ಕಿರುಚಿತ್ರ ಸ್ಪರ್ಧೆ

ಜ. 08 ರಂದು ಅಮೃತವಾಹಿನಿ ತೆರೆಗೆ

*ನರೇಂದ್ರ ಬಾಬುರವರ ನಿರ್ದೇಶನ

  • ಎಚ್. ಎಸ್. ವೆಂಕಟೇಶಮೂರ್ತಿ-ವೈದ್ಯ-ಸುಪ್ರಿಯಾ ರಾವ್‍ರವರ

ಅಭಿನಯ

ಶಿವಮೊಗ್ಗ, ಜ. 07
ನಾಡಿನ ಹಿರಿಯ ಸಾಹಿತಿ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರಾಗಿ ಹಾಗೂ ತಮ್ಮ ಚೊಚ್ಚಲ ನಿರ್ದೇಶನದ ಹಸಿರು ರಿಬ್ಬನ್ ಚಿತ್ರದ ಸಾಹಿತ್ಯ
(ಸಕ್ಕರೆಯ ಪಾಕದಲಿ)ಕ್ಕೆ ಪ್ರತಿಷ್ಟಿತ ಫಿಲಂ ಫೇರ್ ಪ್ರಶಸ್ತಿಗೆ ಭಾಜನರಾಗಿರುವ ಡಾ.
ಹೆಚ್.ಎಸ್. ವೆಂಕಟೇಶಮೂರ್ತಿ ಈಗ ನಾಯಕ ನಟನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.
ಇವರ ಅಭಿನಯದ ಅಮೃತವಾಹಿನಿ ಸಿನಿಮಾ ರಾಜ್ಯದಾದ್ಯಂತ ಜ. 08ರಂದು ತೆರೆಗೆ
ಬರುತ್ತಿದೆ. ಶಿವಮೊಗ್ಗೆಯ ಭಾರತ್ ಸಿನಿಮಾಸ್‍ನಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಈ ಚಿತ್ರ
ಪ್ರದರ್ಶನ ಕಾಣಲಿದೆ ಎಂದು ಶಿವಮೊಗ್ಗ ಬೆಳ್ಳಿಮಂಡಲ, ಅಂಬೆಗಾಲು ಕಿರುಚಿತ್ರ
ಸ್ಪರ್ಧೆಯ ಕಾರ್ಯದರ್ಶಿ ಡಾ. ಎಚ್. ಎಸ್. ನಾಗಭೂಷಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ‘ಅಮೃತವಾಹಿನಿ’ ಚಿತ್ರದ ಆಡಿಯೋ
ಸಿಡಿ ಇತ್ತೀಚೆಗೆ ಬೆಂಗಳೂರಿನ ರೇಣುಕಾಂಬ ಚಿತ್ರ ಮಂದಿರ, ಶಿವಮೊಗ್ಗೆಯ ಜಿಲ್ಲಾ ವಾಣಿಜ್ಯ
ಹಾಗೂ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಬಿಡುಗಡೆಯಾಗಿ, ಪಕ್ವವಾದ ಸಾಹಿತ್ಯ
ಹಾಗೂ ಸುಮಧುರವಾದ ಸಂಗೀತದಿಂದ ಗಮನ ಸೆಳೆದಿದೆ ಎಂದರು.
ಅಮೃತವಾಹಿನಿ ಸಿನಿಮಾ ಹಿರಿತಲೆಮಾರಿನ ಕಥೆ. ವಯೋ ಸಹಜವಾಗಿ ಆವರಿಸಿಕೊಳ್ಳುವ
ಹಿರಿತನ, ಒಳಗಿಂದೊಳಗೇ ತಲ್ಲಣಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ಆದರೆ,
ಈ ತಲ್ಲಣಗಳನ್ನು ಎದುರಿಸುವುದು ಅಷ್ಟು ಸುಲಭ ಅಲ್ಲ. ಇಂತಹ ತೀವ್ರ
ಭಾವಾಭಿವ್ಯಕ್ತಿಯ ಚಿತ್ರದ ಪ್ರಮುಖ ಪಾತ್ರದಲ್ಲಿ ಹಿರಿಯನಾಗಿ ಡಾ. ಎಚ್. ಎಸ್.
ವೆಂಕಟೇಶ ಮೂರ್ತಿ ಅಭಿನಯಿಸಿದ್ದಾರೆ. ಈ ಚಿತ್ರದ ಇನ್ನೊಂದು ಹಿರಿಯ ಪಾತ್ರದಲ್ಲಿ

ಶಿವಮೊಗ್ಗೆಯ ರಂಗಭೂಮಿ ಕಲಾವಿದ, ಪತ್ರಕರ್ತ ವೈದ್ಯ ಅಭಿನಯಿಸಿದ್ದಾರೆ ಎಂದ
ಅವರು, ಪ್ರಸಿದ್ಧ ನಿರ್ದೇಶಕ ನರೇಂದ್ರ ಬಾಬು ನಿರ್ದೇಶನದ ಈ ಚಿತ್ರವನ್ನು
ಸಂಪತ್‍ಕುಮಾರ್ ನಿರ್ಮಿಸಿದ್ದಾರೆ. ನರೇಂದ್ರ ಬಾಬು ಈ ಹಿಂದೆ ಪಲ್ಲಕ್ಕಿ, ಯುವ, ಓ ಗುಲಾಬಿ
ಚಿತ್ರಗಳನ್ನು ನಿರ್ದೇಶಿಸಿ, ಯಶಸ್ವೀ ನಿರ್ದೇಶಕ ಎನಿಸಿಕೊಂಡಿದ್ದಾರೆ ಎಂದರು.
ವೈದ್ಯರವರು ಶಿವಮೊಗ್ಗೆಯ ರಂಗಭೂಮಿ, ಸಿನಿಮಾ, ಕಿರುಚಿತ್ರ ಹಾಗೂ
ಸಾಕ್ಷ್ಯ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಕಳೆದ ಹತ್ತು
ವರ್ಷಗಳಿಂದ ಶಿವಮೊಗ್ಗೆಯಲ್ಲಿ ಸದುಭಿರುಚಿಯ ಚಿತ್ರ ಸಮಾಜವನ್ನು ಕಟ್ಟಿ,
ಬೆಳಸುವಲ್ಲಿ ಶ್ರಮಿಸಿದ್ದಾರೆ. ಹಾಗೆಯೇ ರಂಗಭೂಮಿಯಲ್ಲಿ ವಿಶಿಷ್ಟ
ಪ್ರಯೋಗಗಳಿಗೆ ಕಾರಣರಾಗಿದ್ದಾರೆ ಎಂದ ಅವರು, ಬೆಂಗಳೂರಿನ
ಚಿತ್ರೋದ್ಯಮಿಗಳು ಶಿವಮೊಗ್ಗೆಗೆ ಬಂದು ಚಿತ್ರೀಕರಣ ಸೇರಿದಂತೆ ವಿವಿಧ ಸಂಸ್ಕರಣ
ಚಟುವಟಿಕೆಗಳನ್ನು ನಡೆಸಲು ವೈದ್ಯರವರ ಪ್ರಯತ್ನ ಶ್ಲಾಘನೀಯ
ಎಂದರು.
ಹಾಗೆಯೇ ಈ ಚಿತ್ರದಲ್ಲಿ ಶಿವಮೊಗ್ಗೆಯ ರಂಗಭೂಮಿ ಕಲಾವಿದೆ ಸುಪ್ರಿಯಾ
ರಾವ್ ಕೂಡಾ ಗಮನಾರ್ಹ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದ ಅವರು, ಕೌಟುಂಬಿಕ
ಕಥಾ ಹಂದರದ ಈ ಚಿತ್ರದ ಕಥೆಯನ್ನು ರಾಘವೇಂದ್ರ ಪಾಟೀಲ ಬರೆದಿದ್ದು,
ಚಿತ್ರಕಥೆಯೊಂದಿಗೆ ನರೇಂದ್ರ ಬಾಬು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಶಿವಾನಂದ್‍ರವರ
ಸಂಭಾಷಣೆ, ಉಪಾಸನಾ ಮೋಹನ್‍ರವರ ಸಂಗೀತ, ಎಚ್. ಎಸ್.
ವೆಂಕಟೇಶಮೂರ್ತಿಯವರ ಸಾಹಿತ್ಯ, ಕೆ. ಗಿರೀಶ್ ಕುಮಾರ್‍ರವರ ಸಂಕಲನ,
ಗಿರಧರ ಧವನ್‍ರವರ ಛಾಯಾಗ್ರಹಣವಿದೆ. ಚಿತ್ರದ ತಾರಾಬಳಗದಲ್ಲಿ ಡಾ. ಎಚ್. ಎಸ್.
ವೆಂಕಟೇಶಮೂರ್ತಿ, ವತ್ಸಲಾ ಮೋಹನ್, ವೈದ್ಯ ಶಿವಮೊಗ್ಗ, ಮಧು ಸಾಗರ್,
ಮಂಜೇಶ್, ಮಂಜುನಾಥ ಬೂದಾಳ್, ಸುಪ್ರಿಯಾ ರಾವ್, ಆರ್. ಟಿ. ರಮಾ, ಗೀತಾ
ಸೂರ್ಯವಂಶಿ, ಬೇಬಿ ಋತ್ವಿ, ಡಾ. ಶೈಲಾ, ಸಂತೋಷ್ ಕರ್ಕಿ ಮೊದಲಾದವರಿದ್ದಾರೆ.
ವಿಶೇಷವೆಂದರೆ, ಈ ಸಿನಿಮಾ, ಕೋಲ್ಕತ್ತಾ ಅಂತರಾಷ್ಟ್ರೀಯ
ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಉತ್ತಮ ಚಲನಚಿತ್ರ ಪ್ರಶಸ್ತಿಗೆ
ಭಾಜನವಾಗಿದೆ ಎಂದರು.
ಶಿವಮೊಗ್ಗೆಯ ಸಾಹಿತ್ಯಾಸಕ್ತರು, ಸಿನಿಮಾ-ಸಂಗೀತಾಸಕ್ತರು ಈ ಚಿತ್ರವನ್ನು
ವೀಕ್ಷಿಸಿ, ಸದಭಿರುಚಿಯ ಚಿತ್ರವನ್ನು ಪೆÇ್ರೀತ್ಸಾಹಿಸಬೇಕಾಗಿ ಅವರು ಮನವಿ
ಮಾಡಿದರು.
ಈ ಸಂದರ್ಭದಲ್ಲಿ ಬೆಳ್ಳಿಮಂಡಲ ಹಾಗೂ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯ
ಪ್ರಮುಖರಾದ ಜಿ. ವಿಜಯಕುಮಾರ್, ಮಂಜು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *