ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊನ್ನಾಳಿ ವತಿಯಿಂದ ತಾಲೂಕಿನ ಮಾಸಡಿ ವಲಯದ ಗೊಲ್ಲರಹಳ್ಳಿಯ ಸ್ವಸಹಾಯ ಸಂಘದ ಸದಸ್ಯರಿಗೆ ಸಂಪೂರ್ಣ ಸೂರಕ್ಷಾ ಆರೊಗ್ಯ ಕಾಡ್೯ ವಿತರಣೆ ಮಾಡಲಾಯಿತು , ಸದಸ್ಯರಿಗೆ ಸಂಪೂರ್ಣ ಸೂರಕ್ಷಾ ಕಾಡ್೯ಗಳನ್ನು ವಿತರಿಸಿದ ತಾಲೂಕು ಯೋಜನಾಧಿಕಾರಿ ಶ್ರೀ ಬಸವರಾಜ್ ಮಾತನಾಡಿ ಯೊಜನೆಯಿಂದ ಸ್ವ-ಸಹಾಯ ಸಂಘದ ಸದಸ್ಯರ ಕುಟುಂಬಗಳ ಆರೊಗ್ಯದ ದೃಷ್ಟಿಯಿಂದ 1100 ಕುಟುಂಬಗಳಿಗೆ ಸಂಪೂರ್ಣ ಸೂರಕ್ಷಾ ಆರೊಗ್ಯವಿಮೆ ನೊಂದಾವಣೆ ಮಾಡಿದ್ದು, ಈ ಯೋಜನೆಯಡಿಯಲ್ಲಿ ಒರ್ವ ಸದಸ್ಯರಿಗೆ ಒಂದು ವರ್ಷದ ಅವಧಿಗೆ ರೂ 20000/- ಆರೊಗ್ಯ ವಿಮಾರಕ್ಷಣೆ ಇದ್ದು ಕುಟುಂಬದಲ್ಲು ಎಷ್ಟು ಜನ ನೊಂದಾಯಿಸಿರುತ್ತಾರೊ ಪ್ರತಿಯೊಬ್ಬರುಗೂ ತಲಾ ರೂ 20000/- ಸೌಲಭ್ಯವಿದ್ದು, ಎಲ್ಲ ಸದಸ್ಯರ ಮೊತ್ತವನ್ನು ಒಬ್ಬರಿಗೆಯೆ ಬಳಕೆ ಮಾಡಬಹುದು ಉದಾ. ಕುಟುಂಬದಲ್ಲಿ ಐದು ಜನ ನೊಂದಾಯಿಸಿದ್ದರೆ ರೂ ಒಂದು ಲಕ್ಷ ಮೊತ್ತದಷ್ಟು ಒಬ್ಬರಿಗೆಯೆ ವೆಚ್ಚ ತಗಲಿದರೆ ಚಿಕಿತ್ಸೆಸೂರಕ್ಷಾ ಜಾಲ ಆಸ್ಪತ್ರೆಯಲ್ಲಿ ದಾಖಲಾದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು ಎಂದರು ಹಾಗೂ ಎಸ್ ಡಿ ಎಂ ಧಾರವಾಡ ಮತ್ತು ಉಜಿರೆ ಆಸ್ಪತ್ರೆಯಲ್ಲಿ ಹೊರರೊಗಿಯಾಗಿ ರೊಗ ಪತ್ತೆ ಹಚ್ಚಲು ಕೈಗೊಂಡ ಪರಿಕ್ಷೆ (ಎಕ್ಷರೆ, ಸ್ಕ್ಯಾನಿಂಗ್, ಸಿಟಿ ಸ್ಕ್ಯಾನ್ ಇತ್ಯಾದಿ)ವೆಚ್ಚವನ್ನು ಯೋಜನೆಯಿಂದ ನಿಡಲಾಗುವದು ಎಂದರು, ಇದಲ್ಲದೆ ಪ್ರಸಕ್ತ ವರ್ಷ ಆರೊಗ್ಯ ರಕ್ಷಾ ಎಂಬ ವಿನೂತನ ಯೋಜನೆಯನ್ನು ಪೂಜ್ಯ ಹೆಗ್ಗಡೆಯವರು ಜಾರಿಗೆ ತಂದಿದ್ದು ಸಂಘದ ಸದಸ್ಯರೊರ್ವರು ರೂ ನೂರು ರೂಪಾಯಿ ಪಾವತಿಸಿದರೆ ವರ್ಷಕ್ಕೆ ರೂಪಾಯಿ ಹತ್ತು ಸಾವಿರ ಮೌಲ್ಯದ ಚಿಕಿತ್ಸಾ ವೆಚ್ಚ ಬರಿಸಹುದು ಇ ವಿಮಾ ಸೌಲಭ್ಯ ಸಂಘದ ಸದಸ್ಯರಿಗೆ ಮಾತ್ರವಿದ್ದು ಈ ವರ್ಷ ತಾಲೂಕಿನಲ್ಲಿ 20000 ಸದಸ್ಯರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದರು. ಮೆಲ್ವಿಚಾರಕ ರಾದ ಶ್ರೀ ಮತಿ ಶಿಲ್ಪಾ, ಶ್ರೀ ನಾಗರಾಜ್ ಸೇವಾಪ್ರತಿನಿಧಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *