ಆಹಾರ ಮನಷ್ಯನ ಬಹುಮುಖ್ಯವಾದ ಸಂಪತ್ತು ಆಹಾರ ಪದಾರ್ಥಗಳ ಬಳಕೆಯಿಂದಲ್ಲೆ ಮನುಷ್ಯನ ಜೀವರಕ್ಷಣೇಯ ಬದುಕು,

ಆಹಾರ ಪದಾರ್ಥಗಳ ಉತ್ಪಾದನೆಯ ಮೂಲ ಭೂಮಿಯ ಮಡಿಲು,
ಭೂಮಿ ರೈತಾಪಿ ವರ್ಗದ ಜನತೆಯ ಬದುಕಿಗೆ ಆದಾರ ಸ್ತಂಭ,
ಭೂಮಿಯನ್ನು ಮುಂಗಾರಿನ ಮಳೆಯ ಅನುಗುಣವಾಗಿ ಉತ್ತಿಭಿತ್ತಿ ವ್ಯವಸಾಯ ಚಟುವಟಿಕೆಯಲ್ಲಿ ತೋಡಗಿಸಿಕೊಂಡ ಫಲದಿಂದಾಗಿ ಆಹಾರ ಪದಾರ್ಥಗಳ ಉತ್ಪಾದನೆ ಕಾರಣವಾಗುತ್ತದೆ,

ವ್ಯವಸಾಯದ ಬದುಕು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಕಷ್ಟದ ದಿನಗಳನ್ನು ಕಾಣುತ್ತಿದೆ,
ಇದಕ್ಕೆ ಸಾಕಷ್ಟು ಕಾರಣಗಳು ಕಂಡುಬರುತ್ತದೆ ಮೊದಲನೆಯದಾಗಿ ಇತ್ತೀಚಿನ ವರ್ಷಗಳ ಕಾಲಾನುಕ್ರಮದಲ್ಲಿ ಮಳೆಗಾಲದಲ್ಲಿ ಅತಿವೃಷ್ಟಿ ಅನವೃಷ್ಟೀಯ ತೊಂದರೆ ಕಾರಣದಿಂದಾಗಿ ಆಹಾರ ಪದಾರ್ಥಗಳ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಈ ಕಾರಣಕ್ಕೆ ರೈತರ ಬದುಕಿನ ಕಷ್ಟ ವ್ಯರ್ಥ ಪ್ರಯತ್ನ ವಾಗುತ್ತಿದೆ,

ಇದರೊಂದಿಗೆ ವ್ಯವಸಾಯದ ಬದುಕಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಬಲೀಕರಣದ ವ್ಯವಸ್ಥೆ ಸಾಕಷ್ಟು ಪ್ರಮಾಣದಲ್ಲಿ ದುಬಾರಿ ಬೆಲೆಯಾಗಿ ಕಾಡುತ್ತಿದೆ,
ಈ ಕಾರಣಕ್ಕಾಗಿ ವ್ಯವಸಾಯ ಕ್ಷೇತ್ರ ಇತ್ತಿಚಿನ ವರ್ಷಗಳ ಕಾಲಮಾನದಲ್ಲಿ ದೊಡ್ಡ ಪ್ರಮಾಣದ ಸಂಕಷ್ಟಕ್ಕೆ ಸಿಲುಕಿದೆ ಎಂದರೆ ತಪ್ಪಾಗಲಾರದು,

ಈ ಕಷ್ಟದ ದಿನಗಳ ವ್ಯವಸ್ಥೆಯಲ್ಲಿ ರೈತರು ಬೆಳೆದ ಆಹಾರ ಪದಾರ್ಥಗಳಿಗೆ ಸರಿಯಾದ ಬೆಲೆಯಿಲ್ಲದೆ ರೈತರ ಕಷ್ಟದ ಬದುಕಿಗೆ ಬೆಲೆಯಿಲ್ಲದ ವಿಚಾರ ಈ ಸಮಾಜದಲ್ಲಿ ಕಂಡುಬರುತ್ತಿದೆ,

ಸರ್ಕಾರ ಕೃಷಿ ಬದುಕಿನ ಕಷ್ಟವನ್ನು ಪರಿಗಣಿಸಿ ಸೂಕ್ತವಾದ ವಿಚಾರದಲ್ಲಿ ಕೃಷಿ ಕ್ಷೇತ್ರದ ಪರವಾಗಿ ನ್ಯಾಯ ಸಂಮತವಾಗಿ ನಿಲ್ಲಬೇಕಾದ ವಿಚಾರವಂತಿಕ್ಕೇ ಕಂಡುಬರುತ್ತಿದೆ,

ರಘುಗೌಡ

Leave a Reply

Your email address will not be published. Required fields are marked *