ಕೋವಿಡ್-19 ರ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ವಾಣಿಜ್ಯ
ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿ
ಆದೇಶಿಸಿರುವುದರಿಂದ ಪಾದರಕ್ಷೆ ತಯಾರಿಕೆ ಮತ್ತು ದುರಸ್ತಿಯಲ್ಲಿ
ಹಾಗೂ ಚರ್ಮ ಹದ ಮಾಡುವ ಕಾಯಕದಲ್ಲಿ ತೊಡಗಿರುವ
ಚಮ್ಮಾರರು, ಚರ್ಮ ಕುಶಲಕರ್ಮಿಗಳು ಆರ್ಥಿಕ
ಸಂಕಷ್ಟಕ್ಕೊಳಗಾಗಿದ್ದು, ಇವರಿಗೆ ತಾತ್ಕಾಲಿಕ ಪರಿಹಾರ ಒಂದು ಬಾರಿ
ಪರಿಹಾರ ಧನವಾಗಿ 2 ಸಾವಿರ ರೂ. ನೀಡಲು ಸರ್ಕಾರ ಆದೇಶಿಸಿದ್ದು, ಅರ್ಹರು
ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಚರ್ಮ ಕುಶಲಕರ್ಮಿಗಳು ಈ ಪರಿಹಾರ ಧನವನ್ನು
ಪಡೆಯಲು ಆನ್‍ಲೈನ್ ಮೂಲಕ ಸೇವಾ ಸಿಂಧು sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ
ಪೋರ್ಟಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ಜೂ.15 ಕೊನೆಯ
ದಿನಾಂಕವಾಗಿದೆ.
ಆನ್‍ಲೈನ್ ಮೂಲಕ ಸೇವಾ ಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿದ ಅರ್ಹ
ಫಲಾನುಭವಿಗಳಿಗೆ ಪರಿಹಾರ ಧನವನ್ನು ಅವರ ಬ್ಯಾಂಕ್ ಖಾತೆಗೆ
ನೇರವಾಗಿ ಡಿ.ಬಿ.ಟಿ. ಮೂಲಕ ವರ್ಗಾಯಿಸಲಾಗುವುದು. ಚಮ್ಮಾರರು,
ಚರ್ಮ ಕುಶಲಕರ್ಮಿಗಳು ವಿಶೇಷ ಪ್ಯಾಕೇಜ್‍ನ ಸದುಪಯೋಗ
ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಲಿಡ್‍ಕರ್ ಜಿಲ್ಲಾ ಸಂಯೋಜಕರು ಅಥವಾ ಲಿಡ್‍ಕರ್
ಪ್ರಧಾನ ಕಚೇರಿಯನ್ನು ಸಂಪರ್ಕಿಸಬಹುದೆಂದು ಡಾ.ಬಾಬು
ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ
ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.