ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಜೂನ್ 14 ರವರೆಗೆ ಜನತಾ ಕಫ್ರ್ಯೂ ಆದೇಶಿಸಿರುವ ಹಿನ್ನೆಲೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2021-22 ನೇ ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಲು ಸಾರ್ವಜನಿಕರಿಗೆ ಕಚೇರಿಗೆ ಬರುವ ಅವಕಾಶ ಇಲ್ಲದ ಕಾರಣ, ಆಸ್ತಿ ತೆರಿಗೆದಾರರು ಇರುವ ಸ್ಥಳಕ್ಕೇ ಪಾಲಿಕೆಯ ಕರ ವಸೂಲಿಗಾರರು ಬಂದು ಇಡಿಸಿ ಯಂತ್ರಗಳ ಮೂಲಕ ಆಸ್ತಿ ತೆರೆಗೆಯನ್ನು ಕಟ್ಟಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಜನತಾ ಕಫ್ರ್ಯೂ ಹಿನ್ನೆಲೆ ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಮಹಾನಗರಪಾಲಿಕೆ ವೆಬ್‍ಸೈಟ್ ವಿಳಾಸ ತಿತಿತಿ.shivಚಿmoggಚಿಛಿiಣಥಿಛಿoಡಿಠಿ.oಡಿg ಮುಖಾಂತರ ಆನ್‍ಲೈನ್ ತಂತ್ರಾಂಶ ಹಾಗೂ ಯುಪಿಐ ಮೊಬೈಲ್ ಆ್ಯಪ್‍ಗಳಾದ ಪೇಟಿಎಂ, ಫೋನ್‍ಪೆ, ಗೂಗಲ್ ಪೇ ಇತರೆ ಮೂಲಕ ಸಹ ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ.
ಮುಂದುವರೆದು ಸರ್ಕಾರದ ಆದೇಶದನುಸಾರ ಜನತಾ ಕಫ್ರ್ಯೂ ನಿರ್ಬಂಧ ಸಡಿಲಗೊಳಿಸಿದಾಗ ಮಹಾನಗರಪಾಲಿಕೆ ಆವರಣದಲ್ಲಿ ಕೌಂಟರ್‍ಗಳನ್ನು ತೆರೆಯಲಾಗುವುದು. ಸರ್ಕಾರದ ಸುತ್ತೋಲೆಯನ್ವಯ ದಿನಾಂಕ: 30-06-2021 ರವರೆಗೆ ಆರ್ಥಿಕ ವರ್ಷ 2021-22 ನೇ ಸಾಲಿಗೆ ಅನ್ವಯಿಸುವ ಆಸ್ತಿ ತೆರಿಗೆ ಮೇಲಿನ ಶೇ.5 ರ ತೆರಿಗೆ ರಿಯಾಯಿತಿ ಸೌಲಭ್ಯದ ಕಾಲಾವಧಿಯನ್ನು ವಿಸ್ತರಿಸಲಾಗಿದ್ದು, ಸಾರ್ವಜನಿಕರು ಈ ರಿಯಾಯಿತಿ ಸೌಲಭ್ಯವನ್ನು ಪಡೆದು ಆಸ್ತಿ ತೆರಿಗೆ ಪಾವತಿ ಮಾಡಬಹುದಾಗಿರುತ್ತದೆ.
ಜೊತೆಗೆ ಈ ಕಚೇರಿಯಿಂದ ನೇಮಿತವಾದ ಕೆಳಕಂಡ ಕರ ವಸೂಲಿಗಾರರು ಮನೆ ಮನೆಗೆ ತೆರಳಿ ಕಂದಾಯ ಪಾವತಿಸಿಕೊಳ್ಳಲು ಬರುತ್ತಿದ್ದು, ಇವರಿಗೆ ಸಹಕರಿಸಿ ಕಂದಾಯ ಪಾವತಿ ಮಾಡಿ ಸ್ಥಳದಲ್ಲೇ ರಸೀದಿಯನ್ನು ಪಡೆಯಬಹುದಾಗಿರುತ್ತದೆ. ಆದ್ದರಿಂದ ಮಾಲೀಕರು ಇದರ ಸದುಪಯೋಗ ಪಡೆದು ಮೇಲಿನಂತೆ ಆಸ್ತಿ ತೆರಿಗೆಯನ್ನು ಪಾವತಿಸಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಹಾಗೂ ಈ ಮೂಲಕ ನಗರದ ಸರ್ವತೋಮುಖ ಅಭಿವೃದ್ದಿಗೆ ಸಹಕರಿಸುವಂತೆ ಪಾಲಿಕೆ ಮಹಾಪೌರರು, ಉಪ ಮಹಾಪೌರರು, ತೆರಿಗೆ ನಿರ್ಧರಣೆ ಮತ್ತು ಹಣಕಾಸು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಆಯುಕ್ತರು ವಿನಂತಿಸಿದ್ದಾರೆ.
ತೆರಿಗೆ ಪಾವತಿಸುವ ರಾಜಸ್ವ ನಿರೀಕ್ಷಕರು/ಕರ ವಸೂಲಿಗಾರರ ವಿವರ :
ರಾಜಸ್ವ ನಿರೀಕ್ಷಕರು : ರಾಜು.ಬಿ ವಾರ್ಡ್ ಸಂಖ್ಯೆ 8, 13, 14, 15 ಮೊಬೈಲ್ ಸಂಖ್ಯೆ : 9980156661. ಡಿ.ಮಂಜುನಾಥ ವಾರ್ಡ್ ಸಂಖ್ಯೆ 6, 7, 9, 18, 19, 22, 23, 24, 35 ಮೊಬೈಲ್ ಸಂಖ್ಯೆ: 9986382474. ಅಂಜನ್‍ಮೂರ್ತಿ ವಾರ್ಡ್ ಸಂಖ್ಯೆ 4, 5, 11, 12, 20, 21, 27, 28, 29 ಮೊಬೈಲ್ ಸಂಖ್ಯೆ: 9743621626. ಕೆ.ಬಸವರಾಜು ವಾರ್ಡ್ ಸಂಖ್ಯೆ 1, 34 ಮೊಬೈಲ್ ಸಂಖ್ಯೆ: 8105904772. ಅಶೋಕ್‍ಕುಮಾರ್ ಎಸ್.ಎನ್ ವಾರ್ಡ್ ಸಂಖ್ಯೆ 2, 3 ಮೊಬೈಲ್ ಸಂಖ್ಯೆ: 9449911352, ರಮೇಶ್ ಬಾಬು ವಾರ್ಡ್ ಸಂಖ್ಯೆ 10, 16, 17, 30, 30, 32, 33 ಮೊಬೈಲ್ ಸಂಖ್ಯೆ: 9108082439. ನಿರಂಜನ್ ವಾರ್ಡ್ ಸಂಖ್ಯೆ 25, 26 ಮೊಬೈಲ್ ಸಂಖ್ಯೆ : 7204929912.
ಕರ ವಸೂಲಿಗಾರರು: ರಂಗನಾಥ ವಾರ್ಡ್ ಸಂಖ್ಯೆ 8 ಮೊಬೈಲ್ ಸಂಖ್ಯೆ: 9535464146. ಪ್ರದೀಪ್‍ಕುಮಾರ್ ಸಾಗ ವಾರ್ಡ್ ಸಂಖ್ಯೆ 4, 32, 13 ಮೊ ಸಂಖ್ಯೆ: 8722606867. ಮೊಹಮ್ಮದ್ ಫಯಾಜ್ ವಾರ್ಡ್ ಸಂಖ್ಯೆ 6, 7, 9 ಮೊ.ಸಂ: 9944562792. ಸಾಧಿಕ್ ಉಲ್ಲಾ ವಾರ್ಡ್ ಸಂಖ್ಯೆ 5, 29 ಮೊ.ಸಂ: 9964062768. ಪರಮೇಶ್ ವಾರ್ಡ್ ಸಂಖ್ಯೆ 1, 35 ಮೊ.ಸಂ: 9448256167. ಅನಿಲ್ ಮೂರ್ತಿ ವಾರ್ಡ್ ಸಂಖ್ಯೆ 14, 16, 17 ಮೊ.ಸಂ: 8073111104. ದಿಲೀಪ್ ವಾರ್ಡ್ ಸಂಖ್ಯೆ 2, 3, 18 ಮೊ.ಸಂ: 9844137669. ಲಕ್ಷ್ಮಣ ವಾರ್ಡ್ ಸಂಖ್ಯೆ 25, 26, 27, 28 ಮೊ.ಸಂ: 9611474296. ಹೆಚ್.ಗುರುಮೂರ್ತಿ ವಾರ್ಡ್ ಸಂಖ್ಯೆ 30, 31, 33 ಮೊ.ಸಂ:9886374084. ಬೀಬಿ ಜಹೇರಾ ಎಂ ಸುನಾರ್ ವಾರ್ಡ್ ಸಂಖ್ಯೆ 10, 11 ಮೊ.ಸಂ: 9110627719. ಮೂರ್ತಿ ವಾರ್ಡ್ ಸಂಖ್ಯೆ 34, 22, 23 ಮೊ.ಸಂ: 8296380432. ಅಂಜನ್‍ಮೂರ್ತಿ ವಾರ್ಡ್ ಸಂಖ್ಯೆ 12, 15 ಮೊ.ಸಂ: 9108741976. ಮಾಲಿನಿ ವಾರ್ಡ್ ಸಂಖ್ಯೆ 19 ಮೊ.ಸಂ: 9590310760 ಇವರನ್ನು ಸಂಪರ್ಕಿಸಬಹುದೆಂದು ಪಾಲಿಕೆ ಪ್ರಕಟಣೆ ತಿಳಿಸಿದೆ.
===