Author: Aravind S

ಫಸಲ್ ಬಿಮಾ ಯೋಜನೆ, ಬೆಳೆ ಕಟಾವು ಪ್ರಯೋಗದ ಲೋಪ ಸರಿಪಡಿಸಲು ಸೂಚನೆ

ಮುಂಗಾರು ಹಂಗಾಮಿನ ಫಸಲ್ ಬಿಮಾ ಯೋಜನೆಯಡಿ ಬೆಳೆ ಕಟಾವು ಪ್ರಾಯೋಗಿಕ ಪರೀಕ್ಷೆಯಲ್ಲಿ ಕೆಲವು ವ್ಯತ್ಯಾಸಗಳಾಗಿದ್ದು ಇವುಗಳನ್ನು ಸರಿಪಡಿಸಿ ರೈತರಿಗೆ ಬೆಳೆ ವಿಮಾ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ವಿಮಾ ಕಂಪನಿ ಅಧಿಕಾರಿಗಳು,…

ರೈತರ ಬೆಳೆ ಪರಿಹಾರ ಬಿಡುಗಡೆ, ಸಹಾಯಕ್ಕೆ ಸಹಾಯವಾಣಿ

2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಂಭವಿಸಿರುತ್ತದೆ. ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡಿದ್ದು ರೈತರಿಗೆ ಪರಿಹಾರ ಬಾರದಿದ್ದಲ್ಲಿ ಮಾಹಿತಿ ನೀಡಲು ದಾವಣಗೆರೆ ಉಪವಿಭಾಗದ ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭವಾಗಿದ್ದು, ದಾವಣಗೆರೆ ಹರಿಹರ, ಜಗಳೂರು ತಾಲ್ಲೂಕುಗಳ…

ಎಸ್ ಎಸ್ ಎಲ್ ಸಿ & ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪೊಲೀಸ್ ಸಿಬ್ಬಂದಿ ಮಕ್ಕಳಿಗೆ ಸನ್ಮಾನಿಸಿದ ಪೊಲೀಸ್ ಇನ್ಸ್ಪೆಕ್ಟರ್ ರವಿNE

ನ್ಯಾಮತಿ;ಪಟ್ಟಣದಲ್ಲಿರುವ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕರಬಸಪ್ಪ ತಳವಾರ್ ಇವರ ಮಗ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡ 88/- ಹಾಗೂ ಮಪಿಸಿ-58 ಕವಿತಾ ಬಾಯಿ ಅವರ ಮಗ ವಿಶಾಲ ಆರ್ ನಾಯಕ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ…

ಶ್ರೀ ಬಸವೇಶ್ವರರ ಜಯಂತಿ ಆಚರಣೆ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪುಷ್ಪ ನಮನ.

ದಾವಣಗೆರೆ,ಮೇ.10, ವಿಶ್ವಗುರು ಹಾಗೂ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರು ವರ್ಗರಹಿತ, ಜಾತಿ ರಹಿತ ಸಮಾಜ ನಿರ್ಮಾಣ ಮಾಡುವ ಮೂಲಕ ಸಾಮಾಜಿಕ ಹರಿಕಾರರಾಗಿ ದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ…

ನ್ಯಾಮತಿ ಕೊಡಿಕೊಪ್ಪ ಗ್ರಾಮದಲ್ಲಿ ಬಸವೇಶ್ವರ ಜಯಂತೋತ್ಸವ

ನ್ಯಾಮತಿ: ಸಮೀಪದಲ್ಲಿರುವ ಕೋಡಿಕೊಪ್ಪ ಗ್ರಾಮದಲ್ಲಿ ಇಂದು ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವದ ಅಂಗವಾಗಿ ಗ್ರಾಮದ ಮುರುಡಬಸವೇಶ್ವರ ದೇವರಿಗೆ ರುದ್ರಾಭಿಷೇಕ ಬಂದಂತ ಭಕ್ತಾದಿಗಳಿಗೆ ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರಗಿತು. ತದನಂತರ ಮಧ್ಯಾಹ್ನ 4 ಗಂಟೆಗೆ ಸರಿಯಾಗಿ ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಟ್ರ್ಯಾಕ್ಟರ್ ಗೆ…

ಗೋವಿನಕೋವಿ ಬಸವ ಬಳಗದ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವ.

ನ್ಯಾಮತಿ ತಾಲೂಕು ಗೋವಿನಕೋವಿ ಗ್ರಾಮದ ಬಸವ ಬಳಗದ ವತಿಯಿಂದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತೋತ್ಸವದ ಅಂಗವಾಗಿ 20 ಅಡಿವುಳ್ಳ ಬಸವೇಶ್ವರ ಭಾವಚಿತ್ರವನ್ನ ನಿಲ್ಲಿಸಿ ಪೂಜಾ ಕೈಂಕರ್ಯ ನೆರವೇರಿಸಿ ಜಯಂತೋತ್ಸವ ಆಚರಿಸಲಾಯಿತು.

ರೈತರಿಗೆ 2023 ರ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಬಿಡುಗಡೆ, 82928 ರೈತರಿಗೆ ಒಟ್ಟು ರೂ.60.23 ಕೋಟಿ ಮೊದಲ ಹಾಗೂ ಎರಡನೇ ಕಂತಿನಲ್ಲಿ ಪಾವತಿ. ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ

ಕಳೆದ ವರ್ಷ 2023 ರ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ 82928 ರೈತರಿಗೆ ಮೊದಲ ಕಂತಿನಲ್ಲಿ ಗರಿಷ್ಠ ರೂ.2000 ವರೆಗೆ ಹಾಗೂ ಈಗ, ಬಾಕಿ ಇದ್ದ ರೈತರಿಗೆ ಒಟ್ಟು ರೂ.60,23,46,380 ಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ…

ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

ದಾವಣಗೆರೆ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಮೇ.9 ರಂದು ಹೊನ್ನಾಳಿ ತಾಲ್ಲೂಕು ಪ್ರವಾಸ ಕೈಗೊಳ್ಳಲಿದ್ದು ಸಾರ್ವಜನಿಕರು ತಮ್ಮ ದೂರುಗಳನ್ನು ಸಲ್ಲಿಸಬಹುದು..ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್ ಕೌಲಾಪೂರೆ ಅವರು ಮೇ.9 ರಂದು ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ, ಬೆಳಿಗ್ಗೆ 11.30 ರಿಂದ ಮಧ್ಯಾಹ್ನ…

ಬಸವ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ

ಜಿಲ್ಲಾಡಳಿತ ವತಿಯಿಂದ ಮೇ.10 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿ ಬಸವ ಜಯಂತಿ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ನೀತಿಸಂಹಿತೆ ಹಿನ್ನಲೆಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕøತಿಕ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಗಳನಾಯ್ಕ್ ತಿಳಿಸಿದ್ದಾರೆ.

ದ್ವೈವಾರ್ಷಿಕ ವಿಧಾನ ಪರಿಷತ್ ಚುನಾವಣೆ,ದಾವಣಗೆರೆ ಜಿಲ್ಲೆಯಲ್ಲಿ ಎರಡು ಶಿಕ್ಷಕರ ಕ್ಷೇತ್ರ, ಒಂದು ಪದವೀಧರ ಕ್ಷೇತ್ರ ಮೇ 9 ರಿಂದ ನಾಮಪತ್ರ ಸಲ್ಲಿಕೆ ಆರಂಭ

ಚುನಾವಣಾ ಆಯೋಗವು ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದ್ದು ದಾವಣಗೆರೆ ಜಿಲ್ಲೆ ಎರಡು ಶಿಕ್ಷಕರ ಕ್ಷೇತ್ರ ಹಾಗೂ ಒಂದು ಪದವೀಧರರ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿದ್ದು ಮೇ 9 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ…