ಹೊನ್ನಾಳಿ : ಅ‌10: ಹೊನ್ನಾಳಿ ತಾಲೂಕು ವ್ಯವಸಾಯ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷರ ಗಾದೆಗೆ ಇಂದು ಚುನಾವಣೆ ನಡೆಯಿತು.
ಕೆ,ಜೆ ಶಿವನಗೌಡ್ರುರವರು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿಯನ್ನು ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಬೇರೆ ಯಾವ ನಿರ್ದೇಶಕರು ಉಪಾಧ್ಯಕ್ಷರ ಗಾದೆಗೆ ನಾಮಪತ್ರ ಅರ್ಜಿ ಸಲ್ಲಿಸದೆ ಇರುವ ಹಿನ್ನೆಲೆಯಲ್ಲಿ ಬಿಜಿ ಶಿವನಗೌಡ ಅವರನ್ನು ‌ಅವಿರೋಧ ಆಯ್ಕೆ ಮಾಡಲಾಯಿತು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಗಳಾದ ಜಿ ಎಂ ಮುರುಗೇಶಪ್ಪರವರು ಘೋಷಣೆ ಮಾಡಿದರು.

ಸಂಘದ ಅಧ್ಯಕ್ಷ ರೇವಣಪ್ಪ ಕೊಲಂಬಿ,ನಿರ್ದೇಶಕರಾದ ಬೀರಗನಹಳ್ಳಿ ಬಸವನಗೌಡ್ರು. ಶಾಸಕ ಡಿ,ಜಿ ಶಾಂತನಗೌಡ್ರು, ಜಿ,ಹೆಚ್ ತಮ್ಮಣ್ಣ ,ಮರುಳಸಿದ್ದಪ್ಪ, ಕಾಯಿ ಬಸವರಾಜ್ ,ಅರಕೆರೆ ಮನು. ಕುಳಗಟ್ಟೆ ರಂಗನಾಥ್. ಹನಗವಾಡಿ ಶೋಭಾ. ಮಾಸಡಿ ನಾಗರತ್ನಮ್ಮ. ತರಗನಹಳ್ಳಿ ಟಿ,ಜಿ,ರಮೇಶಗೌಡ. ಬಿ ಎಲ್ ಕುಮಾರ ಸ್ವಾಮಿ. ರವಿಕುಮಾರ.ರಾಜು. ಉಪಸ್ಥಿತರಿದ್ದರು. ಚುನಾವಣೆ ಅಧಿಕಾರಿ ಹಾಗೂ ಸಂಘದ ಕಾರ್ಯನಿರ್ವಹಣಾಧಿಕಾರಿ ಮುರುಗೇಶಪ್ಪ. ಕಾರ್ಯನಿರ್ವಹಿಸಿದರು. ಗೋಪಿ. ಸುರೇಶ.ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು ಭಾಗಿಯಾಗಿ ನೂತನ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.

Leave a Reply

Your email address will not be published. Required fields are marked *