ಕರ್ನಾಟಕ ಪ್ರದೇಶ ಯುವಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ
ಸರಳ ಸಮಾರಂಭದಲ್ಲಿ ನಗರದ ಗ್ರಾಮಾಂತರ ಠಾಣೆ ಆವರಣದಲ್ಲಿ ಪೊಲೀಸ್
ಸಿಬ್ಬಂದಿಗಳಿಗೆ ದೈನಂದಿನ ಅಗತ್ಯವಸ್ತುಗಳನ್ನು ವಿತರಿಸಿ ಮಾತನಾಡಿದರು.
ಪೊಲೀಸರು ಹಗಲು ರಾತ್ರಿ ಜನಸೇವೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ
ಸುರಕ್ಷತೆಯೂ ಅಷ್ಟೇ ಮುಖ್ಯ ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಪೊಲೀಸರಿಗೆ
ಅಗತ್ಯ ವಸ್ತುಗಳಾದ ಮಾಸ್ಕ್, ಸ್ಯಾನಿಟೈಸರ್, ಆಕ್ಸಿಮೀಟರ್, ಆಕ್ಸಿಜೆನ್ ಕಾನ್ಸಂಟ್ರೇಟರ್,
ಫೇಸ್‍ಶೀಲ್ಡ್‍ಗಳನ್ನು ವಿತರಿಸಲಾಗುತ್ತಿದೆ ಎಂದರು.
ಪೊಲೀಸ್ ಸೇರಿದಂತೆ ಫ್ರಂಟ್‍ಲೈನ್ ಕೊರೋನಾ ವಾರಿಯರ್ಸ್‍ಗಳು ತಮ್ಮ
ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಇವರ ಬೆನ್ನಿಗೆ ಸರ್ಕಾರ
ನಿಂತುಕೊಳ್ಳಬೇಕಿತ್ತು. ಆದರೆ, ಕೆಲವರು ಅವರವರ ಸುರಕ್ಷತೆ
ನೋಡಿಕೊಂಡು ಮನೆಯಲ್ಲಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.
ಡಿವೈಎಸ್‍ಪಿ ಪ್ರಶಾಂತ್ ಮುನ್ನೋಳಿ ಅವರಿಗೆ ಸುರಕ್ಷತಾ ಕಿಟ್‍ಗಳನ್ನು
ಹಸ್ತಾಂತರಿಸಲಾಯಿತು. ನಂತರ ಅಶೋಕನಗರದ ಒಳಾಂಗಣ ಕ್ರೀಡಾಂಗಣದ
ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಯುವ ಕಾಂಗ್ರೆಸ್‍ನ ಮನು ಅವರ
ನೇತೃತ್ವದಲ್ಲಿ ಮಂಗಳಮುಖಿಯರಿಗೆ ಆಹಾರದ ಕಿಟ್‍ಗಳನ್ನು ಯುವ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿತರಿಸಿದರು. ಈ ಸಂದರ್ಭದಲ್ಲಿ
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.
ಪ್ರಸನ್ನಕುಮಾರ್, ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ,
ಸದಸ್ಯರಾದ ಹೆಚ್.ಸಿ. ಯೋಗೀಶ್, ಮಂಜುಳಾ ಶಿವಣ್ಣ, ಮಾಜಿ ಸ್ಬೂಡಾ ಅಧ್ಯಕ್ಷ ಎನ್.
ರಮೇಶ್, ಭದ್ರಾವತಿ ಯುವ ಮುಖಂಡ ಗಣೇಶ್, ಪ್ರಮುಖರಾದ ಜಿ. ಪಲ್ಲವಿ,
ವಿಜಯ್ (ದನಿ), ಮಧುಸೂದನ್, ಕೆ. ಚೇತನ್, ಹನುಮಂತ, ಮೊಹಮ್ಮದ್ ನಿಹಾಲ್,
ಮೊಹಮ್ಮದ್ ಆರೀಫ್‍ವುಲ್ಲಾ, ಬಾಲಾಜಿ, ಗಿರೀಶ್ ರೈ, ಮನು, ವಿಜಯ್, ವಿನಯ್, ರವಿ,
ಆಕಾಶ್, ಅಬ್ದುಲ್ಲಾ, ಮಂಜು, ಚಂದೋಜಿ ಸೇರಿದಂತೆ ಹಲವರಿದ್ದರು.
ಶಿವಮೊಗ್ಗ: ಎಲ್ಲ ವರ್ಗದ ಜನರಿಗೂ ಉಚಿತ ಕೋವಿಡ್ ವ್ಯಾಕ್ಸಿನ್ ನೀಡುವಂತೆ
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಅವರಿಂದು ಗ್ರಾಮಾಂತರ ಠಾಣೆ ಆವರಣದಲ್ಲಿ ಕರ್ನಾಟಕ ಪ್ರದೇಶ
ಯುವಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ
ನಗರದ ಗ್ರಾಮಾಂತರ ಠಾಣೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ದೈನಂದಿನ
ಅಗತ್ಯವಸ್ತುಗಳನ್ನು ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದೊಂದು ವರ್ಷದಿಂದ ದುಡಿಮೆಯಿಲ್ಲದೇ ಬಡ-ಮಧ್ಯಮ ವರ್ಗದ ಜನ
ಸಂಕಷ್ಟವನ್ನೆದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾಮಾರಿ
ಕೊರೋನಾದಿಂದ ರಕ್ಷಿಸಿಕೊಳ್ಳಲು ಒಂದು ವ್ಯಾಕ್ಸಿನ್‍ಗೆ ಖಾಸಗಿ ಆಸ್ಪತ್ರೆಗಳಲ್ಲಿ
1000-1200 ರೂ.ಗಳನ್ನು ವಸೂಲು ಮಾಡಲಾಗುತ್ತಿದೆ. ಕಷ್ಟದ ದಿನಗಳಲ್ಲಿ
ಜನರು ಇಷ್ಟೊಂದು ಹಣ ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.
ಇನ್ನು ದುಡಿಮೆಯಿಲ್ಲದೇ ಬಡ ಮತ್ತು ಮಧ್ಯಮ ವರ್ಗದ ಜನ
ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲೇ ಬ್ಯಾಂಕ್ ಮತ್ತು ಹಣಕಾಸು
ಸಂಸ್ಥೆಗಳು ಸಾಲ ವಸೂಲಿಗೆ ಗೂಂಡಾ ಪ್ರವೃತ್ತಿ ಪ್ರದರ್ಶಿಸುತ್ತಿವೆ. ಸರ್ಕಾರ
ಜನರ ನೆರವಿಗೆ ಬರಬೇಕು. ಕನಿಷ್ಠ 6 ತಿಂಗಳ ಕಾಲ ಸಾಲಗಳ ಇಎಂಐ ಮತ್ತು
ಬಡ್ಡಿ ವಸೂಲಿಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ವ್ಯಾಕ್ಸಿನ್ ಕೊರತೆ ಇದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸರ್ಕಾರ ವ್ಯಾಕ್ಸಿನ್
ಖರೀದಗೆ ಬೇಡಿಕೆಯನ್ನೇ ಇಟ್ಟಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ
ಅಧಿಕಾರದಲ್ಲಿದ್ದರೂ ಜನಪರ ಕಾಳಜಿ ತೋರುತ್ತಿಲ್ಲ. ವ್ಯಾಕ್ಸಿನ್ ಖರೀದಿ ವಿಚಾರದಲ್ಲಿ

ಸುಪ್ರೀಂ ಕೋರ್ಟ್‍ಗೆ ಸುಳ್ಳು ಮಾಹಿತಿ ನೀಡಿ ಉದ್ಧಟತನ ತೋರಿಸುತ್ತಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ರಚನೆಯನ್ನೂ ಕದ್ದುಮುಚ್ಚಿ ಮಾಡಲಾಯಿತು. ಈಗ ಸಿಎಂ
ಬದಲಾವಣೆಗೆ ಕದ್ದುಮುಚ್ಚಿ ಕಸರತ್ತು ನಡೆಸುತ್ತಿದ್ದಾರೆ. ಅದಕ್ಕಾಗಿ 15
ಸಚಿವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಮತ್ತೆ ಕೆಲವರು ರೆಸಾರ್ಟ್ ರಾಜಕಾರಣ
ಮಾಡುತ್ತಿದ್ದಾರೆ. ಇನ್ನುಳಿದವರು ಮನೆಯಲ್ಲಿದ್ದು, ತಮ್ಮ ಸುರಕ್ಷತೆ
ಕಾಪಾಡಿಕೊಳ್ಳುತ್ತಿದ್ದಾರೆ. ಇಂತಹವರಿಂದ ಜನರಹಿತ ಕಾಪಾಡಲು ಸಾಧ್ಯವೇ ಎಂದು
ಪ್ರಶ್ನಿಸಿದರು.
ಕಾಂಗ್ರೆಸ್ ಸಂಕಷ್ಟದಲ್ಲಿರುವವರ ನೆರವಿಗೆ ಬರುವ ಸಂಸ್ಕøತಿ ಹೊಂದಿದೆ.
ಹಾಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಆದೇಶದ
ಮೇರೆಗೆ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಶಯದಂತೆ ಯುವ
ಕಾಂಗ್ರೆಸ್ ಸಂಕಷ್ಟದಲ್ಲರುವವರ ನೆರವಿಗೆ ನಿಂತು ಕೆಲಸ ಮಾಡುತ್ತಿದೆ
ಎಂದರು.

Leave a Reply

Your email address will not be published. Required fields are marked *