ಬಿ.ಎ.ಬಸವರಾಜ ಭೂಮಿಪೂಜೆ
ಹರಿಹರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಆಮ್ಲಜನಕ
ಉತ್ಪಾದನೆ ಘಟಕ ನಿರ್ಮಾಣ ಕಾಮಗಾರಿಗೆ ನಗರಾಭಿವೃದ್ಧಿ ಸಚಿವರು
ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರ ನೇತೃತ್ವದಲ್ಲಿ
ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್ ರಾಮಪ್ಪ, ಅವರು
ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು,
ಹರಿಹರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ
ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ
ಚಾಲನೆ ನೀಡಲಾಗಿದ್ದು, 15 ದಿನದೊಳಗಾಗಿ ಕಾಮಗಾರಿ ಪೂರ್ಣಗೊಂಡು,
ಘಟಕ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿಸಿದರು. ಈ ವೇಳೆ
ಕೊರೊನಾ ಸೋಂಕಿತರಿಗೆ ಉಪಯುಕ್ತವಾಗಲೆಂದು ಪಕ್ಷದ ಜಿಲ್ಲಾ
ಅಧ್ಯಕ್ಷರಾದ ಹನಗವಾಡಿ ಎಸ್.ಎಂ.ವೀರೇಶ್ ಅವರು ಸಾರ್ವಜನಿಕ
ಆಸ್ಪತ್ರೆಗೆ ಒಂದು ಆಂಬ್ಯುಲೆನ್ಸ್ ಉಚಿತವಾಗಿ ನೀಡಿದ್ದು, ನಾಲ್ಕು ವಾಟರ್ ಡಿಸ್ಪೆನ್ಸರ್
ಗಳನ್ನು ಉಚಿತವಾಗಿ ಕೊಡುಗೆ ನೀಡಿದ್ದಾರೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಪುತ್ರ ಜಿ.ಎಂ.ಅನಿಕೇತ್ ಅವರು ಟ್ರಸ್ಟ್
ವತಿಯಿಂದ 60 ಲಕ್ಷ ರೂ. ವೆಚ್ಚದ ಆಮ್ಲಜನಕ ಉತ್ಪಾದನೆ ಘಟಕವನ್ನು
ಹರಿಹರಕ್ಕೆ ಕೊಡುಗೆ ನೀಡಿದ್ದಾರೆ, ಅಲ್ಲದೆ, ಇದುವರೆಗೂ ಹರಿಹರ,
ಹರಪನಹಳ್ಳಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ
ಒಂದು ಆಮ್ಲಜನಕ ಉತ್ಪಾದನಾ ಘಟಕಕ್ಕೆ ಒಟ್ಟು 1.80 ಕೋಟಿ ರೂ. ವೆಚ್ಚ
ಭರಿಸಿರುವುದು ಶ್ಲಾಘನೀಯ. ಅಲ್ಲದೇ ಹನಗವಾಡಿ ಜಿಲ್ಲಾ ಉಪಾಧ್ಯಕ್ಷ
ಎಸ್.ಎಂ.ವೀರೇಶ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದೆ ಉಚಿತವಾಗಿ
ಆಂಬ್ಯುಲೆನ್ಸ್ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಅವರನ್ನು
ಅಭಿನಂದಿಸಿದರು.
ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಹರಿಹರ ಸಾರ್ವಜನಿಕ
ಆಸ್ಪತ್ರೆಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ಆಕ್ಸಿಜನ್ ಉತ್ಪಾದನೆ ಘಟಕಕ್ಕೆ
ಭೂಮಿ ಪೂಜೆ ನೆರವೇರಿಸಿದ್ದು, 15 ದಿನಗಳೊಳಗೆ ಕಾಮಗಾರಿ
ಪೂರ್ಣಗೊಳಲಿದೆ. ಇದರಿಂದ ಪ್ರತಿನಿತ್ಯ ಆಸ್ಪತ್ರೆಯಲ್ಲಿರುವ ಸುಮಾರು
60-70 ಕೋವಿಡ್ ರೋಗಿಗಳಿಗೆ ಆಮ್ಲಜನಕ ನಿರಾತಂಕವಾಗಿ
ಪೂರೈಕೆಯಾಗುತ್ತದೆ ಎಂದರು. ಮೊದಲು ಜಗಳೂರು
ತಾಲ್ಲೂಕಿನಲ್ಲಿ ಆಮ್ಲಜನಕ ಉತ್ಪಾದನೆ ಘಟಕ ಪ್ರಾರಂಭಿಸಬೇಕೆಂದಿದ್ದು,
ಅಲ್ಲಿ ವಿಂಡ್ ಮಿಲ್ ಸ್ಥಾಪನೆ ಆದ ಕಾರಣ ಆಕ್ಸಿಜನ್ ಘಟಕವನ್ನು ಹರಿಹರದÀಲ್ಲಿ
ಸ್ಥಾಪಿಸಲಾಗುತ್ತಿದೆ. ಇಲ್ಲಿ ಆಕ್ಸಿಜನ್ ಘಟಕ ತೆರೆಯಬೇಕು ಎಂಬ
ಉದ್ದೇಶದಿಂದ ನನ್ನ ಮಗ ಅನಿಕೇತ್ ಪಶ್ಚಿಮ ಬಂಗಾಳ ರಾಜ್ಯದಿಂದ
ತರಿಸಿದ್ದಾರೆ. ಇದರೊಂದಿಗೆ ಹರಪನಹಳ್ಳಿ, ಚಿತ್ರದುರ್ಗ ದಲ್ಲಿಯೂ
ಆಕ್ಸಿಜನ್ ಘಟಕ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಸಾವರ್ಜನಿಕರಿಗೆ
ಇದರ ಉಪಯೋಗ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೆÇಲೀಸ್
ವರಿμÁ್ಠಧಿಕಾರಿ ಹನುಮಂತರಾಯ, ಮಾಜಿ ಶಾಸಕ ಬಿ.ಪಿ.ಹರೀಶ್, ಪಕ್ಷದ
ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಪುರಸಭೆ ಸದಸ್ಯರು ಹಾಗೂ
ಇತರರು ಹಾಜರಿದ್ದರು.