ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಪ್ರದಾನ ಕಾರ್ಯದರ್ಶಿಯಾಗಿ ರಿಯಾಝ್ ಎಸ್ ಎ ಕಲ್ಲುಗುಂಡಿ ಇವರನ್ನು ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ರವರ ಆದೇಶದ ಮೇರೆಗೆ , ಕಾರ್ಯಧಕ್ಷರಾದ ಸಲೀಂ ಆಹ್ಮದ್ ರವರ ಅನುಮೋದನೆಯೊಂದಿಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅವರ ಶಿಫಾರಸಿನ ಮೇರೆಗೆ ರಾಜ್ಯ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಬಿ. ಆರ್ ನಾಯ್ಡು ರವರು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ಮಾಜಿ ಸಚಿವರಾದ ರಮಾನಾಥ್ ರೈ, ಯು. ಟಿ ಖಾದರ್, ಕಾಂಗ್ರೇಸ್ ಯುವ ನಾಯಕ ಮಿಥುನ್ ರೈ, ದಕ್ಷಿಣ ಕನ್ನಡ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ ಜಯರಾಮ , ಕಾಂಗ್ರೆಸ್ ನಾಯಕರಾದ ವೆಂಕಪ್ಪ ಗೌಡ ಹಾಗೂ ಭರತ್ ಮುಂಡೋಡಿ ,ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ್ ಕೊಯಿಗಾಜೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿಕೆ ಹಮೀದ್ , ರವರು ಆಯ್ಕೆಗೆ ಸಹಕರಿಸಿದ್ದಾರೆ.
ರಿಯಾಜ್ ಇವರು ಪೇರಡ್ಕ ಜುಮಾ ಮಸೀದಿ ಅಧ್ಯಕ್ಷರಾದ ಅಲಿ ಹಾಜಿ ಕಲ್ಲುಗುಂಡಿ ಯವರ ಪುತ್ರ ರಾಗಿದ್ದಾರೆ.