ದಿವಂಗತ ಸಿದ್ದು ನ್ಯಾಮಗೌಡರು ನಿರ್ಮಾಣ ಮಾಡಿರುವ ಬ್ಯಾರೇಜ್ ರೈತರ ಶ್ರಮದ ಪ್ರತಿಪಲದ ಕಾರಣಕ್ಕೆ ಶ್ರಮ ಬಿಂದು ಸಾಗರ ಎಂದು ನಾಮಕರಣ ಮಾಡುಲಾಗುತ್ತದೆ
ಇದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಎಂಬ ಪ್ರದೇಶದಲ್ಲಿ ಕಂಡುಬರುತ್ತದೆ,

ಶ್ರಮ ಬಿಂದು ಸಾಗರದಿಂದ ಏತಾ ನೀರಾವರಿ ಮುಖಾಂತರ ಸುಮಾರು 40 ಚದರ ಕಿಲೋಮೀಟರ್ ಪ್ರದೇಶದ ಹಳ್ಳಿಯ ರೈತರಿಗೆ ಬೇಸಿಗೆಯ ವ್ಯವಸಾಯಕ್ಕೆ ನೀರಿನ ಬವಣೆಯನ್ನು ನಿಗಿಸುತ್ತದೆ,

ಈ ಒಂದು ಮಹತ್ವದ ಕಾರ್ಯದಲ್ಲಿ ಯಶಸ್ಸು ಕಂಡ ಸಿದ್ದು ನ್ಯಾಮಗೌಡರ ಹೆಸರು ರಾಷ್ಟ್ರದಲ್ಲಿ ಬ್ಯಾರೇಜ್ ಸಿದ್ದು ಎಂದು ಪ್ರಸಿದ್ದಿಗೆ ಬರುತ್ತದೆ,
ಈ ಒಂದು ಸುದ್ದಿ ಕಾಂಗ್ರೆಸ್ ಮುಖಂಡರ ಮನದ ಅಂಗಳಕ್ಕೆ ತಲುಪುತ್ತದೆ,

ಇದೆ ಸಮಯದಲ್ಲಿ ದೇಶದ ಲೋಕಸಭಾ ಚುನಾವಣೆ ಬರುವ ಹಿನ್ನಲೆಯಲ್ಲಿ,
ಬಾಗಲಕೋಟೆ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರಮಟ್ಟದ ಮಹಾನ್ ನಾಯಕ ರಾಮಕೃಷ್ಣ ಹೆಗಡೆ ಜನತಾ ಪರಿವಾರದಿಂದ ಸ್ಪರ್ಧೆ ಮಾಡಲು ಸಂನ್ನಧ ರಾಗುತಾರೇ,
ಇವರ ಎದುರು ಸ್ಪರ್ಧೆ ಮಾಡುವ ಸಲುವಾಗಿ ಕಾಂಗ್ರೆಸ್ ನಾಯಕರು ಸಿದ್ದುನ್ಯಾಮಗೌಡರನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಅಭ್ಯರ್ಥಿ ಆಗುವ ಸಲುವಾಗಿ ಒತ್ತಾಯ ಮಾಡುತ್ತಾರೆ, ಇವರೊಂದಿಗೆ ಬಾಗಲಕೋಟೆಯ ಜಿಲ್ಲೆಯ ರೈತಾಪಿ ಜನತೆಯ ಅಪೇಕ್ಷೆ ಚುನಾವಣೆಗೆ ನಿಲ್ಲುವುದೇ ಆಗಿರುತ್ತದೆ, ಈ ವಿಚಾರದ ಅಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಧುಮುಕುತ್ತಾರೆ,

ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸುವ ವಿಚಾರ ಅಸಾದ್ಯ ಎಂದು ರಾಜ್ಯದ ರಾಜಕಾರಣಿಗಳ ಮತ್ತು ರಾಜ್ಯದ ಜನತೆಯ ಮಾತಾಗಿತ್ತು ,
ಬಾಗಲಕೋಟೆಯ ಸ್ವಾಭಿಮಾನಿ ರೈತರು ಹೆಗಡೆ ವಿರುದ್ದ ತಿರುಗಿಬಿದ್ದು ಚುನಾವಣೆ ಫಲಿತಾಂಶ ದಲ್ಲಿ ಅತ್ಯಂತ ದೊಡ್ಡ ಅಂತರದಿಂದ ಬ್ಯಾರೇಜ್ ಸೀದ್ದು ಗೆಲುವು ಕಂಡುಬಂದಿದೆ,

ರಾಮಕೃಷ್ಣ ಹೆಗಡೆ ಎಂಬ ರಾಷ್ಟ್ರಮಟ್ಟದ ನಾಯಕನ ಸೋಲಿಸಿದ ಬ್ಯಾರೇಜ್ ಸೀದ್ದು ಅವರನ್ನು ಬೇಟಿ ಆಗಬೇಕೆಂಬ ಮಾತುಗಳು ಶ್ರೀಮತಿ ಶ್ರೀ ಸೋನಿಯಾಗಾಂಧಿ ಮಾತುಗಳಲ್ಲಿ ಕೇಳಿಬಂದಿದೆ ಎಂಬವ ವಿಚಾರ ಅಂದಿನ ಸುದ್ದಿ ಮಾದ್ಯಮಗಳಲ್ಲಿ ಅವತ್ತಿಗೆ ದೊಡ್ಡ ಮಟ್ಟದ ಸುದ್ದಿಯಾಗುತ್ತದೆ,

ಕೇಂದ್ರ ಸಂಪುಟದಲ್ಲಿ ಕಲ್ಲಿದ್ದಲು ಸಚಿವರಾಗಿ ಅವಕಾಶ ಒಲಿದು ಬರುತ್ತೆ, ಬಾಗಲಕೋಟೆ ರೈತರ ಹೆಸರ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಿ, ಬಾಗಲಕೋಟೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನು ಆಭಿವೃದಿ ಪಥದಲ್ಲಿ ಕೊಂಡೋಯುತ್ತಾರೆ,

ಮುಂದಿನ ದಿನಗಳಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಜಮಖಂಡಿ ತಾಲ್ಲೂಕಿನ ಸಾಕಷ್ಟು ಪ್ರಮಾಣದ ಆಭಿವೃದಿಯ ಕಾರಣಕ್ಕೆ ಸಾಕ್ಷಿಯಾಗಿದ್ದಾರೆ,

ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲವರ್ಧನೆ ಗೋಳೀಸುವ ಸಲುವಾಗಿ ಅವರ ರೈತಾಪಿ ಕಾರ್ಯದ ಅನುಭವದ ಆದಾರದ ಮೇಲೆ ಅವರಿಗೆ ಸುಮಾರು 2005 ರ ಸಮಯದಲ್ಲಿ ಕೆಪಿಸಿಸಿ ಕಿಸಾನ್ ಘಟಕದ ಅದ್ಯಕ್ಷರಾಗಿ ನೇಮಕ ಮಾಡಲಾಗತದೇ,

ಸಿದ್ದುನ್ಯಾಮೇಗೌಡರು ರಾಜ್ಯದ ಜಿಲ್ಲಾವಾರು ಕಿಸಾನ್ ಘಟಕವನ್ನು ಬಲಪಡಿಸುವ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ರೈತಾಪಿ ವರ್ಗದ ಯಾದವ ಜನಾಂಗದ ಯುವ ಮುಖಂಡರಾದ ನನ್ನ ಸ್ನೇಹಿತ ಡಿ ಟಿ ವೆಂಕಟೇಶ್ ಅವರನ್ನು ಜಿಲ್ಲಾ ಮಟ್ಟದ ಕಿಸಾನ್ ಘಟಕದ ಅದ್ಯಕ್ಷರಾಗಿ ನೇಮಕಾತಿ ಮಾಡಲಾಗುತ್ತದೆ,
ಡಿ ಟಿ ವೆಂಕಟೇಶ್ ಅದ್ಯಕ್ಷರಾದ ತರುವಾಯ ಜಿಲ್ಲಾ ಮಟ್ಟದ ಕೆಲವು ರೈತರ ಸಭೆಗಳ ಆಯೋಜನೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ರೈತರ ವೃತ್ತಿಯ ಸಬಲೀಕರಣಕ್ಕೆ ಹೊಸ ಆಯಾಮಗಳ ನೀತಿಯನ್ನು ಜಾರಿಗೆ ತಂದಿರುವ ವಿಚಾರದಲ್ಲಿ ರೈತರಿಗೆ ಮನವರಿಕೆ ಮಾಡಿರುವ ವಿಚಾರ ಈ ಸಂದರ್ಭದಲ್ಲಿ ನೆನೆಯಬಹುದು,

ಸಿದ್ದುನ್ಯಾಮಗೌಡರು 2018 ಸಾರ್ವರ್ಥಿಕ ವಿಧಾನಸಭಾ ಚುನಾವಣೆ ಯಲ್ಲಿ ಜಯಗಳಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಾನ್ಯ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳ ಮಂತ್ರಿ ಮಂಡಳದಲ್ಲಿ ,
ಸಿದ್ಧನ್ಯಾಮಗೌಡರನ್ನು ಮಂತ್ರಿಗಳಾಗಿ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠರ ಮಟ್ಟದಲ್ಲಿ ಮಾತುಕತೆ ನಡೆದಿತ್ತು,

ಸರ್ಕಾರದ ಸಂಪುಟದಲ್ಲಿ ಮಂತ್ರಿ ಆಗುವ ವಿಚಾರವನ್ನು ಅರಿತ ಸಿದ್ದುನ್ಯಾಮಗೌಡರು ಕ್ಷೇತ್ರದ ಜನತೆಯ ಮತ್ತು ಕುಟುಂಬ ಹಿರಿಯರ ಆಶೀರ್ವಾದ ಪಡೆಯುವ ಸಲುವಾಗಿ ಬೆಂಗಳೂರಿನಿಂದ ಜಮಖಂಡಿಗೆ ತೆರಳುವ ಸಂದರ್ಭದಲ್ಲಿ ಬಾಗಲಕೋಟೆ ಸಮೀಪದಲ್ಲಿಯೆ ಅವರು ಚಲಿಸುತ್ತಿದ್ದ ಕಾರು ಅಪಘಾತವಾಗಿ ಅವರು ಇಹಲೋಕ ತ್ಯಜಿಸುತಾರೇ,
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನತೆ ದುಖದ ಕಣ್ಣಿರಿನಲ್ಲಿ ಮರುಗೀದರು,

ಸಿದ್ದುನ್ಯಾಮಗೌಡರ ಪ್ರಗತಿಪರ ಕಾಯಕದ ಕರ್ಮಗಳು ಇತಿಹಾಸದ ನೆಲೆಯಲ್ಲಿ ಜೀವಂತವಾಗಿ ಜೀವಿಸುತವೆ,

Leave a Reply

Your email address will not be published. Required fields are marked *