ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ -೫೨ ರ ಬಾಳೆಬರೆ ಘಾಟ್‌ನಲ್ಲಿ ಕಾಂಕ್ರಿಟ್ ಪೇವ್‌ಮೆಂಟ್ ನಿರ್ಮಿಸುವ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧ ಮತ್ತು ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಜೂನ್ ೫ ರವರೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಪ್ರಾಕೃತಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿರುವುದರಿAದ ಜೂನ್ ೧೫ ರವರೆಗೆ ಈ ಅಧಿಸೂಚನೆಯನ್ನು ವಿಸ್ತರಿಸಲಾಗಿದೆ.
ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ -೫೨ ರ ಬಾಳೆಬರೆ ಘಾಟ್ ೪೦.೪೮ ರಿಂದ ೪೧.೨೭೪ ಹಾಗೂ ೪೨.೩೩೨ ರಿಂದ ೪೩.೦೦ ರ ಎರಡು ಭಾಗದಲ್ಲಿ ೧೫೦೦ ಮೀ ಕಾಂಕ್ರೀಟ್ ಪೇವ್‌ಮೆಂಟ್ ಕಾಮಗಾರಿ ನಡೆಸಲು ಈ ರಸ್ತೆಯಲ್ಲಿ ಮೇ ೨೨ ರಿಂದ ಜೂನ್ ೦೫ ರವರೆಗೆ ವಾಹನ ಸಂಚಾರ ನಿಷೇಧ ಮತ್ತು ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಜೂನ್ ೫ ರವರೆಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿತ್ತು.
ಆದರೆ ಅಕಾಲಿಕ ತೌಕ್ತೆ ಮತ್ತು ಯಾಸ್ ಚಂಡಮಾರುಗಳು ಪ್ರಾರಂಭವಾದ್ದರಿAದ ಕಚ್ಚಾ ವಸ್ತುಗಳ ಕೊರತೆಯಿಂದ ಕಾಮಗಾರಿಯನ್ನು ನಿಗದಿತ ಕಾಲಾವಕಾಶದೊಳಗೆ ಮುಗಿಸಲು ಸಾಧ್ಯವಾಗದೇ ಇರುವುದರಿಂದ ವಾಹನ ಸಂಚಾರ ನಿಷೇಧ ಮತ್ತು ಪರ್ಯಾಯ ಮಾರ್ಗ ಅಧಿಸೂಚನೆಯನ್ನು ಜೂ ೧೫ ರವರೆಗೆ ವಿಸ್ತರಿಸಿ ಕೆಳಕಂಡ ಮಾರ್ಗದಲ್ಲಿ ಸಂಚರಿಸುವAತೆ ಜಿಲ್ಲಾಧಿಕಾರಿಗಳಾದ ಕೆ.ಬಿ.ಶಿವಕುಮಾರ್ ಆದೇಶಸಿದ್ದಾರೆ.
ವಾಹನ ಸಂಚಾರಕ್ಕಾಗಿ ಹಾಲಿ ಬಳಸುತ್ತಿರುವ ರಸ್ತೆಗಳ ವಿವರ ವಾಹನಗಳು ಸಂಚರಿಸಬೇಕಾದ ಪರ್ಯಾಯ ಮಾರ್ಗಗಳ ವಿವರ
೧ ರಾಜ್ಯ ಹೆದ್ದಾರಿ ೫೨ ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು ತೀರ್ಥಹಳ್ಳಿ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆ
೨ ತೀರ್ಥಹಳ್ಳಿ-ಯಡೂರು-ಹುಲಿಕಲ್ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳು ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ನಗರ-ಕೊಲ್ಲೂರು-ಕುಂದಾಪುರ ರಸ್ತೆ
೩ ಶಿವಮೊಗ್ಗ ಸಾಗರ ಕಡೆಯಿಂದ ಹೊಸನಗರ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮಧ್ಯಮ ವಾಹನಗಳೂ ಹೊಸನಗರ-ನಗರ-ಕೊಲ್ಲೂರು-ಕುಂದಾಪುರ ರಸ್ತೆ
೪ ಶಿವಮೊಗ್ಗ/ಸಾಗರ ಹಾಗೂ ತೀರ್ಥಹಳ್ಳಿ ಕಡಯಿಂದ ಕುಂದಾಪುರಕ್ಕೆ ಹೋಗುವ ಭಾರೀ ಪ್ರಮಾಣದ ವಾಹನಗಳು ಬಟ್ಟೆಮಲ್ಲಪ್ಪ-ಸಾಗರ-ಗೇರುಸೊಪ್ಪ-ಹೊನ್ನಾವರ-ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದು

Leave a Reply

Your email address will not be published. Required fields are marked *