ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಕೇರ್ಸ್ ಕೊರೋನಾ ಸೋಂಕಿತರ ನೆರವಿಗೆಂದು ವ್ಯವಸ್ಥೆ ಮಾಡಿರುವ ಆಂಬುಲೆನ್ಸ್ ವಾಹನಗಳ ಚಾಲಕರು, ಸಿಬ್ಬಂದಿಗೆ ಕೆಲವೊಂದು ಸಲಹೆ, ಸೂಚನೆಗಳನ್ನು ರಾಜರಾಜೇಶ್ವರಿನಗರ ಗ್ಲೋಬಲ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ನೀಡಿದರು. ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಕುಣಿಗಲ್ ಶಾಸಕ ರಂಗನಾಥ್, ಮುಖಂಡರಾದ ಹನುಮಂತರಾಯಪ್ಪ, ರಾಜಕುಮಾರ್, ಯುವ ಮುಖಂಡ ನಲಪಾಡ್, ಕುಸುಮಾ ಹನುಮಂತರಾಯಪ್ಪ ಉಪಸ್ಥಿತರಿದ್ದರು.