ಪ್ರಸ್ತುತ ಕೋವಿಡ್ 2ನೇ ಅಲೆಯ ಪರಿಸ್ಥಿತಿಯಲ್ಲಿ ಭವಿಷ್ಯನಿಧಿ
ಸದಸ್ಯರಿಗೆ 2ನೇ ಬಾರಿ ಮುಂಗಡ ಹಣವನ್ನು ಪಡೆಯಲು ಅವಕಾಶ
ಕಲ್ಪಿಸಲಾಗಿದೆ. ಅಗತ್ಯವಿರುವ ಭವಿಷ್ಯನಿಧಿ ಸದಸ್ಯರು ಇದರ
ಪ್ರಯೋಜನ ಪಡೆಯಬಹುದಾಗಿದೆ.
ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಭವಿಷ್ಯನಿಧಿ ಸದಸ್ಯರ
ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡಲು, ಭವಿಷ್ಯನಿಧಿ
ಸಂಸ್ಥೆಯು ಚಂದಾದಾರರಿಗೆ ಕೋವಿಡ್-19ರ ಅಡಿಯಲ್ಲಿ ವಿಶೇಷ
ಮುಂಗಡ ಸೌಲಭ್ಯವನ್ನು ಒದಗಿಸಿತ್ತು. ಸಾಮಾಜಿಕ ಭದ್ರತೆ 2020ರ
ಸಂಹಿತೆಯ ಸೆಕ್ಷನ್-142ನ್ನು ಮೇ 30 ರಿಂದ ಅನ್ವಯಗೊಳಿಸಲಾಗಿದ್ದು,
ಸಂಹಿತೆಯ ನಿಬಂಧನೆಗಳನುಸಾರ ಫಲಾನುಭವಿಯ
ಗುರುತನ್ನು ಸ್ಥಾಪಿಸಲು ಆಧಾರ್ ಸಂಖ್ಯೆ ಅವಶ್ಯಕವಾಗಿರುತ್ತದೆ.
ಭವಿಷ್ಯನಿಧಿ ಸಂಸ್ಥೆಯು ಜೂ.1 ರಿಂದ ಇಸಿಆರ್ ಸಲ್ಲಿಸಲು ಸದಸ್ಯರ
ಆಧಾರ್ ಅನ್ನು ಕಡ್ಡಾಯವಾಗಿ ಯುಎಎನ್ ಸಂಖ್ಯೆಯೊಂದಿಗೆ ಲಿಂಕ್
ಮಾಡಲು ಆದೇಶಿಸಲಾಗಿದ್ದು, ಎಲ್ಲಾ ಉದ್ಯೋಗದಾತರು ಜೂ.1 ರಿಂದ ಇಸಿಆರ್
ಫೈಲ್ ಮಾಡಲು ಭವಿಷ್ಯನಿಧಿ ಸದಸ್ಯರ ಆಧಾರ್ ಅನ್ನು ಯುಎಎನ್
ಸಂಖ್ಯೆಯೊಂದಿಗೆ ಜೋಡಿಸುವುದು ಕಡ್ಡಾಯವಾಗಿರುತ್ತದೆ ಎಂದು
ಭವಿಷ್ಯನಿಧಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.