ದಾವಣಗೆರೆ, ಆಗಸ್ಟ್ 28: ಸಮಾಜದಲ್ಲಿ ಸಮಾನತೆ, ಸೌಹಾರ್ದತೆ ಮತ್ತು ಸ್ವಸ್ಥ ವಾತಾವರಣ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬರಲ್ಲೂ ತ್ಯಾಗ ಹಾಗೂ ಸೇವಾ ಮನೋಭಾವ ಅತ್ಯಗತ್ಯ , ಮಹಾತ್ಮರು ಹಾಗೂ ದಾರ್ಶನಿಕರು ತೋರಿಸಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಜಿಲ್ಲಾಧಿಕಾರಿ ಜಿ. ಎಂ ಗಂಗಾಧರಸ್ವಾಮಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಶ್ರೀ ನುಲಿಯ ಚಂದಯ್ಯ ಜಯಂತಿ ಯಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮಹಾನ್ ಚೇತನಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳು, ನುಲಿಯ ಚಂದಯ್ಯನವರು ಸೇರಿದಂತೆ ಸರ್ಕಾರದಿಂದ ಆಚರಿಸಲಾಗುವ 34 ಜಯಂತಿಗಳು ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ ಮುಂತಾದ ರಾಷ್ಟ್ರೀಯ ನಾಯಕರ ಜಯಂತಿಗಳ ಮುಖ್ಯ ಉದ್ದೇಶ ಸಾಮಾಜಿಕ ಕಳಕಳಿ, ಸಮಾನತೆಯ ಹೋರಾಟ ಮತ್ತು ಕಾಯಕ ತತ್ವವನ್ನು ಪಾಲಿಸುವುದು ಹಾಗೂ ನಾವು ಮಾಡುವ ಕೆಲಸದಲ್ಲಿ ನಿಸ್ವಾರ್ಥತೆಯನ್ನು ಅಳವಡಿಸಿಕೊಳ್ಳುವುದೇ ನಿಜವಾದ ಕಾಯಕ. ಮನುಷ್ಯನಿಗೆ ತ್ಯಾಗ ಮತ್ತು ಸೇವೆ ಅತ್ಯಂತ ಮುಖ್ಯವಾದ ಗುಣಗಳು. ಇವು ರಕ್ತಗತವಾಗಿ ಬಾರದಿದ್ದರೆ ಸಮಾಜದಿಂದ ಗೌರವ ಸಿಗಲು ಸಾಧ್ಯವಿಲ್ಲ ಎಂದರು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಸ್ವಾರ್ಥ, ದ್ವೇಷ ಮತ್ತು ಅಸೂಯೆ ಹೆಚ್ಚಾಗುತ್ತಿದೆ. ಕೇವಲ ಮಾತುಗಳಿಗμÉ್ಟೀ ಸೀಮಿತವಾಗದೆ ಕಾರ್ಯರೂಪಕ್ಕೆ ತರುವುದು ಕಡಿಮೆಯಾಗುತ್ತಿದೆ. ಕುಟುಂಬಗಳಲ್ಲಿ ಹಾಗೂ ಸಂಬಂಧಗಳಲ್ಲಿ ಸ್ವಾರ್ಥ ಹೆಚ್ಚಾಗುತ್ತಿರುವುದು ಸಮಾಜದ ಅಶಾಂತಿಗೆ ಮೂಲ ಕಾರಣವಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರೂ ತಮ್ಮ ಸಣ್ಣ ಸಣ್ಣ ಸ್ವಾರ್ಥಗಳನ್ನು ಬದಿಗಿಟ್ಟು ಸಮಾನ ದೃಷ್ಟಿಯಿಂದ ಸಮಾಜವನ್ನು ನೋಡಬೇಕಿದೆ. ಬಡವರು, ಹಿಂದುಳಿದವರು ಹಾಗೂ ಅವಕಾಶವಂಚಿತರಿಗೆ ಸಹಾಯ ಮಾಡುವ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಹೇಳಿದರು.

ಸಮಾಜ ಸೇವೆ ಮಾಡಲು ಅಧಿಕಾರವೇ ಬೇಕೆಂದಿಲ್ಲ. ಪರಿಸರ ಕಾಳಜಿ, ಗಿಡ-ಮರಗಳು, ಜಲ, ಪಕ್ಷಿಗಳು ಹಾಗೂ ಪ್ರಾಣಿಗಳ ರಕ್ಷಣೆ ಮಾಡುವುದು ಕೂಡ ಸೇವೆಯ ಭಾಗವೇ ಆಗಿದೆ,
ಸಮಾಜದ ಬದಲಾವಣೆ ಒಂದೇ ದಿನದಲ್ಲಿ ಸಾಧ್ಯವಿಲ್ಲ. ಪ್ರತಿಯೊಬ್ಬರೂ ನಿರಂತರವಾಗಿ ಸಣ್ಣ ಸಣ್ಣ ಮಾರ್ಗಗಳ ಮೂಲಕ ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಸಾಗಿದರೆ, ಅದು ಸಮುದ್ರದಂತೆ ವಿಶಾಲವಾಗಿ ಸ್ವಸ್ಥ ಹಾಗೂ ಸಮಾನತೆಯ ಸಮಾಜ ನಿರ್ಮಾಣಕ್ಕೆ ದಾರಿಯಾಗುತ್ತದೆ ಎಂದರು.
ದೂಡಾ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಜಿಲ್ಲಾಧ್ಯಕ್ಷ ಎ. ನಾಗರಾಜ್, ಶ್ರೀ ನುಲಿಯ ಚಂದಯ್ಯ ಸಮಾಜದ ಮುಖಂಡ ಸಂತೋμï ಕುಮಾರ್, ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
