ಹೊನ್ನಾಳಿ : ಕೊರೊನಾ ಲಸಿಕೆಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದ್ದು, ಕೆಲವರು ಅಪಪ್ರಚಾರ ಮಾಡುತ್ತಿದ್ದು ಯಾರೂ ಕೂಡ ಇದಕ್ಕೆ ಕಿವಿಗೊಡದೇ ಸಾರ್ವಜನಿಕರು ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಅವಳಿ ತಾಲೂಕಿನ ಅರಬಗಟ್ಟೆ,ಕುಂಕುವಾ,ಸುರಹೊನ್ನೆ,ಚಟ್ನಳ್ಳಿ, ಸೇರಿದಂತೆ ವಿವಿಧ ಗ್ರಾಮಗಳ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆಯ ಬಗ್ಗೆ ಮಾಹಿತಿ ಪಡೆದು, ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದಿಂದ ಸಾರ್ವಜನಿಕರಿಗೆ ಲಸಿಕೆಗಳನ್ನು ಉಚಿತವಾಗಿ ನೀಡುತ್ತಿದ್ದು ಯಾರೂ ಕೂಡ ಲಸಿಕೆಗಳನ್ನ ನೀಡಿಲ್ಲಾ, ಕೆಲವರು ವಿನಾಃ ಕಾರಣ ಅಪಪ್ರಚಾರ ಮಾಡುತ್ತಿದ್ದು ಇದಕ್ಕೆ ಯಾರೂ ಕಿವಿಗೊಡದೇ, ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.
ಇಂದು ಅವಳಿ ತಾಲೂಕಿಗೆ ಇಂದು ಎರಡು ಸಾವಿರ ಲಸಿಕೆಗಳು ಬಂದಿದ್ದು ಅವುಗಳನ್ನು ಗ್ರಾಮೀಣ ಭಾಗದ ಜನರಿಗೆ ನೀಡುವ ಉದ್ದೇಶದಿಂದ ಸಮರ್ಪಕವಾಗಿ ವಿಂಗಡಿಸಿ ಗ್ರಾಮೀಣ ಭಾಗಗದಲ್ಲೇ ಲಸಿಕೆಗಳನ್ನು ನೀಡುತ್ತಿದ್ದು ಜನರು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾದಿಂದ ದೂರು ಉಳಿಯುವಂಯತೆ ಕಿವಿ ಮಾತು ಹೇಳಿದರು.
ಪ್ರತಿಯೊಬ್ಬರಿಗೆ ಲಸಿಕೆ ಸಿಗ ಬೇಕೆಂದು ಮುಖ್ಯಮಂತ್ರಿಗಳು ಸಂಕಲ್ಪ ಮಾಡಿದ್ದು ಲಸಿಕೆಗಳನ್ನು ಉಚಿತವಾಗಿ ನೀಡುವ ಕೆಲಸ ಮಾಡುತ್ತಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
45 ವರ್ಷ ಮೇಲ್ಟವರಿಗೆ ಲಸಿಕೆ ಹಾಕಿಸುತ್ತಿದ್ದು, 18 ವರ್ಷ ಮೇಲ್ಟವರಿಗೆ ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ಬರಲಿದ್ದು ಅವರಿಗೂ ಲಸಿಕೆ ಹಾಕಲಾಗುವುದು ಎಂದ ಶಾಸಕರು, ಯುವಕರು ಸಹಕರಿಸುವಂತೆ ಮನವಿ ಮಾಡಿದರು.
ಸಾರ್ವಜನಿಕರ ಆಸ್ಪತ್ರೆಗೆ ಭೇಟಿ : ಸರ್ಕಾರಿ ಆಸ್ಪತ್ರೆಯಲ್ಲಿನ ಕೋವಿಡ್ ವಾರ್ಡಗೆ ಭೇಟಿ ನೀಡಿದ ಶಾಸಕರು ಸೋಂಕಿತರ ಆರೋಗ್ಯ ವಿಚಾರಿಸಿ ಅವರಿಗೆ ಧೈರ್ಯ ಹೇಳಿದರು. ಯಾರೂ ಕೂಡ ಭಯ ಪಡುವ ಅವಶ್ಯಕತೆ ಇಲ್ಲಾ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ಆತ್ಮಸೈರ್ಯ ಹೇಳಿದ ಶಾಸಕ ರೇಣುಕಾಚಾರ್ಯ ಮೂರನೇ ಅಲೆ ಬರುವ ಮುನ್ನೂಸಚನೇ ಇದ್ದು ಈಗಾಗಲೇ ಅದಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಗ್ರಾಮೀಣ ಭಾಗದ ಜನರು ಕೊಮ್ಮ ನೆಗಡಿ ಕಾಣಿಸಿಕೊಂಡರೇ ಕೂಡಲೇ ಬಂದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿ ಹೇಳಿದರು.
ಬೆಳಗಿನ ಉಪಹಾರ ವಿತರಣೆ : ಸರ್ಕಾರಿ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರಿಗೆ, ಸಿಬ್ಬಂದಿಗಳಿಗೆ,ಲಸಿಕೆ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರಿಗೆ, ಎಪಿಎಂಸಿ ನೌಕರರಿಗೆ, ಪೊಲೀಸರಿಗೆ ಪ್ರತಿನಿತ್ಯ ಬೆಳಗಿನ ಉಪಹಾರ ಹಾಗೂ ಮದ್ಯಾಹ್ನದ ಊಟ ನೀಡುತ್ತಿದ್ದು ಇಂದೂ ಕೂಡ ಅವರಿಗೆ ಉಪಹಾರ ಹಾಗೂ ಊಟವನ್ನು ಶಾಸಕರ ಸಹೋದರ ಎಂ.ಪಿ.ರಮೇಶ್ ಅವರ ನೇತೃತ್ವದಲ್ಲಿ ವಿತರಿಸಿದರು. ಸೋಂಕಿತರಿಗೆ ಹಾಗೂ ಸಾರ್ವಜನಿಕರಿಗೆ ಉಪಹಾರಕ್ಕೆ ತೊಂದರೆಯಾಗ ಬಾರದು ಎಂಬ ಉದ್ದೇಶದಿಂದ ಉಪಹಾರ ನೀಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದು, ಶಾಸಕರ ಜೊತೆಗೆ ಅವರ ಕುಟುಂಬಸ್ಥರು ಕೈಜೋಡಿಸಿದ್ದಾರೆ.
ವಿವಿಧ ಗ್ರಾಮಗಳಿಗೆ ಶಾಸಕರ ಭೇಟಿ : ಅವಳಿ ತಾಲೂಕಿನ ಅಬರಗಟ್ಟೆ, ಕುಂಕುವಾ,ಸುರಹೊನ್ನೆ,ಚಟ್ನಳ್ಳಿ ಗ್ರಾಮಗಳ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿದ ಶಾಸಕರು ಲಸಿಕೆ ಬಗ್ಗೆ ಮಾಹಿತಿ ಪಡೆದರು. ಗ್ರಾಮೀಣ ಪ್ರದೇಶಗಳಲ್ಲೇ ಜನರಿಗೆ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿದ್ದು ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಬಂದು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಮುಖಂಡರಾದ ನೆಲವೊನ್ನೆ ಮಂಜುನಾಥ್,ಪಲ್ಲವಿರಾಜು, ವಡ್ಡಾ ಸುರೇಶ್ ಸೇರಿದಂತೆ ಮತ್ತೀತತರಿದ್ದರು.