ಕೋವಿಡ್-19 ಸೋಂಕನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ
ಜಿಲ್ಲೆಯಲ್ಲಿರುವ ಮಾನಸಿಕ ಅಸ್ವಸ್ಥರು ಮತ್ತು ವಿಕಲಚೇತನರು
ಲಸಿಕೆಯನ್ನು ಪಡೆಯುವ ಬಗ್ಗೆ ಅರಿವು ಮೂಡಿಸುವ
ಅಭಿಯಾನವನ್ನು ಶುಕ್ರವಾರದಂದು ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರದ ವತಿಯಿಂದ ನಗರದಲ್ಲಿ ಕೈಗೊಳ್ಳಲಾಯಿತು.
ಕೋವಿಡ್-19 ರ 2ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ದಾವಣಗೆರೆ
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜನರಲ್ಲಿ ಜಾಗೃತಿ ಮೂಡಿಸುವ
ನಿಟ್ಟಿನಲ್ಲಿ ಪ್ರಚಾರ ಕಾರ್ಯಕ್ರಮವನ್ನು ಜಿಲ್ಲಾಯಾದ್ಯಂತ
ಹಮ್ಮಿಕೊಳ್ಳಲಾಗಿದೆ.  
ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 18,047 ನೋಂದಾಯಿತ
ಅಂಗವಿಕಲರಿದ್ದು ಉಚ್ಚನ್ಯಾಯಾಲಯದ ನಿರ್ದೇಶನದಂತೆ 18 ವರ್ಷ
ಮೇಲ್ಪಟ್ಟ ಜಿಲ್ಲೆಯ ಎಲ್ಲ ಅಂಗವಿಕಲರಿಗೆ ಆದ್ಯತೆ ಮೆರೆಗೆ ಲಸಿಕೆ
ನೀಡಬೇಕಾಗಿರುತ್ತದೆ. ಅಂಗವಿಕಲರಿಗೆ ಕೊರೊನಾ ತಗುಲಿದ್ದಲ್ಲಿ
ಅವರು ಸಾಮಾನ್ಯ ಜನರಿಗಿಂತ ಹೆಚ್ಚಿನ ತೊಂದರೆಯನ್ನು
ಅನುಭವಿಸುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆಯ ಎಲ್ಲಾ
ಮಾನಸಿಕ ಅಸ್ವಸ್ಥರು ಮತ್ತು ವಿಕಲಚೇತನರು ಯಾವುದೇ
ಭಯಕ್ಕೆ ಒಳಗಾಗದೇ ಸರ್ಕಾರದವರು ಉಚಿತವಾಗಿ ನೀಡುವ
ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅವಿರತವಾಗಿ
ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಇಲಾಖೆಗಳ ಜೊತೆ ಸಂಪರ್ಕ ಸಾಧಿಸಿ
ಮಾನಸಿಕ ಅಸ್ವಸ್ಥರು ಮತ್ತು ವಿಕಲಚೇತನರ ಪಟ್ಟಿಯನ್ನು
ಸಿದ್ಧಪಡಿಸಿ ಅಂತಹ ವ್ಯಕ್ತಿಗಳಿಗೆ ಜಿಲ್ಲಾ ಕೇಂದ್ರವಷ್ಟೇ ಅಲ್ಲದೇ ಗ್ರಾಮೀಣ
ಭಾಗದಲ್ಲಿಯೂ ಸಹ ಲಸಿಕೆ ಲಭ್ಯವಾಗುವಂತೆ ಕ್ರಮ
ತೆಗೆದುಕೊಳ್ಳಲಾಗಿದೆ.
ಕೋವಿಡ್-19 ರ ಪ್ರತಿಬಂಧಕದ ಲಸಿಕಾ ಕಾರ್ಯಕ್ರಮಗಳು
ನಿರಂತರವಾಗಿ ನಡೆಯುತ್ತಿದ್ದು ಲಸಿಕೆ ಪಡೆಯುವುದರಿಂದ
ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಜೂ.2 ರಿಂದ ವಿಶೇಷವಾಗಿ ಅಂಗವಿಕಲರಿಗೆ ಲಸಿಕೆ ನೀಡುವ ಅಭಿಯಾನವನ್ನು
ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬ ಅಂಗವಿಕಲರು ಮತ್ತು ಅವರ
ಜವಾಬ್ದಾರಿ ವಹಿಸಿಕೊಂಡ ಒಬ್ಬ ವ್ಯಕ್ತಿ ಕೋವಿಡ್-19 ರ ಪ್ರತಿಬಂಧಕ
ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಹಾಗೂ ಲಸಿಕಾ ಜಾಗೃತಿಯಲ್ಲಿ
ಸಕ್ರಿಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ
ನ್ಯಾಯಧೀಶರಾದ ಗೀತಾ.ಕೆ.ಬಿ ಹಾಗೂ ಜಿಲ್ಲಾ ಕಾನೂನು ಸೇವಾ
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *