ಜನರು ಅನ್ ಲಾಕ್ ಆದ ತಕ್ಷಣ ಮಾಸ್ಕ್ ಧರಿಸುವುದನ್ನು ಬಿಡುವುದು, ಸಾಮಾಜಿಕ ಅಂತರ ಮರೆಯುವುದು, ಕೈಗಳನ್ನು ಸ್ವಚ್ಚವಾಗಿಟ್ಟುಕೊಳ್ಳದೇ, ಮತ್ತೆ ನಾವು ಗುಂಪು ಸೇರುವುದು, ಜಾತ್ರೆ ಮಾಡುವುದು, ಮಾಡಿದರೆ ನಾವು ಮತ್ತೊಮ್ಮೆ ಮೂರನೇ ಅಲೆಗೆ ಬಲಿಯಾಗುತ್ತೇವೆ. ಇದರ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ನಗರದ ವಿಜ್ಞಾನ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಸಂಚಾರಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ “ಅನ್ ಲಾಕ್ ಆದರೂ ಸಹ ಎಚ್ಚರಿಕೆಯಿಂದಿರಿ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಕ್ ಡೌನ್ ಮುಕ್ತಾಯವಾಯಿತು ಎಂಬ ಭೀತಿಯನ್ನು ತೊರೆದು, ನಾವು ಮತ್ತೆ ಸಾಮಾಜಿಕ ಅಂತರವನ್ನು ಮರೆತು ಕ್ರೀಕೆಟ್ ಆಡುವುದು, ಗುಂಪು ಸೇರುವುದು, ಹುಟ್ಟಿದ ಹಬ್ಬ ಆಚರಿಸುವುದು, ಮಾಡುತ್ತಾ ಬಂದರೆ ಮತ್ತೆ ಕರೋನಾ ಎಲ್ಲಿಂದಲಾದರೂ ನಮ್ಮ ಮೇಲೆ ಆಕ್ರಮಣ ಮಾಡಬಹುದು. ಇದರ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು. ಎಲ್ಲೆಂದರಲ್ಲಿ ಸುತ್ತಾಡುತ್ತೇವೆ, ಹೇಗೆ ಬೇಕಾದರೂ ಹಾಗೆ ಬದುಕುತ್ತೇವೆ, ಎಂದಾದರೇ ಮೂರನೆಯ ಅಲೆ, ಮತ್ತೆ ಗಂಡಾಂತರಕಾರಿಯಾಗಿ ಬಂದು ನಿಲ್ಲುತ್ತದೆ. ಈಗಾಲು ಸಹ ನಾವಿನ್ನೂ ಶಾಲಾ ಮಕ್ಕಳಿಗೆ ವ್ಯಾಕ್ಸಿನೇಷನ್ ಮಾಡಿಲ್ಲ, ಅಲ್ಲಿಯವರೆಗಾದರೂ ನಾವು ಹದ್ದುಬಸ್ತಿನಿಂದ ಇರಬೇಕಾಗುತ್ತದೆ. ಮನೆಯಲ್ಲಿದ್ದುಕೊಂಡು, ಸಾಮಾಜಿಕ ಅಂತರ ಕಾಪಾಡಿಕೊಂಡು, ಕರೋನಾ ನಿಗ್ರಹಿಸಬೇಕಾಗಿದೆ ಎಂದರು.
ಅನ್ ಲಾಕ್ ಆಗುತ್ತದೆ ಎಂದ ತಕ್ಷಣವೇ ನಾವು ನಗರಗಳಿಗೆ ಮತ್ತೆ ಮರು ವಲಸೆ ಹೋಗುವುದನ್ನು ಮಾಡುತ್ತಿದ್ದೇವೆ, ಮರು ವಲಸೆ ಹೋಗುವ ಗ್ರಾಮೀಣ ಜನರು ಕರೋನ ಟೆಸ್ಟ್ ಮಾಡಿಸಿಕೊಂಡರೆ ಮಾತ್ರ ನಾವು ಸುರಕ್ಷಿತವಾಗಿರಬಹುದು. ಇಲ್ಲದಿದ್ದರೆ ಮತ್ತೆ ನಗರಗಳಲ್ಲಿ ಕರೋನ ಸ್ಫೋಟವಾಗಿ, ಮತ್ತೊಮ್ಮೆ ನಾವು ಮತ್ತೆ ಲಾಕ್ ಡೌನ್ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದರು.
ಕಾರ್ಯಕ್ರಮದಲ್ಲಿ ಬಟ್ಟೆಯ ದೊಡ್ಡ ಮಾಸ್ಕ್‍ಗಳನ್ನು ಪ್ರದರ್ಶನಕ್ಕಿಟ್ಟು, ಕರೋನ ಗೀತೆಗಳ ಮುಖಾಂತರ ತರಕಾರಿ ಮಾರುಕಟ್ಟೆಯಲ್ಲಿ ಜನರಿಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಚ್. ಎಸ್. ಪ್ರೇರಣ, ಹೆಚ್.ಎಸ್, ರಚನ ಕರೋನ ಗೀತೆಗಳನ್ನ ಹಾಡಿದರು. ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಪಿಎಸ್‍ಐ ರಘು. ಟಿ. ಜೆವಿಸ್‍ನ ಜಯದೇವ ಮೂರ್ತಿ, ವೇಣು, ರಮೇಶ, ಕೆ. ಪೊಲೀಸ್ ಸಿಬ್ಬಂದಿ ಹಾಜರಿದ್ದರು.