ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯ ವೇಳಾಪಟ್ಟಿಯನ್ನು ಹೊರಡಿಸಿದ್ದು, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನುಮೆರೇಷನ್ ನಮೂನೆಗಳ ಸಂಗ್ರಹ ಮತ್ತು ಗಣಕೀಕರಣ ಕಾರ್ಯದಲ್ಲಿ ನಿರತರಾಗಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲಿ ಜೂನ್‌ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಜೂನ್ 30 ರಿಂದ ಆಗಸ್ಟ್ 08 ರವರೆಗಿನ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಆಗಸ್ಟ್‌ 01 ರವರೆಗೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಎನುಮೆರೇಷನ್ ನಮೂನೆಗಳ ಹಂಚಿಕೆ ಮತ್ತು ಗಣಕೀಕರಣದ ಪ್ರಗತಿ ವಿವರಗಳು.

103-ಜಗಳೂರು ಕ್ಷೇತ್ರದಲ್ಲಿ ಒಟ್ಟು 2,00,836 ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 1,81,040 ನಮೂನೆಗಳನ್ನು ಗಣಕೀಕರಿಸಲಾಗಿದೆ. ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಸೇರಿದಂತೆ ಒಟ್ಟು 17,616 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 697 ಸಂಗ್ರಹವಾಗದ/ಗೈರು, 9,949 ಶಾಶ್ವತ ವಲಸೆ, 3,657 ಮರಣ, 3,264 ದ್ವಿಪ್ರತಿ  ಹಾಗೂ 49 ಇತರೆ ಪ್ರಕರಣಗಳು ಸೇರಿವೆ.

105-ಹರಿಹರ ಒಟ್ಟು 2,11,023 ನಮೂನೆಗಳ ಪೈಕಿ 1,90,397 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 20,312 ಒಟ್ಟು ಪ್ರಕರಣಗಳಲ್ಲಿ 3,452 ಗೈರು/ಸಂಗ್ರಹವಾಗದ, 6,905 ಶಾಶ್ವತ ವಲಸೆ, 4,739 ಮರಣ, 5,138 ದ್ವಿಪ್ರತಿ  ಮತ್ತು 78 ಇತರೆ ಪ್ರಕರಣಗಳಿವೆ.

106-ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ವಿತರಿಸಲಾದ 2,58,718 ನಮೂನೆಗಳಲ್ಲಿ 1,95,245 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 40,459 ಪ್ರಕರಣಗಳಲ್ಲಿ 6,144 ಗೈರು, 22,577 ಶಾಶ್ವತ ವಲಸೆ, 7,182 ಮರಣ, 4,426 ದ್ವಿಪ್ರತಿ  ಹಾಗೂ 130 ಇತರೆ ಪ್ರಕರಣಗಳು ನಮೂದಾಗಿವೆ.

107-ದಾವಣಗೆರೆ ದಕ್ಷಿಣ ಒಟ್ಟು 2,27,996 ನಮೂನೆಗಳಲ್ಲಿ 1,73,278 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 50,314  ಪ್ರಕರಣಗಳ ಪೈಕಿ 9,072 ಗೈರು, 27,376 ಶಾಶ್ವತ ವಲಸೆ, 6,506 ಮರಣ, 7,057 ದ್ವಿಪ್ರತಿ  ಹಾಗೂ 303 ಇತರೆ ಪ್ರಕರಣಗಳನ್ನು ಗುರುತಿಸಲಾಗಿದೆ.

108-ಮಾಯಕೊಂಡ: ಹಂಚಿಕೆಯಾದ 1,97,048 ನಮೂನೆಗಳ ಪೈಕಿ 1,84,632 ನಮೂನೆಗಳು ಗಣಕೀಕರಿಸಲಾಗಿದೆ. ಒಟ್ಟು 12,416 ಪ್ರಕರಣಗಳಲ್ಲಿ 262 ಗೈರು, 5,983 ಶಾಶ್ವತ ವಲಸೆ, 4,172 ಮರಣ, 1,958 ದ್ವಿಪ್ರತಿ ಮತ್ತು 41 ಇತರೆ ಪ್ರಕರಣಗಳು ಒಳಗೊಂಡಿವೆ.

109-ಚನ್ನಗಿರಿ: ವಿತರಿಸಿದ 2,03,628 ನಮೂನೆಗಳಲ್ಲಿ 1,85,561 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 17,378 ಪ್ರಕರಣಗಳಲ್ಲಿ 591 ಗೈರು, 9,803 ಶಾಶ್ವತ ವಲಸೆ, 3,616 ಮರಣ, 3,330 ದ್ವಿಪ್ರತಿ  ಹಾಗೂ 38 ಇತರೆ ಪ್ರಕರಣಗಳು ಸೇರಿವೆ.

110-ಹೊನ್ನಾಳಿ: ಕ್ಷೇತ್ರದಲ್ಲಿ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,83,458 ನಮೂನೆಗಳನ್ನು ಗಣಕೀಕರಿಸಲಾಗಿದೆ. ಒಟ್ಟು 16,575 ಪ್ರಕರಣಗಳ ಪೈಕಿ 1,037 ಗೈರು, 9,524 ಶಾಶ್ವತ ವಲಸೆ, 4,111 ಮರಣ, 1,840 ದ್ವಿಪ್ರತಿ ಹಾಗೂ 63 ಇತರೆ ಪ್ರಕರಣಗಳು ಪತ್ತೆಯಾಗಿವೆ.

ಸಮಗ್ರವಾಗಿ ಜಿಲ್ಲೆಯಾದ್ಯಂತ ವಿತರಿಸಲಾದ ಒಟ್ಟು 14,99,282 ಎನುಮೆರೇಷನ್ ನಮೂನೆಗಳ ಪೈಕಿ ಈವರೆಗೆ 12,93,611 ನಮೂನೆಗಳನ್ನು ಗಣಕೀಕರಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಒಟ್ಟು 1,75,070 ಸ್ಥಳಾಂತರ/ಮರಣ/ದ್ವಿಪತಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 21,255 ಗೈರು/ಸಂಗ್ರಹವಾಗದ, 92,117 ಶಾಶ್ವತ ವಲಸೆ, 33,983  ಮರಣ, 27,013 ದ್ವಿಪ್ರತಿ ಹಾಗೂ 702 ಇತರೆ ಪ್ರಕರಣಗಳು ಸೇರಿವೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *