ಭಾರತ ದೇಶವು ಜಗತ್ತಿನ ಹೆಚ್ಚು ಯುವ ಸಮುದಾಯವನ್ನು ಹೊಂದಿದ ದೇಶ. ಯಾವ ದೇಶದ ಯುವ ಸಮುದಾಯ ನಶಾ ಮುಕ್ತರಾಗಿರುತ್ತದೊ ಆ ದೇಶ ಅತ್ಯಂತ ಸದೃಢವಾಗಿರುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪೆÇ್ರ. ಅಶೋಕ್ ವಿ. ಪಾಳೇದ್ ಅವರು ತಿಳಿಸಿದರು.
ಮೈ ಭಾರತ್ ಕೇಂದ್ರ ದಾವಣಗೆರೆ-ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಮತ್ತು ಎ.ವಿ. ಕಮಲಮ್ಮ ಮಹಿಳಾ ಕಾಲೇಜು, ದಾವಣಗೆರೆ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡ “ನಶಾ ಮುಕ್ತ ಯುವ ವಿಕಸಿತ್ ಭಾರತ್” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


1970-80 ರ ದಶಕದಲ್ಲಿ ನಮ್ಮ ನಾಡಿನ ವಿಜಯ ಮಹಾಂತೇಶ್ ಸ್ವಾಮಿಗಳು ಜಗತ್ತಿನ ಸುಮಾರು 60 ದೇಶಗಳನ್ನು ಸುತ್ತಿ ತಮ್ಮ ಜೋಳಿಗೆಯಲ್ಲಿ ನಿಮ್ಮ ವ್ಯಸನಗಳನ್ನು ಹಾಕಿ, ಅದರಿಂದ ಹೊರಬಂದು ಆರೋಗ್ಯ ಪೂರ್ಣವಾಗಿ ಬದುಕು ಕಟ್ಟಿಕೊಳ್ಳಿ ಎಂದು ದೊಡ್ಡ ಕ್ರಾಂತಿ ಮಾಡಿದ್ದರು. ಅವರ ಜನ್ಮದಿನದ ಪ್ರಯುಕ್ತ ಕರ್ನಾಟಕ ಸರ್ಕಾರ ನಶಾ ಮುಕ್ತ ನಾಡು ಕಟ್ಟಲು ಹೊಸ ಯೋಜನೆಗಳನ್ನು ರೂಪಿಸಿತು. ಅದೇ ಮಾದರಿಯಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ಈ ವರ್ಷ “ನಶಾ ಮುಕ್ತ ಯುವ ವಿಕಸಿತ್ ಭಾರತ” ಶೀರ್ಷಿಕೆ ಅಡಿಯಲ್ಲಿ ದೇಶದ ತುಂಬಾ ಕಾರ್ಯಗಳನ್ನು ಏರ್ಪಡಿಸಿದೆ. ಇದರ ಕಾರ್ಯಕ್ರಮದಲ್ಲಿ ಅನೇಕ ಸ್ಪರ್ಧೆಗಳನ್ನು ಇಟ್ಟು, ಅಲ್ಲಿ ಯುವಕರನ್ನು ಒಟ್ಟು ಗೂಡಿಸಿ, ಅವರಲ್ಲಿ ಮಾದಕ ವ್ಯಸನಗಳ ಬಗ್ಗೆ ಜಾಗ್ರತೆ ಮೂಡಿಸಿ, ಅವರನ್ನು ಸದೃಢರನ್ನಾಗಿಸುವ ಗುರಿ ಇಟ್ಟುಕೊಂಡಿದೆ. ಆ ನಿಟ್ಟಿನಲ್ಲಿ ಇಂದು ನಮ್ಮ ದಾವಣಗೆರೆ ಜಿಲ್ಲೆಯ ಮೈ ಭಾರತ್ ಕೇಂದ್ರ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾದ ನಿಮಗೆ ಶುಭಹಾರೈಕೆಗಳು. ನೀವು ಉತ್ತಮವಾದ ಆಹಾರ ಸೇವಿಸಿ, ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಸದೃಢರಾಗಬೇಕು. ನಶೆಯಲ್ಲಿ ಮುಳುಗಿದರೆ ಬದುಕು ಅತ್ಯಂತ ಹೀನ ಸ್ಥಿತಿಗೆ ತಲುಪುತ್ತದೆ. ನಮ್ಮ ದೇಶದ ಶಕ್ತಿ ಯುವ ಜನಾಂಗವಾಗಿರುವ ಕಾರಣ, ನೀವೆಲ್ಲರೂ ನಿಮ್ಮ ಭವಿಷ್ಯಕ್ಕಾಗಿ ಮತ್ತು ದೇಶದ ಪ್ರಗತಿಗಾಗಿ ವ್ಯಸನ ಕ್ಕೆ ತುತ್ತಾಗಬಾರದು. ಆ ಮೂಲಕ ದೇಶದ ಹಿತಾಸಕ್ತಿ ಕಾಪಾಡಬೇಕು ಎಂದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾವಣಗೆರೆ ಜಿಲ್ಲಾ ಯುವ ಅಧಿಕಾರಿಗಳಾದ ಕು|| ಶರಣ್ಯ ಬಿ. ಅವರು ಪಠ್ಯ ಮಾತ್ರ ನಿಮ್ಮ ಬದುಕಿನಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲು ಸಾಲದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗಿಯಾದಾಗ ನಿಮ್ಮ ಮಾನಸಿಕ ಮತ್ತು ಬೌದ್ಧಿಕ ಸ್ಥಿತಿ ಚೆನ್ನಾಗಿ ಇರುತ್ತದೆ. ಆ ಮೂಲಕ ನೀವು ಉತ್ತಮ ಸ್ಥಾನವನ್ನು ತಲುಪಬಹುದು. ನಿಮ್ಮ ಶಕ್ತಿಯನ್ನು ದೇಶದ ಏಳಿಗೆಗೆ ಬಳಸಿ ಸಾರ್ಥಕತೆಯಿಂದ ಬಾಳಿ ಎಂದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಎ.ವಿ. ಕಮಲಮ್ಮ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ. ಅನಿತಾ ಕುಮಾರಿ ಜೆ ಅವರು ದೇಶದ ಪ್ರತಿ ವ್ಯಕ್ತಿ ಮಾನಸಿಕವಾಗಿ ಸಶಕ್ತರಾಗಿದ್ದರೆ ಮಾತ್ರ ನಾವು ನಶೆ/ಮಾದಕ ವ್ಯಸನದಿಂದ ದೂರವಿರಲು ಸಾಧ್ಯ. ಮಾನಸಿಕವಾಗಿ ಖಿನ್ನತೆಗೆ ಒಳಗಾದವರು ಹೆಚ್ಚು ವ್ಯಸನಗಳಿಗೆ ಒಳಗಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ನೀವೆಲ್ಲರೂ ಕೇವಲ ಸ್ಪರ್ಧೆಯಲ್ಲಿ ಭಾಗಿಯಾದರೆ ಸಾಲದು, ಅದರಾಚೆಗೆ ನೀವು ಮತ್ತು ನಿಮ್ಮ ಸುತ್ತಲಿನ ಸಮಾಜವನ್ನು ನಶಾ ಮುಕ್ತ ಗೊಳಿಸಲು ಶ್ರಮಿಸಬೇಕು. ಹಾಗೆ ಆದರೆ ಮಾತ್ರ ಈ ಕಾರ್ಯಕ್ರಮಗಳ ಯಶಸ್ಸು ಸಾಧ್ಯವಾಗುತ್ತದೆ ಎಂದರು. ಐಕ್ಯೂಎಸಿ ಸಂಯೋಜಕರಾದ ಡಾ. ರುದ್ರೇಶ್ ಬಿ.ಜೆ ಕಾರ್ಯಕ್ರಮದಲ್ಲಿ ಉಪಸ್ಥಿತಿ ಹೊಂದಿದ್ದರು.
ಕು|| ಜಯಲಕ್ಷ್ಮಿ ಪ್ರಾರ್ಥಿಸಿದರು.
ಎನ್.ಎಸ್.ಎಸ್ ಅಧಿಕಾರಿ-1 ಡಾ. ವಿಶ್ವನಾಥ ಪಿ ಸ್ವಾಗತಿಸಿದರು. ಎನ್.ಎಸ್.ಎಸ್ ಅಧಿಕಾರಿ-2 ಡಾ. ಕವಿತ ಆರ್.ಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಾಂಸ್ಕøತಿಕ ಸಮಿತಿ ಸಂಯೋಜಕ ಡಾ. ಲೋಹಿತ್ ಹೆಚ್.ಎಂ. ವಂದಿಸಿದರು. ಕು|| ದೀಕ್ಷಿತಾ ಮತ್ತು ಕು|| ವಿನೋದ ಆರ್. ಆರ್. ನಿರೂಪಿಸಿದರು.

Leave a Reply

Your email address will not be published. Required fields are marked *