ಕೋರೋಣದ ಈ ಕ್ಲಿಷ್ಟಕರ ಸಂದರ್ಭದಲ್ಲಿ ವೈದ್ಯಕೀಯ ಕನಿಷ್ಟ ನಿಷ್ಟೆಯನ್ನು ಪಾಲಿಸಲು ವಿಫಲವಾದ ವೈದ್ಯಕೀಯ ಸಮುದಾಯ ಸಂತ್ರಸ್ತೆ ಗರ್ಭಿಣಿ ಖತೀಜ ಜಾಸ್ಮಿನ್ ಳನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿಸಿದ ರೀತಿ ಅಮಾನವೀಯ ಕ್ರತ್ಯವಾಗಿದೆ.
ಮಂಗಳೂರಿನ ಕೆಲವು ಆಸ್ಪತೆಗಳು ಮತ್ತು ವೈದ್ಯರು ಮೆಡಿಕಲ್ ಮಾಫಿಯಾ ಸ್ರಷ್ಟಿ ಮಾಡಿರುವುದು ದ.ಕ. ಜಿಲ್ಲೆಗೆ ಅವಮಾನ.
ವೈದ್ಯಕೀಯ ನಗರ ಎಂದೇ ಕರೆಯಲ್ಪಡುವ ಮಂಗಳೂರು
ಮುಂದಿನ ದಿನಗಳಲ್ಲಿ ವೈದ್ಯೋ – ಡಕಾಯಿತಿ ನಗರ ಆಗದಿರಲಿ. ಕೆಲವು ಕುಖ್ಯಾತಿ ವೈದ್ಯರ ನಿರ್ಲಕ್ಷ್ಯ ದಿಂದಾಗಿ ಹಲವು ನಿಷ್ಟ್ಟಾವಂತ ವೈದ್ಯರ ಸೇವೆಗಳಿಗೆ ಕೂಡ ಕೆಟ್ಟ ಹೆಸರು ಬರುವುವಂತಾಗಿರುವುದೂ ಖೇದಕರ.
ಖತೀಜ ಜಾಸ್ಮಿನ್ ಎಂಬ ತುಂಬು ಗರ್ಭಿಣಿಯನ್ನು ಅವಳು ಕೋರೋಣ ಪಾಸಿಟಿವ್ ಎಂಬ ಕಾರಣವೊಡ್ಡಿ ಡಾಕ್ಟರ್ ಪ್ರಿಯ ಬಲ್ಲಾಳ್ ರಿಂದ ಹಿಡಿದು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರು ನಿರ್ಲಕ್ಷಿಸಿ ರುವುದು ಖಂಡನೀಯ, ಮುಂದುವರಿದು ಡಾ.ಪ್ರಿಯ ಬಲ್ಲಾಳ್ ರ ಸಹ ವೈದ್ಯರುಗಳು ಕೂಡ ರೋಗಿಯಲ್ಲಿ ಮರಣ ಭಯ ಹುಟ್ಟಿಸಿ, ರೋಗಿ ಮತ್ತು ಅವಳ ಕುಟುಂಬದವರಿಗೆ ಪ್ರಾಣ ಭಯ ಹುಟ್ಟಿಸಿ, ಬೆದರಿಸಿರುತ್ತಾರೆ, ರೋಗಿ ಸಂಪರ್ಕಿಸಿದ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನಿರಾಕರಿಸಿ ಅಲ್ಲಿ ಇಲ್ಲಿ ಅಲೆದಾಡಿಸಿದ್ದಾರೆ.
ಸಂತ್ರಸ್ತೆಯ ಕುಟುಂಬ ವೈದ್ಯರಾದ ಡಾ. ಪ್ರಿಯಾ ಬಲ್ಲಾಳ್ ಈ ಸಂತ್ರಸ್ತೆ ಯನ್ನು ಆ ಪರಿ ನಿರ್ಲಕ್ಷಿಸಲು ಪ್ರಯತ್ನಿಸಿದ ಕಾರಣವೇನು?, ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರಕಾರ ತನಿಖೆ ನಡೆಸಬೇಕು. ವೈದ್ಯರು ನಡೆಸಿದ ಈ ಗಂಭೀರ ಅಪರಾಧ ಕೃತ್ಯದ ವಿರುದ್ಧ ಮುಸ್ಲಿಮ್ ಒಕ್ಕೂಟ ಸಂತ್ರಸ್ತರ ಪರವಾಗಿ ಹೋರಾಟ ಮುಂದುವರಿಸಲಿದೆ.
ಈಗಾಗಲೇ ಸಂತ್ರಸ್ತೆ ಮತ್ತು ಸಂಘಟನೆಗಳು ಆರಂಭಿಸಿದ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡಲಿದೆ. ಸರಕಾರ, ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸು ಇಲಾಖೆ ಈ ಅನ್ಯಾಯದ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲಿ ಆಸ್ಪತ್ರೆ ಮತ್ತು ವೈದ್ಯರ ಮನೆ, ಕ್ಲಿನಿಕ್ ಗಳ ಮುಂದೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ.