ಹೊನ್ನಾಳಿ : ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಕೋವಿಡ್ ಕೇರ್ ಸೆಂಟರ್‍ನಿಂದ ಇದೂವರೆಗೂ 1359 ಜನರು ಗುಣಮುಖರಾಗಿದ್ದಾರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಅರಬಗಟ್ಟೆ ಹಾಗೂ ಎಚ್.ಕಡದಕಟ್ಟೆಯಲ್ಲಿನ ಕೋವಿಡ್ ಕೇರ್ ಸೆಂಟರ್‍ನಿಂದ ಗುಣಮುಖರಾದ 70 ಜನ ಸೋಂಕಿತರಿಗೆ ಹೂಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೋಟ್ಟು ಸುದ್ದಿಗಾರರೊಂದಿಗೆ ಮಾತನಾಡಿದರು.
ಅವಳಿ ತಾಲೂಕಿನಲ್ಲಿ ಒಟ್ಟು 3102 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2021 ಜನರು ಕೊರೊನಾದಿಂದ ಮುಕ್ತರಾಗಿದ್ದು, ಇನ್ನು 967 ಸಕ್ರೀಯ ಪ್ರಕರಣಗಳು ಅವಳಿ ತಾಲೂಕಿನಲ್ಲಿವೆ ಎಂದರು.
ನಗರ ಪ್ರದೇಶಗಳಿಗೆ ಹೋಲಿಸಿದರೆ ಅವಳಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು, ಇದೀಗ ಗ್ರಾಮೀಣ ಭಾಗಗಳಲ್ಲೂ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿವೆ ಎಂದ ಶಾಸಕರು ಕೊರೊನಾ ಪ್ರಕರಣಗಳು ಕ್ಷೀಣಿಸುತ್ತಿವೆ ಎಂದು ಜನರು ಮೈಮರೆಯ ಬೇಡಿ ಕೊರೊನಾ ಬಗ್ಗೆ ಜಾಗೃತಿಯಿಂದ ಇರುವಂತೆ ಕಿವಿ ಮಾತು ಹೇಳಿದರು.
ಕೊರೊನಾ ಸಂಕಷ್ಟದ ಕಾಲದಲ್ಲಿ ಜನರ ಜೊತೆ ನಿಲ್ಲ ಬೇಕಾಗಿದ್ದು ನನ್ನ ಕರ್ತವ್ಯ ಈ ಹಿನ್ನೆಲೆಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದ ಶಾಸಕರು, ಅವಳಿ ಅಧಿಕಾರ ಮುಖ್ಯವಲ್ಲಾ ಅವಳಿ ತಾಲೂಕಿನ ಜನರ ಆರೋಗ್ಯ ಮುಖ್ಯ ಈ ನನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ಚುನಾವಣೆ ಬಂದಾಗ ಜನರ ಮನೆ ಬಾಗಿಲಿಗೆ ಹೋಗಿ ಮತ ಕೇಳುವುದು ಆದರೇ ಇಂತಹ ಸಂಕಷ್ಟ ಕಾಲದಲ್ಲಿ ನಾನು ಮನೆ ಮಗನಾಗಿ, ಅವಳಿ ತಾಲೂಕಿನ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು, ಅವಳಿ ತಾಲೂಕನ್ನು ಕೊರೊನಾ ಮುಕ್ತ ತಾಲೂಕು ಮಾಡ ಬೇಕೆಂದು ಪಣ ತೊಟ್ಟಿದ್ದೇನೆ ಎಂದರು.
ಗುಣಮುಖರಾದವರಿಗೆ ಹೂಮಳೆ : ಎಚ್.ಕಡದಕಟ್ಟೆ ಹಾಗೂ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್‍ನಿಂದ 70 ಜನರು ಕೊರೊನಾದಿಂದ ಗುಣಮುಖರಾಗಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದಂಪತಿಗಳು ಅವರಿಗೆ ಹೂಮಳೆ ಸುರಿಸಿ ಆತ್ಮೀಯವಾಗಿ ಬೀಳ್ಕೋಟ್ಟರು. ಕೊರೊನಾದಿಂದ ಗುಣಮುರಾಗಿ ಹೋದವರು ತಮ್ಮ ತಮ್ಮ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಮೂಡಿಸುವ ಮೂಲಕ ಕೊರೊನಾ ವಾರಿಯರ್ಸಗಳಾಗಿ ಕೆಲಸ ಮಾಡುವಂತೆ ಸೂಚಿಸಿದರು.
ಶಾಸಕರ ಕಾಲಿಗೆ ಎರಗಿದ ವ್ಯಕ್ತಿ : ಕೊರೊನಾದಿಂದ ಗುಣಮುಖರಾದ ವ್ಯಕ್ತಿಯೊಬ್ಬರು ನಿಮ್ಮಂತ ಶಾಸಕರನ್ನು ಪಡೆದ ನಾವೇ ಪುಣ್ಯವಂತರು, ನಿಮ್ಮ ಸೇವೆಯನ್ನು ಇಡೀ ದೇಶವೇ ಮೆಚ್ಚಿದ್ದು ನಮ್ಮ ಕೊನೆ ಉಸಿರಿರುವವರೆಗೂ ನಿಮ್ಮನ್ನು ಮರೆಯುವುದಿಲ್ಲಾ ಎಂದು ಶಾಸಕರ ಕಾಲಿಗೆ ಎರಗಿದರು.
ಸೋಂಕಿತರಿಗೆ ಉಪಹಾರ : ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕಿತರಿಗೆ, ಆಸ್ಪತ್ರೆಯೆ ಸಿಬ್ಬಂದಿಗಳಿಗೆ, ಪೊಲೀಸರಿಗೆ, ಲಸಿಕೆ ಹಾಕಿಸಿಕೊಳ್ಳಲು ಬಂದ ಸಾರ್ವಜನಿಕರಿಗೆ, ಎಪಿಎಂಸಿ ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರತಿನಿತ್ಯ ಬೆಳಗ್ಗೆ ಹಾಗೂ ಮದ್ಯಾಹ್ನದ ಊಟ ಹಾಗೂ ಉಪಹಾರ ನೀಡುತ್ತಿದ್ದು ಇಂದೂ ಕೂಡ ಎಲ್ಲರಿಗೂ ಉಪಹಾರ ಹಾಗೂ ಉಟದ ವ್ಯವಸ್ಥೆಯನ್ನು ಶಾಸಕರ ಸಹೋದರ ಎಂ.ಪಿ.ರಮೇಶ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

Leave a Reply

Your email address will not be published. Required fields are marked *