ನಗರದ ಮೆಗ್ಗಾನ್ ಭೋಧನಾ ಆಸ್ಪತ್ರೆ ಕೋವಿಡ್ ಲಸಿಕಾ ಕೇಂದ್ರದಲ್ಲಿ ನಿಷ್ಪಕ್ಷಪಾತವಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನೋಡಲ್ ಅಧಿಕಾರಿಯಾದ ಡಾ:ಪ್ರವೀಣ್‌ಕುಮಾರ್‌ರವರನ್ನು ಏಕಾಏಕಿ ಬದಲಾವಣೆ ಮಾಡಿರುವುದು ತೀವ್ರ ಖಂಡನೀಯ.
ದಿನನಿತ್ಯ ಕೋವಿಡ್ ಲಸಿಕೆಗಾಗಿ ಜನ ಬೆಳ್ಳಂಬೆಳಗ್ಗೆ ಸರತಿ ಸಾಲಿನಲ್ಲಿ ಬಂದು ಟೋಕನ್‌ಗಳನ್ನು ಪಡೆದು ಲಸಿಕೆಯನ್ನು ಪಡೆಯುತ್ತಿದ್ದರು. ಇಂತಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ದಿನನಿತ್ಯ ಸಾರ್ವಜನಿಕರಿಗೆ ಲಸಿಕೆ ಕೊಡುವುದರಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ನೋಡಲ್ ಅಧಿಕಾರಿಯನ್ನು ಏಕಾಏಕಿ ಬದಲಾವಣೆಯ ಅವಶ್ಯಕತೆ ಏನಿತ್ತು? ಎಂದು ಯುವ ಕಾಂಗ್ರೆಸ್ ಪ್ರಶ್ನಿಸುತ್ತದೆ.
ಜನಪ್ರತಿನಿಧಿಗಳು ಹಾಗೂ ಸಿಮ್ಸ್ನ ಕೆಲವು ಅಧಿಕಾರಿಗಳು ತಮ್ಮ ಬೆಂಬಲಿಗರಿಗೆ ಕುಟುಂಬದವರಿಗೆ ಹಾಗೂ ಆತ್ಮೀಯರಿಗೆ ಟೋಕನ್ ಕೊಡಲಿಲ್ಲ ಎಂಬ ಕಾರಣಕ್ಕೆ ರಾಜಕೀಯ ಹಾಗೂ ಮೇಲಾಧಿಕಾರಿಗಳ ಪ್ರಭಾವವನ್ನು ಬಳಸಿ ತಮಗೆ ಬೇಕಾದಂತಹ ಅಧಿಕಾರಿಯನ್ನು ನೇಮಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಬಡವರು ಮಧ್ಯಮವರ್ಗದವರು, ವಯೋವೃದ್ಧರು ಬೆಳಗಿನಿಂದಲೇ ಸರತಿ ಸಾಲಿನಲ್ಲಿ ನಿಂತರೂ ಸಹ ಟೋಕನ್ ಪಡೆಯುವುದು ಅಸಾಧ್ಯವಾಗಿರುತ್ತದೆ. ಪ್ರಭಾವಿಗಳು ಒಬ್ಬೊಬ್ಬರೂ ಹತ್ತರಿಂದ ಹದಿನೈದು ಟೋಕನ್‌ಗಳನ್ನು ಒಳಗಿಂದೊಳಗೆ ಪಡೆದು ಲಸಿಕೆ ಹಾಕಿಸಿಕೊಳ್ಳುವುದರಲ್ಲಿ ಸಫಲರಾಗುತ್ತಾರೆ. ಇದರಿಂದ ಸರತಿ ಸಾಲಿನಲ್ಲಿ ನಿಂತಹವರಿಗೆ ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗು ಹೋಗುವ ಸಂಭವವೇ ಹೆಚ್ಚಾಗಿರುತ್ತದೆ
ಈ ಕೂಡಲೇ ನೋಡಲ್ ಅಧಿಕಾರಿಯ ಬದಲಾವಣೆ ಮಾಡಿರುವ ಆದೇಶವನ್ನು ಹಿಂಪಡೆದು ಈಗಿರುವ ನೋಡಲ್ ಅಧಿಕಾರಿಯು ಯಥಾಸ್ಥಿತಿಯಾಗಿ ಕರ್ತವ್ಯ ನಿರ್ವಹಿಸಲು ಆದೇಶಿಸಬೇಕೆಂದು ಈ ಮೂಲಕ ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.
ಯುವ ಕಾಂಗ್ರೆಸ್ ಮನವಿಗೆ ಸ್ಪಂದಿಸಿ ಅಧಿಕಾರಿಯವರ ಬದಲಾವಣೆ ಆದೇಶವನ್ನು ಹಿಂಪಡೆಯದೇ ಇದ್ದಲ್ಲಿ ಹೋರಾಟ ಅನಿವಾರ್ಯ ಎಂದುಶಿವಮೊಗ್ಗ ಜಿಲ್ಲಾಯುವ ಕಾಂಗ್ರೆಸ್ ಈ ಮೂಲಕ ಎಚ್ಚರಿಸುತ್ತಿದ್ದೇವೆ.
ಮನವಿಯ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ. ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್ ಗ್ರಾಮಾಂತರ ಅಧ್ಯಕ್ಷ ಈ.ಟಿ. ನಿತಿನ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಕಾಂಗ್ರೆಸ್ ಎಸ್. ಕುಮರೇಶ್, ಪದಾಧಿಕಾರಿಗಳಾದ ವೆಂಕಟೇಶ್ ಕಲ್ಲೂರು, ಕೆ.ಎಲ್. ಪವನ್, ರಾಹುಲ್ ,ಗಗನ್ ಗೌಡ ಇತರರು ಇದ್ದರು