ಆರ್ಯವೈಶ್ಯ ಸಮಾಜಕ್ಕೆ ಉಚಿತ ಕಾನ್ಸ್‌ಟೇಂಟರ್ ವಿತರಣೆ
ದಾವಣಗೆರೆ : ಹಣ, ಅಂತಸ್ತು,ಐಶ್ವರ್ಯ ಎಲ್ಲವನ್ನು ಸಂಪಾದಿಸಿದ್ರು ಆರೋಗ್ಯವನ್ನು ಸಂಪಾದನೆ ಮಾಡುವುದು ಸುಲಭವಲ್ಲ. ಕೊರೊನಾದಿಂದ ಮುಕ್ತಿ ಹೊಂದಲು ಸೋಂಕಿತರಿಗೆ ಕೈಲಾದಷ್ಟು ಸಹಾಯ ಹಸ್ತ ಚಾಚುವ ಮೂಲಕ ಬದುಕನ್ನು ಸಾರ್ಥಕವನ್ನಾಗಿ ಮಾಡಿಕೊಂಡಿದ್ದಾರೆ ಮಂಜುನಾಥ್ ಗುಂಡಾಳ್.
ಹೌದು..ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿನ ಸಿಎಸ್‌ಸಿ ಕೇಂದ್ರದಲ್ಲಿ ಆರ್ಯವೈಶ್ಯ ಸಮಾಜಕ್ಕೆ ನೀಡಲಾಗುವ ಮೂರು ಕಾನ್ಸ್‌ಟೇಂಟರ್‌ನ್ನು ಸಂಸದ ಜಿ.ಎಂ.ಸಿದ್ದೇಶ್ವರ ಮೂಲಕ ಗುರುವಾರ ಉದ್ಘಾಟಿಸಿ ಈ ರೀತಿ ಅಭಿಪ್ರಾಯಪಟ್ಟರು.
ಇವುಗಳ ಬೆಲೆ ಅಂದಾಜು 2 ಲಕ್ಷ ಮೇಲ್ಪಟ್ಟಾಗಿದ್ದುಘಿ, ಆಕ್ಸಿಜನ್ ಪ್ರಮಾಣ ಕಡಿಮೆ ಇರುವವರು ಇದನ್ನು ಬಳಸಿಕೊಳ್ಳಬಹುದು. ಇವುಗಳನ್ನು ಆರ್ಯವೈಶ್ಯ ಸಮಾಜಕ್ಕಾಗಿ ಮಾತ್ರವಲ್ಲಘಿ, ಬೇರೆ ಸಮಾಜಕ್ಕೂ ಉಚಿತವಾಗಿ ನೀಡಲಾಗುವುದು ಎಂದು ಉದ್ಯಮಿ ಮಂಜುನಾಥ್ ಹೇಳಿದರು.
ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಅವಶ್ಯವಾಗಿರುವ ಸುಮಾರು 4-5 ಲಕ್ಷಕ್ಕೂ ಅಧಿಕ ಮೌಲ್ಯದ ಆಮ್ಲಜನಕದ ಸಿಲಿಂಡರ್ ಮತ್ತು ವೆಂಟಿಲೇಟರ್ ಸೇರಿದಂತೆ ವಿವಿಧ ರೀತಿಯ ಕೋವಿಡ್ ನಿರ್ಮೂಲನೆಗೆ ಬೇಕಾಗುವ ಪರಿಕರಗಳು ಸಿಗುವುದು ಕಷ್ಟವಾಗಿದ್ದ ಹಿನ್ನೆಲೆಯಲ್ಲಿ ಕಾನ್ಸ್‌ಟೇಂಟರ್‌ನ್ನು ಕೊಡುವ ಮೂಲಕ ಮಾನವಿಯತೆ ಮೆರೆದಿದ್ದಾರೆ. ಇದೇ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರನ್ನು ಸನ್ಮಾನಿಸಲಾಯಿತು. ಹಲವರಿಗೆ ಉಚಿತ ಮಾಸ್ಕ್ ವಿತರಣೆ ಮಾಡಲಾಯಿತು.
ಕಿಟ್ ವಿತರಣೆ : ಉದ್ಯಮಿ ಮಂಜುನಾಥ್ ಗುಂಡಾಳ್ ಕೇವಲ ಕಾನ್ಸ್‌ಟೇಂಟರ್‌ಗಳನ್ನು ಮಾತ್ರ ಕೊಡುವುದಲ್ಲದೇ ಬಡತನದ ರೇಖೆಯಲ್ಲಿರುವವರಿಗೆ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಿದರು.
ಉದ್ಯಮಿ ಮಂಜುನಾಥ್ ಅವರ ಸಮಾಜಕ್ಕೆ ಉತ್ತಮ ಕೆಲಸ ಮಾಡಿದ್ದಾರೆ. ಮುಂದೆ ಇಂತಹ ಹಲವು ಕಾರ್ಯಕ್ರಮಗಳನ್ನು ಕೈಗೊಂಡು ಬಡವರಿಗೆ ಸಹಾಯ ಮಾಡಲಿ.
– ಜಿ.ಎಂ.ಸಿದ್ದೇಶ್ವರ, ಸಂಸದ
ಯಾರಿಗೆ ಅಗತ್ಯವಿದೆಯೋ ಅವರು ಕಾನ್ಸ್‌ಟೇಂಟರ್‌ಗಳು ನಮ್ಮಿಂದ ಉಚಿತವಾಗಿ ತೆಗೆದುಕೊಂಡು ಹೋಗಬಹುದಾಗಿದೆ. ತಾಯಿ ಕನ್ನಿಕಾಪರಮೇಶ್ವರಿ ಇಂತಹ ಕಾರ್ಯ ಮಾಡಲು ಶಕ್ತಿ ಕೊಟ್ಟಿದ್ದುಘಿ, ಮುಂದಿನ ದಿನಗಳಲ್ಲಿ ಬಡವರಿಗೆ ಇನ್ನಷ್ಟು ಸಹಾಯ ಮಾಡುವೆ.
- ಮಂಜುನಾಥ್ ಗುಂಡಾಳ್, ದಾವಣಗೆರೆ ಉದ್ಯಮಿ