ಆಹ್ವಾನ
ದಾವಣಗೆರೆ ಜಿಲ್ಲೆಯಲ್ಲಿ ತೆರವಾಗಿರುವ ಗೃಹರಕ್ಷಕದಳದ
ಗೌರವ ಸಮಾದೇಷ್ಟರ ಹುದ್ದೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ
ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜೂ. 10 ಕೊನೆಯ ದಿನವಾಗಿರುತ್ತದೆ.
ಜಿಲ್ಲಾ ಗೃಹರಕ್ಷಕದಳದ ಗೌರವ ಸಮಾದೇಷ್ಟರ
ಹುದ್ದೆಯು ಕಳೆದ ಮೇ. 25 ರಿಂದ ತೆರವಾಗಿದ್ದು,
ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿನ ಆಡಳಿತ
ನಿರ್ವಹಣೆಯನ್ನು ನೋಡಿಕೊಳ್ಳಲು ಸ್ಥಳೀಯ ಗೌರವಾನ್ವಿತ
ವ್ಯಕ್ತಿಗಳನ್ನು ಸರ್ಕಾರವು ಗೃಹರಕ್ಷಕದಳದ
ಸಮಾದೇಷ್ಟರನ್ನಾಗಿ ಸರ್ಕಾರ ನೇಮಕ ಮಾಡುತ್ತದೆ. ಈ
ಹುದ್ದೆಯು ಯಾವುದೇ ವೇತನ ಆಧಾರಿತವಾಗಿರದೆ, ಸಂಪೂರ್ಣವಾಗಿ
ಗೌರವಾಧಾರಿತ ಸ್ವಯಂ ಸೇವೆ ಸಲ್ಲಿಸುವುದಾಗಿರುತ್ತದೆ.
ಹುದ್ದೆಯ ಅವಧಿಯು 5 ವರ್ಷಗಳಾಗಿದ್ದು, ಮಿಲಿಟರಿ ಸೇವೆ,
ಪ್ಯಾರಾಮಿಲಿಟರಿ, ಪೊಲೀಸ್ ಸೇವೆಯಲ್ಲಿ 5 ವರ್ಷಗಳ ತೃಪ್ತಿದಾಯಕ ಸೇವೆ
ಅಥವಾ ಎನ್‍ಸಿಸಿ-ಸಿ ಸರ್ಟಿಫಿಕೇಟ್ ಹೊಂದಿರುವವರಿಗೆ ಆದ್ಯತೆ ಇರುತ್ತದೆ.
ಅಭ್ಯರ್ಥಿಯು ಸ್ಥಳೀಯರಾಗಿದ್ದು, ಜಿಲ್ಲಾ ಕೇಂದ್ರಕ್ಕೆ ಕನಿಷ್ಟ 20
ಕಿ.ಮೀ. ವ್ಯಾಪ್ತಿಯಲ್ಲಿ ವಾಸವಿರಬೇಕು. ಹುದ್ದೆಗೆ ಸೇರುವವರು
ಪದವೀಧರರಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 50 ವರ್ಷ
ಮೀರಿರಬಾರದು. ರಾಜಕೀಯ ಸಂಬಂಧಿತ ಸಂಘ-ಸಂಸ್ಥೆಗಳು ಅಥವಾ
ರಾಜಕೀಯ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಿರಬಾರದು.
ಯಾವುದೇ ಅಪರಾಧಕ್ಕಾಗಿ ಶಿಕ್ಷಗೆ ಒಳಗಾಗಿರಬಾರದು.
ಆಸಕ್ತ ಅರ್ಹ ಅಭ್ಯರ್ಥಿಗಳು ಬಯೋಡೇಟಾ ಜೊತೆಗೆ
ಜನ್ಮದಿನಾಂಕ, ವಿದ್ಯಾರ್ಹತೆ, ವಿಳಾಸಕ್ಕೆ ಸಂಬಂಧಿಸಿದ ದಾಖಲಾತಿಗಳೊಂದಿಗೆ
ಅರ್ಜಿಯನ್ನು ಜಿಲ್ಲಾಧಿಕಾರಿಗಳು, ದಾವಣಗೆರೆ ಇವರಿಗೆ ಜೂ. 10 ರ ಒಳಗಾಗಿ
ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರವನ್ನು
ಜಿಲ್ಲಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು ಎಂದು
ಗೃಹರಕ್ಷಕದಳದ ಮಹಾ ಸಮಾದೇಷ್ಟರೂ ಆಗಿರುವ ಆರಕ್ಷಕ
ಮಹಾ ನಿರ್ದೇಶಕರು ಡಿಸಿಜಿ ರೇಣುಕಾ ಕೆ. ಸುಕುಮಾರ್ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.