ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಕ್ಷೇತ್ರದಲ್ಲಿ ಶಿಕಾರಿಪುರ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ
ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದು ರೈತರಿಗೆ ರಸಗೊಬ್ಬರ ಬಿತ್ತನೆ ಬೀಜ ಮತ್ತು ಅಗತ್ಯ ವಸ್ತುಗಳ ಖರೀದಿಗೆ ಲಾಕ್ ಡೌನ್ ಇರುವದರಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿರುತ್ತದೆ ರೈತರಿಗೆ ತೊಂದರೆಯಾಗಿದ್ದು ಈ ಕೂಡಲೇ ರೈತರಿಗೆ ಅವಶ್ಯಕ ಇರುವ ಬಿತ್ತನೆ ಬೀಜ , ಗೊಬ್ಬರ ಖರೀದಿಸಲು ಅವಕಾಶ ಕೊಡಬೇಕೆಂದು ತಾಸಿಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಮಿತಿ ಶಿಕಾರಿಪುರ ಅಧ್ಯಕ್ಷರು ಡಿಎಸ್ ಮಲ್ಲಿಕ್ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಣಿ ಮಾಲಾತೇಶಣ್ಣ ,ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು ಮಲತೇಶ್ ಭಂಡಾರಿ ,ಪುರಸಭಾ ಸದಸ್ಯರು ರೋಷನ್ ಬೇಗ್ ,NSUI ಘಟಕದ ಅಧ್ಯಕ್ಷರು ಶಿವು ಹುಲ್ಮರ್ ಹಾಗೂ ಸಾಕಷ್ಟು ಕಾರ್ಯಕರ್ತರು ಪಾಲ್ಗೊಂಡಿದ್ದರು