ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ;- 5 ಇಂದು ದೇವನಾಯ್ಕನಹಳ್ಳಿ ಗ್ರಾಮದಲ್ಲಿ ಇರುವ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರರಾದ ಟಿ.ವಿ.ದೇವರಾಜ್‍ರವರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಪತ್ರಿಕಾ ಮಿತ್ರರರಿಗೆ ಸುಮಾರು 25 ರಿಂದ 30 ಜನರಿಗೆ ಆಹಾರದ ಕಿಟ್‍ಗಳನ್ನು ಡಿ.ಓ.ಎಸ್.ಪಿ ಡಾ//ಸಂತೋಷರವರ ನೇತೃತ್ವದಲ್ಲಿ ವಿತರಣೆ ಮಾಡಿದರು.
ನಂತರ ಡಿ.ಓ.ಎಸ್.ಪಿ ಡಾ//ಸಂತೋಷ ಮಾತನಾಡಿ ಪತ್ರಿಕಾ ಮಿತ್ರರು ಮಾಸ್ಕ ಸ್ಯಾನಿಟೈಸರ್ ಬಳಸಿ ಅಂತರ ಕಾಯ್ದುಕೊಂಡು ನಿಮ್ಮ ಆರೋಗ್ಯದ ಬಗ್ಗೆ ಗಮನದಲ್ಲಿಟ್ಟು ನೀವುಗಳು ಸುದ್ದಿಗಳನ್ನು ಮಾಡಿ ಎಂದು ಸಲಹೆ ನೀಡಿದರು.
ಪತ್ರಿಕಾ ಮಿತ್ರರುಗಳಿಗೆ ಆಹಾರ ಕಿಟ್ಟುಗಳನ್ನು ವಿತರಣೆ ಮಾಡಿದ ನಂತರ ಸಿಪಿಐ ಟಿ ವಿ ದೇವರಾಜ್‍ರವರು ಮಾತನಾಡುತ್ತಾ,ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಪತ್ರಿಕಾ ಮಿತ್ರರರು ಕೊರೋನಾ ಸಂದರ್ಭಗಳಲ್ಲಿ ಹಗಲು ಇರುಳು ಪೋಲಿಸ್ ಇಲಾಖೆ ಹಾಗೂ ತಾಲೂಕ ಆಡಳಿತದ ಜೊತಗೆ ಅನೂನ್ಯವಾದ ನಿಕಟ ಸಂಪರ್ಕ ಇಟ್ಟುಕೊಂಡು ಕೊರೋನಾದ ಬಗ್ಗೆಸುದ್ದಿಗಳನ್ನು ಮಾಡುತ್ತಾ ಎಷ್ಟೇ ತೊಂದರೆ ಇದ್ದರು ಸಹ
ಸ್ವಾಭಿಮಾನದಿಂದ ಯಾವುದೆ ಪಲಾಪೇಕ್ಷೆ ಇಲ್ಲದೆ ಬದುಕುನ್ನು ಸಾಗಿಸುತ್ತಿರುವುದನ್ನು ಮನಗೊಂಡು ,ಈ ಸಂದರ್ಭದಲ್ಲಿ ಏನಾದರು ಸಹಾಯ ಅವರುಗಳಿಗೆ ಮಾಡಬೇಕೆಂದು ನನ್ನ ತಲೆಗೆ ಹೊಳೆದಿದ್ದು ಪತ್ರಿಕಾ ಮಿತ್ರರುಗಳಿಗೆ ಆಹಾರ ಕಿಟ್ಟುನ್ನು ಕೊಡಬಹುವುದು ಎಂದು ಯೋಚಿಸಿ ಈ ಚಿಕ್ಕ ಸಹಾಯ ಮಾಡುತ್ತೇನೆ ಯಾರು ಕೂಡಾ ಅನ್ಯೆತಾ ಬಾವಿಸಬಾರುದು ಎಂದು ಹೇಳಿದರು.


ಪೋಲಿಸ್ ಇಲಾಖೆಯಲ್ಲಿ ಇಂತಹ ಮಾನವೀಯ ಮೌಲ್ಯ ಇರುವ ಸಿಪಿಐ ಟಿವಿ ದೇವರಾಜ್ ರವರಂತಹ
ಅಧಿಕಾರಿ ಇರುತ್ತಾರೆ ಎಂದು ಇವತ್ತು ತೋರಿಸಿಕೊಟ್ಟರು. ಇದಕ್ಕೆ ಉತ್ತರವಾಗಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳ ಪತ್ರಿಕಾ ಮಿತ್ರರು ಶ್ರೀಯುತರಿಗೆ ಕೃತಜ್ಞತೆಯ ಜೊತೆಗೆ ಧನ್ಯವಾದಗಳುನ್ನು ಅವರಿಗೆ ತಿಳಿಸಿದರು.

ಉಪಸ್ಥಿಯಲ್ಲಿ;- ಡಿ.ಓ.ಎಸ್.ಪಿ ಡಾ ಸಂತೋಷ, ಸಿಪಿಐ ಟಿ.ವಿ ದೇವರಾಜ್, ಪಿಎಸ್‍ಐ ರವರಾದ ಬಸವನಗೌಡ
ಬೀರ್‍ದಾರ್, ನ್ಯಾಮತಿ ಪಿಎಸ್‍ಐ ರಮೇಶ್, ಪಿಎಸ್‍ಐ ಕಾಂತರಾಜ್ ಎಸ್, ದಪೇದಾರ್ ಹರೀಶ್, ವೇಂಕಟೇಶ್, ಎಲ್ಲಾ ಪತ್ರಿಕಾ ಮಿತ್ರರು ಮತ್ತು ಹೊನ್ನಾಳಿ ಮತ್ತು ನ್ಯಾಮತಿ ಪೋಲಿಸ್ ಇಲಾಖೆಯ ಸಿಬ್ಬಂದಿ ವರ್ಗದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *