ಡಾ. ಎಚ್. ನರಸಿಂಹಯ್ಯನವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ನಾವು ಜನರಿಗೆ ಪ್ರಶ್ನೆ ಮಾಡದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎಂಬ ಸಂದೇಶವನ್ನ ಬಿತ್ತರಿಸಬೇಕು. ಕರೋನ ಸಂದರ್ಭದಲ್ಲಿ ಹೆಚ್ಚುತ್ತಿರುವ ಮೂಡನಂಬಿಕೆಗೆಳ ಬಗ್ಗೆ ಜನರಲ್ಲಿ ವೈಜ್ಞಾನಿಕ ತಿಳಿವಳಿಕೆಯನ್ನು ಹೆಚ್ಚಿಸಲು ಡಾ. ಎಚ್. ನರಸಿಂಹಯ್ಯನವರ ಕೆಲಸ ನಮಗೆ ಸ್ಪೂರ್ತಿಯಾಗಬೇಕು ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ಡಾ. ಎಚ್. ನರಸಿಂಹಯ್ಯನವರ ಜನ್ಮ ಶತಮಾನೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಎಚ್. ನರಸಿಂಹಯ್ಯನವರ ಜನರಲ್ಲಿ ಹರಡುತ್ತಿದ್ದ ಮೂಡನಂಬಿಕೆಗಳ ವಿರುದ್ಧ ಜೀವನಪರ್ಯಂತ ಕೆಲಸ ಮಾಡಿದಂಥವರು. ಪ್ರಶ್ನೆ ಮಾಡದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ ಎಂದು ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸಲು ದುಡಿದಂಥವರು, ಗಾಂಧೀವಾದಿಗಳಾಗಿದ್ದರು, ಶಿಕ್ಷಣ ತಜ್ಞರಾಗಿದ್ದರು, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೋಸ್ಕರ ಕನ್ನಡ ಮಾಧ್ಯಮ ಶಾಲೆಗಳನ್ನು ಪೆÇ್ರೀತ್ಸಾಹಿಸಿದವರು. ನಾವು ಅವರ ವಿಚಾರಗಳನ್ನ ಈಗಿನ ಜನಾಂಗಕ್ಕೆ ತಲುಪಿಸಬೇಕಾಗಿದೆ. ಅವರ ಹೋರಾಟ, ಪರಿಶ್ರಮ ನಮಗೆ ದಾರಿದೀಪವಾಗಬೇಕು ಎಂದರು.
ಕನ್ನಡ ಶಾಲೆಗಳನ್ನು ಬೆಳೆಸಿದ ಡಾ.ಎಚ್ಎನ್ವರ ಕಾಲದ ನಂತರ, ಇಂಗ್ಲಿಷ್ ಮಾಧ್ಯಮ ಶಾಲೆಗಳು ನಾಯಿಕೊಡೆಗಳಂತೆ ಎಲ್ಲ ಕಡೆ ಬೆಳೆದವು. ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಅವರು ಬಹಳ ಹೋರಾಟ ಮಾಡಿದರು. ಗ್ರಾಮಗಳಲ್ಲಿ ಇಂಗ್ಲೀಷ್ ಮಾಧ್ಯಮ ಜನರ ಚೈತನ್ಯವನ್ನೇ ನಾಶಮಾಡುತ್ತಿದೆ. ಮಾಟ, ಮಂತ್ರ, ದೆವ್ವ, ಭೂತ, ಜೋತಿಷ್ಯ, ದೇವಮಾನವರು ನಮ್ಮ ದೇಶದ ಗೌರವನ್ನೇ ನಾಶಮಾಡುತ್ತಿವೆ, ಎಂದು ಅದರ ವಿರುದ್ಧ ಜನಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಹಳ್ಳಿಗಳಲ್ಲಿ ಗ್ರಾಮೀಣ ಉದ್ಯೋಗಗಳನ್ನ ಸ್ಥಾಪಿಸುವ ಬಗ್ಗೆ, ಖಾದಿ ಪ್ರಚಾರಕ್ಕಾಗಿ ಶ್ರಮಿಸಿ, ಸರಳ ಜೀವನ ಶೈಲಿ ಎಲ್ಲರ ಮನಸ್ಸನ್ ಗೆದ್ದಂತಹ ಅಪರೂಪದ ವೈಕ್ತಿಯಾಗಿದ್ದರು ಎಚ್ಎನ್ ಎಂದರು.
ಕಾರ್ಯಕ್ರಮದಲ್ಲಿ ಹೆಚ್. ಎಸ್. ರಚನ ಮತ್ತು ಹೆಚ್. ಎಸ್. ಪ್ರೇರಣ, ಗಾಂಧೀಜಿಗೆ ಪ್ರಿಯವಾದ ಭಕ್ತಿ ಗೀತೆ, ರಘುಪತಿ ರಾಘವ ರಾಜಾರಾಮ್, ವಿಜ್ಞಾನ ಗೀತೆಗಳನ್ನ ಹಾಡಿ ಜನರನ್ನ ಜಾಗೃತಗೊಳಿಸಲಾಯಿತು. ಪ್ರಶ್ನೇ ಮಾಡಿ ಎಂಬ ಬಿತ್ತಿ ಪತ್ರ, ಡಾ, ಎಚ್ಎನ್ ರವರ ಬಾವಚಿತ್ರಗಳನ್ನ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಜೈನ್ ಸಂಘದ ಶ್ರೀಮತಿ ನೇಹ, ರಕ್ಷಿತ, ಶ್ರೀಮತಿ ಸುಮ ಕೆಂಚರೆಡ್ಡಿ, ಭಾರತಿ, ಅಂಶುಲ್, ರಾಜೇಶ್, ಗೀತ ಹಾಜರಿದ್ದರು.