ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ನಲ್ಲಿ ದಾಖಲಾಗಿರುವ ಕೋವಿಡ್ ಪಾಸಿಟಿವ್ ರೋಗಿಗಳಿಗೆ ಅಲೋಪತಿ ಔಷಧಿಯೊಂದಿಗೆ ಭಾರತ ಸರ್ಕಾರದ ನಿರ್ದೇರ್ಶನದಂತೆ ಆಯುಷ್ ಔಷಧಿಗಳನ್ನು ದಿನಾಂಕ 2/6/ 2021 ರಂದು ಸನ್ಮಾನ್ಯ ಶ್ರೀಯುತ ಎಂ.ಪಿ. ರೇಣುಕಾಚಾರ್ಯ, ರಾಜಕೀಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಹಾಗೂ ಶಾಸಕರು ಹೊನ್ನಾಳಿ ಇವರಿಂದ ಆಯುಷ್ ಕಿಟ್ಟನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೋವಿಡ್ ಕೇರ್ ಸೆಂಟರ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯಾಧಿಕಾರಿಗಳಾದ
ಡಾ. ಚಂದ್ರಕಾಂತ್ ಎಸ್. ನಾಗಸಮುದ್ರ. ವೈದ್ಯಾಧಿಕಾರಿಗಳು,ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ, ಕುಂಬಳೂರು ಇವರು ಕಪ್ಪು ಬಟ್ಟೆ ಧರಿಸಿ ಕರ್ತವ್ಯನಿರತರಾಗಿದ್ದು ಆಯುಷ್ ಕಿಟ್ ವಿತರಣೆಯನ್ನು ಯಶಸ್ವಿಯಾಗಿ ನಡೆಸಿದರು. ಎನ್ಎಚ್ಎಂ ಆಯುಷ್ ವೈದ್ಯರಾದ ಡಾ. ಗುರುರಾಜ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.