ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಎನ್‍ಎಫ್‍ಎಸ್‍ಎ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಜೂನ್ ಮಾಹೆಯಲ್ಲಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸಲು ಬಿಡುಗಡೆಯಾದ ಆಹಾರಧಾನ್ಯದ ವಿವರ ಈ ಕೆಳಕಂಡಂತೆ ಇದೆ.
    ಅಂತ್ಯೋದಯ(ಎಎವೈ) ಎನ್‍ಎಫ್‍ಎಸ್‍ಎ ಯೋಜನೆಯಡಿ ಪ್ರತಿ ಪಡಿತರ ಚೀಟಿಗೆ 35 ಕೆ.ಜಿ  ಅಕ್ಕಿ ಹಾಗೂ ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಸದಸ್ಯರಿಗೆ 05 ಕೆ.ಜಿ. ಅಕ್ಕಿ. ಬಿಪಿಎಲ್(ಆದ್ಯತಾ) ಎನ್‍ಎಫ್‍ಎಸ್‍ಎ ಮತ್ತು ಪಿಎಂಜಿಕೆಎವೈ ಅಡಿ ಪ್ರತಿ ಸದಸ್ಯರಿಗೆ 05 ಕೆ.ಜಿ ಅಕ್ಕಿ ಹಾಗೂ ಎನ್‍ಎಫ್‍ಎಸ್‍ಎ ಅಡಿ ಪ್ರತಿ ಪಡಿತರ ಚೀಟಿಗೆ 02 ಕೆ.ಜಿ. ಗೋಧಿಯನ್ನು ಉಚಿತವಾಗಿ ನೀಡಲಾಗುವುದು.
     ಎಪಿಎಲ್(ಆದ್ಯದೇತರ-ಒಪ್ಪಿತ ಪಡಿತರ ಚೀಟಿ) ಏಕ ಸದಸ್ಯ ಪಡಿತರ ಚೀಟಿಗೆ 05 ಕೆ.ಜಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರು ಇರುವ ಪಡಿತರ ಚೀಟಿಗೆ ಪ್ರತಿ ಕೆ.ಜಿ.ಗೆ ರೂ.15 ರಂತೆ 10 ಕೆ.ಜಿ ಅಕ್ಕಿ ವಿತರಿಸಲಾಗುವುದು.
   ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವ ಆದ್ಯತೇತರ ಅರ್ಜಿದಾರರಿಗೆ (ಆಹಾರ ಧಾನ್ಯವನ್ನು ಪಡೆಯಲು ಇಚ್ಚೆ ವ್ಯಕ್ತಪಡಿಸಿರುವ) ಪ್ರತಿ ಕೆ.ಜಿ.ಗೆ ರೂ.15 ರಂತೆ 10 ಕೆ.ಜಿ ಅಕ್ಕಿ ವಿತರಿಸಲಾಗುವುದು.
ಪೋರ್ಟಬಿಲಿಟಿ : ಅಂತರ್ ರಾಜ್ಯ/ಅಂತರ್ ಜಿಲ್ಲೆ ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರು ಪೋರ್ಟಬಿಲಿಟಿ ಮೂಲಕ ಪಡಿತರ ಪಡೆಯಲು ಅವಕಾಶವಿರುತ್ತದೆ.
       ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ಮಾಹೆಯ 1 ನೇ ತಾರೀಖಿನಿಂದ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ರವರೆಗೆ ಊಟದ ಸಮಯ ಹೊರತುಪಡಿಸಿ ತಿಂಗಳ ಅಂತ್ಯದವರೆಗೆ ಪಡಿತರ ವಿತರಿಸಲಾಗುವುದು. ಪಡಿತರ ಚೀಟಿದಾರರು ಆಧಾರ್ ಆಧಾರಿತ ಬಯೋಮೆಟ್ರಿಕ್ ಅಥವಾ ಓಟಿಪಿ ನೀಡಿ ಪಡಿತರ ಪಡೆಯುವುದು. ಪಡಿತರ ಪಡೆಯುವಾಗ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *