ರಾಜ್ಯದ ಹಿರಿಯ ಹಾಗೂ ನಮ್ಮ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪನವರು ಇಡೀ ದೇಶದಲ್ಲೇ ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಕ್ಷೇತ್ರದ ಜನತೆಗೆ ಉಚಿತ ಲಸಿಕೆಯನ್ನು ನೀಡಿ ದೇಶದ ಎಲ್ಲಾ ಚುನಾಯಿತ ಜನ ಪ್ರತಿನಿಧಿಗಳಿಗೆ ಮಾದರಿಯಾಗಿದ್ದಾರೆ. ಇವರಿಗೆ ಎಲ್ಲಾ ದಾವಣಗೆರೆಯ ಜನತೆಯ ಪರವಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ರವರು ಹೃತ್ಪೂರ್ವಕ ಧನ್ಯವಾದಗಳು ಅರ್ಪಿಸಿದ್ದಾರೆ.

ಇದಕ್ಕೂ ಮೊದಲು ನಮ್ಮ ಶಾಸಕರು ಅನೇಕ ರೀತಿಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ತಮ್ಮನ್ನು ಆರಿಸಿದ ಕ್ಷೇತ್ರದ ಜನತೆಗೆ ಪಕ್ಷಭೇದ,ಜಾತಿಬೇಧ ಮಾಡದೇ ಅವರ ಪ್ರಯತ್ನಕ್ಕೂ ಮೀರಿ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ ಅದಕ್ಕೆ ಸಾಕ್ಷಿ ಎಂಬಂತೆ ನಗರದ ತುಂಬೆಲ್ಲಾ ಶಿಕ್ಷಣ ಕೇಂದ್ರಗಳು,ಉತ್ತಮ ದರ್ಜೆಯ ಮುಖ್ಯ ರಸ್ತೆಗಳು,ಸ್ಮಾರ್ಟ್ ಸಿಟಿ,ಅಮೃತ ನಗರ ಎಂಬ ಯೋಜನೆಗೆ ದಾವಣಗೆರೆ ಆಯ್ಕೆಯಾಗಿರುವುದು,ಹೀಗೆ ಹೇಳುತ್ತಾ ಹೋದರೆ ಅವರ ಸಾಧನೆಯ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ಕಳೆದ ವರ್ಷ ಇಡೀ ವಿಶ್ವಕ್ಕೆ ಅಂಟಿರುವ ಮಹಾಮಾರಿ ಕೊರೊನಾದಿಂದ ವಿಶ್ವದೆಲ್ಲೆಡೆ ಜನರು ತತ್ತರಿಸಿಹೋಗಿದ್ದು ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅದೇ ರೀತಿ ಕೊರೊನಾದ ಎರಡನೇ ಅಲೆಯಲ್ಲಿಯೂ ಸಹ ಕಳೆದ ಬಾರಿಗಿಂತ ಹೆಚ್ಚಾಗಿ ಸಾವು ನೋವು ಸಂಭವಿಸಿದ್ದು ಈ ಬಾರಿ ಸರ್ಕಾರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಹೆಚ್ಚಿನ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ಮುತುವರ್ಜಿಯಿಂದ ಕೊರೊನ ನಿಯಂತ್ರಣಕ್ಕೆ ಲಸಿಕೆಯನ್ನು ಕಂಡುಹಿಡಿದಿದ್ದು ಅದನ್ನು ಸಾರ್ವಜನಿಕರಿಗೆ ವಿತರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಅರಿತ ನಮ್ಮ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರು,ಜನಪರ ಚಿಂತಕರೂ ಆದ ಡಾ.ಶಾಮನೂರು ಶಿವಶಂಕರಪ್ಪ ನವರು ಹಾಗೂ ಮಾಜಿ ಸಚಿವರು,ಯುವ ನಾಯಕರೂ ಆದ ಎಸ್.ಎಸ್.ಮಲ್ಲಿಕಾರ್ಜುನ ರವರು ದೇಶದ ಯಾವ ಶಾಸಕ,ಸಂಸದ, ಸಚಿವರೂ ಯೋಚನೆ ಮಾಡದ ಮಹತ್ಕಾರ್ಯಕ್ಕೆ ನಾಂದಿ ಹಾಡಿದರು ಇದರ ಫಲವಾಗಿ ದಾವಣಗೆರೆ ಜನತೆಗೆ ಸುಮಾರು 9 ಕೋಟಿ ರೂಪಾಯಿಯ ಲಸಿಕೆಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ನೀಡುವ ವಾಗ್ದಾನ ಮಾಡಿದರು.

ಕೊಟ್ಟ ಮಾತನ್ನು ಉಳಿಸಿಕೊಂಡು ನುಡಿದಂತೆ ನಡೆದ ನಮ್ಮ ಹೆಮ್ಮೆಯ ಶಾಸಕರು,ಮಾಜಿ ಸಚಿವರು, ಮೊದಲ ಹಂತವಾಗಿ ಹತ್ತು ಸಾವಿರ ಲಸಿಕೆಯನ್ನು ತರಿಸಿ ಶುಕ್ರವಾರದ ದಿನ ದಾವಣಗೆರೆಯ ಜನತೆಗೆ ಉಚಿತವಾಗಿ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಹಂತ ಹಂತವಾಗಿ ದಾವಣಗೆರೆಯನ್ನು ಸಂಪೂರ್ಣ ಕೊರೊನ ಮುಕ್ತ ದಾವಣಗೆರೆಯನ್ನಾಗಿಸಲು ಪಣ ತೊಟ್ಟಿದ್ದಾರೆ ಇದರಲ್ಲಿ ಅವರು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇನೆ. ಹಾಗೂ ನಮ್ಮ ಎಲ್ಲಾ ಕಾರ್ಯಕರ್ತರು ತಮ್ಮ ಜವಾಬ್ದಾರಿ ಅರಿತು ಪ್ರತಿಯೊಬ್ಬರಿಗೂ ಲಸಿಕೆ ಪಡೆಯಲು ಸಹಕರಿಸ ಬೇಕೆಂದು ಮನವಿ ಮಾಡಿಕೊಂಡರು.

ಇದೇ ಜೂನ್ 16 ರಂದು ಡಾ. ಶಾಮನೂರು ಶಿವಶಂಕರಪ್ಪನವರ ಜನ್ಮ ದಿನವಿದ್ದು ದಾವಣಗೆರೆಯ ಜನತೆ ನೀಡಬೇಕಾದ ಉಡುಗೊರೆಯನ್ನು ತಮ್ಮನ್ನು ನಂಬಿದ ಜನಕ್ಕೆ ನೀಡಿದ ನಮ್ಮ ಹೆಮ್ಮೆಯ ಶಾಸಕರ ಬಗ್ಗೆ ಜನರು ಅತೀವ ಸಂತೋಷ ವ್ಯಕ್ತ ಪಡಿಸಿದ್ದಾರೆ ಹಾಗೂ ದೇವರು ಇನ್ನೂ ನೂರು ಕಾಲ ಆಯುರಾರೋಗ್ಯ ನೀಡಿ ಇನ್ನೂ ಹೆಚ್ಚಿನ ರೀತಿಯಲ್ಲಿ ಜನಸೇವೆ ಮಾಡಲು ಆಶೀರ್ವದಿಸಿ ಎಂದು ಬೇಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *