ದಿ ಶ್ರೀ ಎಸ್ ರಂಗಣ್ಣ ನವರು ನಿವೃತ್ತ ಶಿಕ್ಷಕರು ಇವರು ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿಯ ಜಮೀನ್ದಾರ ಗೌಡಿಕ್ಕೆ ಕುಟುಂಬದಲ್ಲಿ ಜನಿಸಿರುವರು..

ಎಸ್ ರಂಗಣ್ಣ ನವರು ಬಿಎಸ್ಸಿ.ಬಿ ಎಡ್. ಕಾನೂನು ಪದವಿಯ ವ್ಯಾಸಂಗ ಮಾಡಿರುವರು.
ಇವರು ವಿದ್ಯಾರ್ಥಿ ಜೀವನದ ರಜೆಯ ಸಮಯದಲ್ಲಿ ತಮ್ಮ ಕುಟುಂಬದ ಸಹೋದರರೊಂದಿಗೆ ಜೋತೆಗೋಡಿ ಕೃಷಿ ಚಟುವಟಿಕೆ ವೃತ್ತಿಯಲ್ಲಿ ತೊಡಗಿಸಿಕೋಳುತ್ತಿದ್ದರು.
ಇವರು ಕಾಯಕದ ಸಮಯಕ್ಕೆ ಹೆಚ್ಚಿನ ಮಹತ್ವವನ್ನು ಕೋಡುವ ಮನಸ್ಥಿತಿಯನ್ನು ಹೊಂದಿದ್ದರು.
ಇವರ ಮಹತ್ವಾಕಾಂಕ್ಷೆಯ ಸ್ಪೂರ್ತಿಯ ಧೈರ್ಯದ ಬದುಕು ಇವರ ಸಹೋದರರಿಗೇ ಮತ್ತು ಬಂಧುಗಳಿಗೆ ಆತ್ಮಬಲದ ಮಾರ್ಗದರ್ಶನವಾಗಿತ್ತು.

ಇವರು ಚಿತ್ರದುರ್ಗದ ಸರ್ಕಾರಿ ಬಾಲಕರ ಕಿರಿಯ ಕಾಲೇಜುನಲ್ಲಿ ಶಿಕ್ಷಕರಾಗಿ ಕೆಲವು ವರ್ಷಗಳಕಾಲ ಸೇವೆಯನ್ನು ಸಲ್ಲಿಸಿದಾರೇ.
ಇವರು ಸರಿಸುಮಾರು 1983 ರ ಸಮಯದಲ್ಲಿ ಚಿತ್ರದುರ್ಗ ಜಿಲ್ಲೆಯ ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಮತ್ತು
ಚಿತ್ರದುರ್ಗ ನಗರದ ಕೇಳಗೋಟೆ ಬಡಾವಣೆಯ ಶ್ರೀ ವೆಂಕಟೇಶ್ವರ ಮನರಂಜನಾ ಕೇಂದ್ರದಲ್ಲಿ ಉಪಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.

ಇವರ ಪತ್ನಿ ಶ್ರೀಮತಿ ಶ್ರೀ ಕೆ ಎಲ್ ನಾಗವೇಣಿ ಇವರು 1965 ರಿಂದ 1970 ರ ಸುಮಾರಿಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಸಮಿತಿಯ ಚುನಾಯಿತ ಜನಪ್ರತಿನಿಧಿಯಾಗಿ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದಾರೆ.
ಇವರು ಇಬ್ಬರು ಗಂಡು ಮಕ್ಕಳು. ಒಂದು ಹೆಣ್ಣು ಮಗಳು ಹೊಂದಿರುವರು.
ಮೊದಲನೆಯ ಮಗ ರಘುಗೌಡ ಕೃಷಿ ಕ್ಷೇತ್ರದಲ್ಲಿ ತೋಡಗಿಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಪಕ್ಷದ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನೊಬ್ಬ ಮಗ ಡಾ ರಂಗೆಗೌಡ ತಜ್ಞ ವೈದ್ಯಾರಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆಯಲ್ಲಿ ತೋಡಗಿದ್ದಿರೇ.
ಮಗಳು ಶ್ರೀಮತಿ ಶ್ರೀ ಜ್ಯೋತಿ ಗೃಹಿಣಿ ಯಾಗಿದ್ದು ಇವರ ಪತಿ ಮಾನ್ಯ ಶ್ರೀ ಕೆ ತಿಪ್ಪೇಸ್ವಾಮಿ ಬೆಸ್ಕಾಂ ವಿಭಾಗದಲ್ಲಿ ಚೀಫ್ ಇಂಜಿನಿಯರ್ ಆಗಿದ್ದು ಬೆಂಗಳೂರಿನಲ್ಲಿ ಸೇವೆಯಲ್ಲಿ ಇದ್ದಾರೆ.

ದಿ ಶ್ರೀ ರಂಗಣ್ಣನವರ ದೀಮಂತಿಕ್ಕೇಯ ಪ್ರಾಮಾಣಿಕತೆ ಆದರ್ಶವ್ಯಕ್ತಿತ್ವ ಅವರ ಕುಟುಂಬಕ್ಕೆ ಮಾರ್ಗದರ್ಶನ.

Leave a Reply

Your email address will not be published. Required fields are marked *