ರಾಜ್ಯದಲ್ಲಿ ಕೊರೋನಾ ಹೆಚ್ಚಿರುವ ಸಂದರ್ಭದಲ್ಲಿ ಸರ್ಕಾರ ಸರಿಯಾದ ರೀತಿಯಲ್ಲಿ ಕೊರೋನಾ ಸೋಂಕಿತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದಿರುವ ಕಾರಣ ವಿರೋಧ ಪಕ್ಷದ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ಬಹಳಷ್ಟು ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ನಾವು ಪಕ್ಷದ ಹೋರಾಟಕ್ಕೆ ಬೆಂಬಲಕ್ಕೆ ನಿಂತು ಇನ್ನೂ ಹೆಚ್ಚಿನ ಶಕ್ತಿ ನೀಡುವ ಕುರಿತು ಶುಕ್ರವಾರ ಬೆಳಿಗ್ಗೆ ನಡೆದ ಜೂಮ್ ಸಭೆಯಲ್ಲಿ ಬಾದಾಮಿ ವಿಧಾನಸಭಾ ಮತಕ್ಷೇತ್ರ ಪ್ರತಿನಿಧಿ ಕಾರ್ಯದರ್ಶಿಯಾಗಿ ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಮಹೇಶ ಎಸ್ ಹೊಸಗೌಡ್ರ ಅವರು ಕ್ಷೇತ್ರದಲ್ಲಿ ಕೊರೋನಾ ಸೊಂಕು 2ನೇ ಅಲೆಯಲ್ಲಿ ಕೈಗೊಂಡಿರುವ ಯೋಜನೆಗಳ ಕುರಿತು, ಕೆಪಿಸಿಸಿ (ಹಿಂ.ವ.ವಿ) ಅಧ್ಯಕ್ಷರಾದ ಶ್ರೀ ಎಂ ಡಿ ಲಕ್ಷ್ಮೀನಾರಾಯಣ ರವರ ಉಪಸ್ಥಿತಿಯ ಜೂಮ್ ಸಭೆಯಲ್ಲಿ ವರದಿ ನೀಡಿದರು.