ಹೊನ್ನಾಳಿ : ಸಾಮಾನ್ಯ ಜನಪ್ರತಿನಿಧಿಗಳು ಗ್ರಾಮವಾಸ್ತವ್ಯ ಮಾಡಿ ಜನರ ಕಷ್ಟಕಾರ್ಪಣ್ಯ ಕೇಳುವುದನ್ನು ನೋಡಿದ್ದೇವೆ. ಆದರೇ ಇಲ್ಲೋಬ್ಬ ಜನಪ್ರತಿನಿಧಿಯೊಬ್ಬರು ಕೋವಿಡ್ ಕೇರ್ ಸೆಂಟರ್‍ನಲ್ಲಿ ವಾಸ್ತವ್ಯ ಮಾಡಿ ಸೋಂಕಿತರ ಆರೋಗ್ಯ ವಿಚಾರಿಸಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಹೌದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮೂರು ದಿನಗಳ ಕಾಲ ಕೋವಿಡ್ ಕೇರ್ ಸೆಂಟರ್‍ನಲ್ಲಿ ವಾಸ್ತವ್ಯ ಮಾಡಿ ಸೋಂಕಿತರಿಗೆ ಮನೋಬಲ ತುಂಬವ ಕೆಲಸ ಮಾಡುತ್ತಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ನಾನು ಕೋವಿಡ್ ಕೇರ್ ಸೆಂಟರ್‍ನಲ್ಲಿ ಪ್ರತೇಕ ಕೊಠಡಿಯಲ್ಲಿ ವಾಸ್ತವ್ಯ ಮಾಡಿದ್ದು, ಇದೊಂದು ವಿಶೇಷ ಅನುಭವಾಗಿದೆ ಎಂದರು. ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ ಮಾಡುವುದರಿಂದ ಕೋವಿಡ್ ಕೇಂದ್ರದಲ್ಲಿ ಆಹಾರದ ಗುಣಮಟ್ಟದ ಜೊತೆಗೆ ಸಿಬ್ಬಂದಿಗಳು ಹೇಗೆ ಕೆಲಸ ಮಾಡುತ್ತಾರೆಂದು ತಿಳಿಯಲು ಅನುಕೂಲವಾಗಿದೆ ಎಂದರು.
ಕೊರೊನಾವನ್ನು ನಾವು ಯಾರೂ ಕೂಡ ಬಯಸಿದ್ದಲ್ಲಾ, ಆದರೇ ಕೊರೊನಾ ಮಹಾಮಾರಿ ಇಡೀ ವಿಶ್ವವನ್ನೇ ನಲುಗಿಸಿದೆ ಎಂದ ಶಾಸಕರು, ಕೊರೊನಾವನ್ನು ಯಾರೂ ಕೂಡ ಆಲಸ್ಯ ಮಾಡ ಬೇಡಿ ಎಂದರು.
ಕೊರೊನಾ ಎರಡನೇ ಅಲೆ ಸಾಕಷ್ಟು ಸಾವು ನೋವು ಉಂಟು ಮಾಡಿದ್ದು, ಮೂರನೇ ಅಲೆ ಬರ ಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದ ಶಾಸಕರು, ಮುನ್ನೇಚ್ಚರಿಕಾ ಕ್ರಮವಾಗಿ ಈಗಾಗಲೇ ಮೂರನೇ ಅಲೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ ಎಂದರು.
ಸೋಂಕಿತರಿಗಾಗೀ ಸಂಗೀತ ಕಾರ್ಯಕ್ರಮ ಆಯೋಜನೆ : ಕೋವಿಡ್ ಕೇಂದ್ರದಲ್ಲಿನ ಸೋಂಕಿತರಿಗೆ ಮನೋರಂಜನೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅರಬಗಟ್ಟೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದ್ದು ಬೆಂಗಳೂರಿನ ಕಲಾ ತಂಡ ಸೋಂಕಿತರಿಗೆ ಸಂಗೀತದ ರಸದೌತಣ ಉಣಬಡಿಸಲಿದೆ. ಕೋವಿಡ್ ಕೇಂದ್ರದಲ್ಲಿ 180 ಕ್ಕೂ ಹೆಚ್ಚು ಜನರಿದ್ದು ಸಂಗೀತವನ್ನು ಸವಿಯುವ ಮೂಲಕ ಸೋಂಕಿತರು ಆನಂದಿಸುತ್ತಿದ್ದಾರೆ, ಅಲ್ಲದೇ ಸೋಂಕಿನ ನೋವನ್ನು ಮರೆಯುತ್ತಿದ್ದಾರೆ ಎಂದರು.
ಕೋವಿಡ್ ಕೇಂದ್ರದಲ್ಲೇ ಶಾಸಕರ ವಾಸ್ತವ್ಯ : ಮೂರು ದಿನಗಳ ಕಾಲ ರೇಣುಕಾಚಾರ್ಯ ಕೋವಿಡ್ ಕೇರ್ ಸೆಂಟರ್‍ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸೋಂಕಿತ ಕಷ್ಟ ಸುಖಗಳನ್ನು ತಿಳಿಯ ಬೇಕು, ಅವರೊಂದಿಗೆ ಮನೆ ಮಗನಾಗಿನಾನಿರ ಬೇಕೆಂಬ ಉದ್ದೇಶದಿಂದ ಮೂರು ದಿನಗಳ ಕಾಲ ಶಾಸಕರು ಕೋವಿಡ್ ಕೇಂದ್ರದ ಪ್ರತೇಕ ಕೊಠಡಿಯಲ್ಲಿ ವಾಸ್ತವ್ಯ ಮಾಡಿದ್ದು, ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ ಅಲ್ಲದೇ ಯಾರೂ ಕೂಡ ಭಯ ಪಡ ಬೇಡಿ ಎಂಬ ಸಂದೇಶ ಸಾರುತ್ತಿದ್ದಾರೆ.
ಕೋವಿಡ್ ಕೇರ್ ಸೆಂಟರ್‍ನಲ್ಲಿ ವಾಸ್ತವ್ಯ ಮಾಡಿದ ಮೊದಲ ಜನಪ್ರತಿನಿಧಿ : ಅರಬಗಟ್ಟೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಸ್ತವ್ಯ ಮಾಡಿದ್ದು, ಮೂರು ದಿನಗಳ ಕಾಲ ಅಲ್ಲೇ ವಾಸ್ತವ್ಯ ಮಾಡಲಿದ್ದು, ಕೋವಿಡ್ ಕೇರ್ ಸೆಂಟರ್‍ನಲ್ಲಿ ವಾಸ್ತವ್ಯ ಮಾಡಿದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೋಂಕಿತರಿಗೆ ಯೋಗಾಬ್ಯಾಸ : ಕೋವಿಡ್ ಕೇರ್ ಸೆಂಟರ್‍ನಲ್ಲಿ ರಾತ್ರಿ ಕಳೆದ ಶಾಸಕರು ಬೆಳ್ಳಂಬೆಳ್ಳಿಗೆ ಎದ್ದು ವಾಯುವಿವಾಹ ಮಾಡಿ, ಕೋವಿಡ್ ಕೇರ್ ಸೆಂಟರ್‍ನಲ್ಲಿರುವ ಸೋಂಕಿತರಿಗೆ ಯೋಗಾಬ್ಯಾಸ ಮಾಡಿಸಿದರು. ಯೋಗಾಸನದ ವಿವಿಧ ಆಯಾಮಗಳನ್ನು ಮಾಡಿಸಿ ಶಾಸಕರು ಪ್ರತಿಯೊಬ್ಬರೂ ಕೂಡ ಯೋಗಾಸನ ಮಾಡಿಸವನ್ನು ಮೈಗೂಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಉಪಹಾರ ತಯಾರಿಗೆ ಸಹಾಯ ಮಾಡಿ, ಉಪಹಾರ ಬಡಿಸಿದ ಶಾಸಕರು : ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಸೋಂಕಿತರಿಗೆ ಬೆಳಗಿನ ಉಪಹಾರ ತಯಾರಿಸುವ ಕೊಠಡಿಗೆ ತೆರಳಿದ ಶಾಸಕರು ಅಡುಗೆ ಸಿಬ್ಬಂದಿಗಳೊಂದಿಗೆ ಪುಳಿಯೋಗರೆ ತಯಾರಿಸಲು ಸಹಾಯ ಮಾಡಿದರಲ್ಲದೇ, ಖುದ್ದು ಅವರೇ ಸೋಂಕಿತರಿಗೆ ಉಪಹಾರ ಬಡಿಸಿದರಲ್ಲದೇ, ಸೋಂಕಿತರಿಗೆ ತಯಾರಿಸಿದ ಉಪಹಾರ ಸೇವಿಸಿದರು.