ಸಿದ್ಧನಾಮ್ಯಗೌಡರು ಬಾಗಲಕೋಟೆ ಜಿಲ್ಲೆಯ ಕಡಕೋಳ್ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದಾರೇ,
ಗೌಡರು ಪ್ರೌಢಾಶಿಕ್ಷಣ ವಿದ್ಯಾಬ್ಯಾಸ ಪೂರ್ಣಗೊಳಿಸಿದ ತರುವಾಯ ಪಿತ್ರಾರ್ಜಿತ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ಅವರು ಕಾರ್ಯನಿರತರಾಗುತ್ತಾರೆ,
ಇದರೊಂದಿಗೆ ಅವರ ಗ್ರಾಮದ ಸುತ್ತಲಿನ ಹಳ್ಳಿಗಳ ರೈತರ ಜೊತೆಗೆ ಉತ್ತಮ ಬಾಂಧವ್ಯ ಬೆಳಸಿಕೊಂಡು ರೈತರ ಕಷ್ಟದಲ್ಲಿ ಪಾಲುದಾರರಾಗುತ್ತ ರೈತರ ಸಮಸ್ಯೆ ಪರಿಹಾರಗಳುನ್ನು ನೀಡುತ್ತಾ ರೈತ ನಾಯಕರಾಗಿ ಬಿಂಬಿಸಿಕೋಳುತ್ತಾರೆ,
ದಿನಗಳು ಕಳೆದಂತೆ ರೈತರ ಕಷ್ಟಸುಖಗಳ ಬಗ್ಗೆ ಚರ್ಚೆಯ ಸಂದರ್ಭದಲ್ಲಿ ನೀರಿನ ಅಭಾವದ ವಿಚಾರ ಚರ್ಚೆಗೆ ಬರುತ್ತದೆ,
ಸಿದ್ದು ನ್ಯಾಮಗೌಡರು ರೈತರು ನೀರಿಗಾಗಿ ಅನುಭವಿಸುತ್ತಿರುವ ಸಮಸ್ಯೆಗಳಿಗೆ ನಾನು ರೈತರೀಗಾಗಿ ಏನಾದರೂ ಸಹಾಯ ಮಾಡಬೇಕು ಎಂಬ ಮನಸ್ಥಿತಿಯಲ್ಲಿ ರೈತರೇಲ್ಲರನ್ನು ಒಂದುಗೂಡಿಸಿ ಅವರ ಪ್ರಾಂತ್ಯದಲ್ಲಿ ಕೃಷ್ಣ ನದಿಯ ನೀರಿಗಾಗಿ ಅಣೆಕಟ್ಟಿನ ಬ್ಯಾರೇಜ್ ನಿರ್ಮಾಣಕ್ಕೆ ಸರ್ಕಾರದ ಮುಂದೇ ಬೇಡಿಕೆ ಸಲಿಸುತ್ತಾರೆ,
ಆ ದಿನಗಳ ಜನತಾಪಕ್ಷದ ಸರ್ಕಾರದ ಮುಖ್ಯಮಂತ್ರಿ
ದಿ, ರಾಮಕೃಷ್ಣಹೆಗಡೆ ಅವರು ಬ್ಯಾರೇಜ್ ಬೇಡಿಕೆಯನ್ನು ತಿರಸ್ಕಾರ ಮಾಡುತ್ತಾರೆ,
ಇದರೊಂದಿಗೆ ಮುಖ್ಯಮಂತ್ರಿಗಳು ಈ ಯೋಜನೆ ಅವೈಜ್ಞಾನಿಕವಾಗಿ ಕಂಡುಬರುತ್ತಿದೆ ಇದರಿಂದಾಗಿ ರೈತರಿಗೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ ಎಂದು ಆ ಭಾಗದ ರೈತರಿಗೆ ವಿವರಣೆ ನೀಡುತ್ತಾರೆ,
ರೈತರು ಈ ವಿಚಾರವನ್ನು ಒಂದು ಸವಾಲಾಗಿ ಸ್ವೀಕರಿಸಿ ರೈತರೆಲ್ಲ ಒಂದುಗೂಡಿ ಸರ್ಕಾರದ ಅನುದಾನದ ಸಹಾಯವಿಲ್ಲದೆಯೇ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ ನಿರ್ಮಾಣ ಮಾಡುತ್ತಾರೆ,
ಸರ್ಕಾರದ ಯಾವುದೇ ಸಹಾಯ ಪಡೆಯದೆ ರೈತರ ಪರಿಶ್ರಮದ ಫಲದಿಂದ ನಿರ್ಮಿಸಿರುವ ವಿಚಾರವಂತಿಕ್ಕೇ ದೇಶದಲ್ಲಿಯೇ ಇದು ಪ್ರಥಮ ಅಣೆಕಟ್ಟಿನ ಬ್ಯಾರೇಜ್ ಎಂದು ಪ್ರಸಿದ್ದಿ ಪಡದಿದೆ,
ಈ ಬ್ಯಾರೇಜ ನಿರ್ಮಾಣ ಮಾಡಲು ಮುಂದಾಳತ್ವ ವಹಿಸಿದ್ದ ಸಿದ್ದುನ್ಯಾಮಗೌಡರ ಕಾರ್ಯವೈಖರಿಯ ವಿಚಾರದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪಠ್ಯ ಪುಸ್ತಕದಲ್ಲಿ ಪಾಠವಾಗಿ ವಿಧ್ಯಾರ್ಥಿಗಳಿಗೆ ಒಗ್ಗಟ್ಟಿನ ಶ್ರಮದಿಂದ ಫಲವಿದೆ ಎಂಬ ನೀತಿಯ ಬೋಧನೆಯ ಸಾರಾಂಶವನ್ನು ಸಾರುತ್ತದೆ, ಇದು ರೈತರ ಸವಾಲಿಗೆ ಸಿಕ್ಕಿರುವ ಮಾನ್ಯತೆ,
ಮೌಲ್ಯಗಳ ಸಾಧನೆಗಳನ್ನು ಇತಿಹಾಸ ಪ್ರತಿಬಿಂಬಿಸುತ್ತದೆ,,,,,
ಮುಂದುವರಿಯುತ್ತದೆ………
ರಘುಗೌಡ, 9916101265,
,