ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯ ವೇಳಾಪಟ್ಟಿಯನ್ನು ಹೊರಡಿಸಿದ್ದು, ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನುಮೆರೇಷನ್ ನಮೂನೆಗಳ ಸಂಗ್ರಹ ಮತ್ತು ಗಣಕೀಕರಣ ಕಾರ್ಯದಲ್ಲಿ ನಿರತರಾಗಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಜೂನ್ 16 ರ ವೇಳೆಗೆ ಒಟ್ಟು 14,99,282 ಮತದಾರರಿದ್ದು, ಜೂನ್ 30 ರಿಂದ ಆಗಸ್ಟ್ 08 ರವರೆಗಿನ ಅವಧಿಯಲ್ಲಿ ಸಂಗ್ರಹಿಸಿದ ನಮೂನೆಗಳ ಗಣಕೀಕರಣ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಆಗಸ್ಟ್ 03 ರವರೆಗೆ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಎನುಮೆರೇಷನ್ ನಮೂನೆಗಳ ಹಂಚಿಕೆ ಮತ್ತು ಗಣಕೀಕರಣದ ಪ್ರಗತಿ ವಿವರಗಳು.
103–ಜಗಳೂರು ಕ್ಷೇತ್ರದಲ್ಲಿ ಒಟ್ಟು 2,00,836 ನಮೂನೆಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಪೈಕಿ 1,81,132 ನಮೂನೆಗಳನ್ನು ಗಣಕೀಕರಿಸಲಾಗಿದೆ. ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಸೇರಿದಂತೆ ಒಟ್ಟು 18,042 ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 793 ಸಂಗ್ರಹವಾಗದ/ಗೈರು, 10,243 ಶಾಶ್ವತ ವಲಸೆ, 3,676 ಮರಣ, 3,280 ದ್ವಿಪ್ರತಿ ಹಾಗೂ 50 ಇತರೆ ಪ್ರಕರಣಗಳು ಸೇರಿವೆ.
105–ಹರಿಹರ ಒಟ್ಟು 2,11,023 ನಮೂನೆಗಳ ಪೈಕಿ 1,90,279 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 20,741 ಒಟ್ಟು ಪ್ರಕರಣಗಳಲ್ಲಿ 3,516 ಗೈರು/ಸಂಗ್ರಹವಾಗದ, 7,223 ಶಾಶ್ವತ ವಲಸೆ, 4,753 ಮರಣ, 5,171 ದ್ವಿಪ್ರತಿ ಮತ್ತು 78 ಇತರೆ ಪ್ರಕರಣಗಳಿವೆ.
106-ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ವಿತರಿಸಲಾದ 2,58,718 ನಮೂನೆಗಳಲ್ಲಿ 1,96,898 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 49,435 ಪ್ರಕರಣಗಳಲ್ಲಿ 9,885 ಗೈರು, 27,120 ಶಾಶ್ವತ ವಲಸೆ, 7,363 ಮರಣ, 4,685 ದ್ವಿಪ್ರತಿ ಹಾಗೂ 382 ಇತರೆ ಪ್ರಕರಣಗಳು ನಮೂದಾಗಿವೆ.

107-ದಾವಣಗೆರೆ ದಕ್ಷಿಣ ಒಟ್ಟು 2,27,996 ನಮೂನೆಗಳಲ್ಲಿ 1,73,801 ನಮೂನೆಗಳನ್ನು ಗಣಕೀಕರಿಸಲಾಗಿದೆ. ಗುರುತಿಸಲಾದ 52,874 ಪ್ರಕರಣಗಳ ಪೈಕಿ 9,972 ಗೈರು, 28,744 ಶಾಶ್ವತ ವಲಸೆ, 6,589 ಮರಣ, 7,197 ದ್ವಿಪ್ರತಿ ಹಾಗೂ 372 ಇತರೆ ಪ್ರಕರಣಗಳನ್ನು ಗುರುತಿಸಲಾಗಿದೆ.
108–ಮಾಯಕೊಂಡ: ಹಂಚಿಕೆಯಾದ 1,97,048 ನಮೂನೆಗಳ ಪೈಕಿ 1,84,627 ನಮೂನೆಗಳು ಗಣಕೀಕರಿಸಲಾಗಿದೆ. ಒಟ್ಟು 12,421 ಪ್ರಕರಣಗಳಲ್ಲಿ 263 ಗೈರು, 5,986 ಶಾಶ್ವತ ವಲಸೆ, 4,169 ಮರಣ, 1,962 ದ್ವಿಪ್ರತಿ ಮತ್ತು 41 ಇತರೆ ಪ್ರಕರಣಗಳು ಒಳಗೊಂಡಿವೆ.
109–ಚನ್ನಗಿರಿ: ವಿತರಿಸಿದ 2,03,628 ನಮೂನೆಗಳಲ್ಲಿ 1,85,699 ನಮೂನೆಗಳ ಗಣಕೀಕರಿಸಲಾಗಿದೆ. ಗುರುತಿಸಲಾದ 17,695 ಪ್ರಕರಣಗಳಲ್ಲಿ 605 ಗೈರು, 10,033 ಶಾಶ್ವತ ವಲಸೆ, 3,643 ಮರಣ, 3,375 ದ್ವಿಪ್ರತಿ ಹಾಗೂ 39 ಇತರೆ ಪ್ರಕರಣಗಳು ಸೇರಿವೆ.
110–ಹೊನ್ನಾಳಿ: ಕ್ಷೇತ್ರದಲ್ಲಿ 2,00,033 ನಮೂನೆಗಳನ್ನು ವಿತರಿಸಲಾಗಿದ್ದು, 1,83,444 ನಮೂನೆಗಳನ್ನು ಗಣಕೀಕರಿಸಲಾಗಿದೆ. ಒಟ್ಟು 16,575 ಪ್ರಕರಣಗಳ ಪೈಕಿ 1,034 ಗೈರು, 9,522 ಶಾಶ್ವತ ವಲಸೆ, 4,123 ಮರಣ, 1,847 ದ್ವಿಪ್ರತಿ ಹಾಗೂ 63 ಇತರೆ ಪ್ರಕರಣಗಳು ಪತ್ತೆಯಾಗಿವೆ.
ಸಮಗ್ರವಾಗಿ ಜಿಲ್ಲೆಯಾದ್ಯಂತ ವಿತರಿಸಲಾದ ಒಟ್ಟು 14,99,282 ಎನುಮೆರೇಷನ್ ನಮೂನೆಗಳ ಪೈಕಿ ಈವರೆಗೆ 12,95,880 ನಮೂನೆಗಳನ್ನು ಗಣಕೀಕರಿಸಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಒಟ್ಟು 1,87,797 ಸ್ಥಳಾಂತರ/ಮರಣ/ದ್ವಿಪತಿ ಪ್ರಕರಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 26,068 ಗೈರು/ಸಂಗ್ರಹವಾಗದ, 98,871 ಶಾಶ್ವತ ವಲಸೆ, 34,316 ಮರಣ, 27,517 ದ್ವಿಪ್ರತಿ ಹಾಗೂ 1,025 ಇತರೆ ಪ್ರಕರಣಗಳು ಸೇರಿವೆ ಎಂದು ದಾವಣಗೆರೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ಜಿ ಎಂ ಅವರು ತಿಳಿಸಿದ್ದಾರೆ.
