ಶಿವಮೊಗ್ಗ: ಲಾಕ್ ಡೌನ್ ನಂತಹ ಸಮಯದಲ್ಲಿ ಪತ್ರಿಕಾ ವಿತರಕರನ್ನು ಸಹ ಗುರುತಿಸಿ ಆಹಾರದ ಕಿಟ್ ಗಳನ್ನು ಒದಗಿಸಿದ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲಾ ದಿನಪತ್ರಿಕೆ ವಿತರಕರ ಸಂಘ ಕೃತಜ್ಞತೆ ಸಲ್ಲಿಸಿದೆ.
ಸೇವಾ ಭಾರತಿ ಹಾಗೂ ಪ್ರೇರಣಾ ಎಜುಕೇಶನಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ಪ್ರತಿದಿನ ಪತ್ರಿಕೆಗಳನ್ನು ವಿತರಿಸುವಂತಹ ಪತ್ರಿಕಾ ವಿತರಕರಿಗೆ ಆಹಾರದ ಕಿಟ್ಗಳನ್ನು ನೀಡುವ ಮೂಲಕ ನೆರವಿನ ಹಸ್ತವನ್ನು ಚಾಚಿರುವುದು ನಮಗೆ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಹಕಾರ ನಮ್ಮ ಮೇಲಿರಲಿ ಎಂದು ಆಪೇಕ್ಷಿಸುತೆವೆ.
ಈ ಸಂದರ್ಭದಲ್ಲಿ ನಮ್ಮನ್ನು ಗುರುತಿಸಲು ಅನುವುಮಾಡಿಕೊಟ್ಟ ಪ್ರೆಸ್ ಟ್ರಸ್ಟ್ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರುಗಳಿಗೂ ಹಾಗೂ ಎಲ್ಲಾ ಸದಸ್ಯರಿಗಳಿಗೂ ಶಿವಮೊಗ್ಗ ನಗರದ ಎಲ್ಲಾ ಪತ್ರಿಕಾ ವಿತರಕರುಗಳ ಪರವಾಗಿ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷ ಸತ್ಯನಾರಾಯಣ ಹೆಚ್.ವಿ., ಉಪಾಧ್ಯಕ್ಷ ಎಂ.ಎಸ್. ಉಮೇಶ್, ಕಾರ್ಯದರ್ಶಿ ಭಾನುಪ್ರಕಾಶ್, ಖಜಾಂಚಿ ಧನಂಜಯ ಹೆಚ್ ಸೇರಿದಂತೆ ನಿರ್ದೇಶಕರುಗಳು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.