ದಾವಣಗೆರೆ : ಭಾರತ ಮತ್ತು ಥೈಲೆಂಡ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿ ಸುವ ಉದ್ದೇಶದಿಂದ ಥೈಲೆಂಡ್‌ನಲ್ಲಿ ಆಯೋಜಿಸ ಲಾಗಿದ್ದ ಭಾರತ–ಥೈಲೆಂಡ್ ಗ್ಲೋಬಲ್ ಯೋಗ ಫೆಸ್ಟಿವಲ್–2026ರಲ್ಲಿ ದಾವಣಗೆರೆ ಜಿಲ್ಲೆಯ ಯೋಗ ಶಿಕ್ಷಕಿ ಶ್ರೀಮತಿ ಗಂಗಾಂಬಿಕಾ ಇಟಗಿ ಅವರಿಗೆ ಯೋಗ ವಾಹಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂಡಿಯಾ–ಥೈ ಚೇಂಬರ್ ಆಫ್ ಕಾಮರ್ಸ್, ಬೆಂಗಳೂರಿನ ಗ್ಲೋಬಲ್ ಯೋಗ ಟೀಮ್, ಡಾ. ದೇವರಾಜ್ ಗುರೂಜಿ, ಯೋಗಾಚಾರ್ಯ ಎಸ್.ಎಸ್. ಹಿರೇಮಠ ಗುರೂಜಿ ಹಾಗೂ ಗದಗದ ಶಿವಾನಂದ ಯೋಗ ಕಾಲೇಜಿನ ಸಹಯೋಗದಲ್ಲಿ ಈ ಅಂತರರಾಷ್ಟ್ರೀಯ ಯೋಗ ಮಹೋತ್ಸವವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಥೈಲೆಂಡ್‌ನ ನಟಿ ಮಿಸ್ ಒನಾಸಸಿಪಾಟ್ ಮಾಮೀಕೆಟ್ರಾಟ್ ಅವರು ಶ್ರೀಮತಿ ಗಂಗಾಂಬಿಕಾ ಇಟಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
 ಪ್ರಶಸ್ತಿ ಸ್ವೀಕರಿಸಿದ ಎ. ರಾಘವೇಂದ್ರ ಅವರು ಮಾತನಾಡಿ, ಈ ಗೌರವಕ್ಕೆ ಯೋಗಾಚಾರ್ಯ ಎಸ್.ಎಸ್. ಹಿರೇಮಠ ಗುರೂಜಿ, ಕೆ. ರಮೇಶ್ ಗುರೂಜಿ, ಕೆ. ಚಿಂಬರರಾವ್, ಹರಗಿನದೋಣಿ ಸರ್ಕಾರಿ ಶಾಲೆಯ ಶಿಕ್ಷಕಿ ವನಜಾಕ್ಷಿ, ಯೋಗ ಶಿಕ್ಷಕಿ ಸೌಮ್ಯ ಹಾಗೂ ಎಸ್ಆರ್ಕೆ ಯೋಗ ಕೇಂದ್ರದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಹಕಾರವೇ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗದಗದ ಯೋಗಾ ಚಾರ್ಯ ಎಸ್.ಎಸ್. ಹಿರೇಮಠ ಗುರೂಜಿ, ಸುನೀಲ್ ಹಿರೇಮಠ, ಬೆಳಗಾವಿಯ ಸಂಗಮೇಶ್ ಹಾಗೂ ಕೊಪ್ಪಳ ಜಿಲ್ಲೆಯ ಕೆ. ಮರಿಸ್ವಾಮಿ ಅವರಿಗೂ ‘ಯೋಗ ವಾಹಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಡಾ. ದೇವರಾಜ್ ಗುರೂಜಿ ಮತ್ತು ಯೋಗಾಚಾರ್ಯ ಎಸ್.ಎಸ್. ಹಿರೇಮಠ ಗುರೂಜಿ, ಯೋಗವನ್ನು ಗ್ರಾಮೀಣ ಭಾಗದಿಂದ ಜಾಗತಿಕ ಮಟ್ಟಕ್ಕೆ ತಲುಪಿಸುವ ಸಂಕಲ್ಪ ಹೊಂದಿದ್ದು, ಪ್ರತಿವರ್ಷ ಇಂತಹ ಉತ್ಸವಗಳ ಮೂಲಕ ದೇಶದ ಪ್ರತಿಭೆಗಳನ್ನು ಅಂತರರಾಷ್ಟ್ರೀಯ ವೇದಿಕೆಗೆ ಪರಿಚಯಿಸಲಾಗುವುದು ಎಂದು ತಿಳಿಸಿದರು.
ಥೈಲೆಂಡ್‌ ಯೋಗ ವಿದ್ಯಾರ್ಥಿಗಳು ನಡೆಸಿಕೊಟ್ಟ ವಿವಿಧ ಯೋಗಾಸನ ಹಾಗೂ ಪ್ರಾಣಾಯಾಮ ಪ್ರದರ್ಶನಗಳು ಗಮನ ಸೆಳೆದವು.
ಈ ಯೋಗ ಉತ್ಸವವು ಉಭಯ ದೇಶಗಳ ನಡುವಿನ ಸಂಸ್ಕೃತಿ, ಆರೋಗ್ಯ ಮತ್ತು ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Leave a Reply

Your email address will not be published. Required fields are marked *