂಸಿ ಈ ಬ್ಲಾಕ್, ಹಣ್ಣಿನ ಮಾರುಕಟ್ಟೆ ಹತ್ತಿರ ಮೊ.ಸಂ: 6360950904, 8192296196 ನ್ನು ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

