ಕರೋನ ವಾರಿಯರ್ಸ್‌ಗಳಿಗೆ, ಸಂಕಷ್ಟದಲ್ಲಿರುವವರಿಗೆ ಸಂಸದ‌ ಬಿ.ವೈ ರಾಘವೇಂದ್ರರಿಂದ ದಿನಸಿ ಕಿಟ್ಶಿಕಾರಿಪುರ: ಸೇವಾ ಭಾರತಿ ಕರ್ನಾಟಕ ಪ್ರೇರಣಾ ಎಜುಕೇಷನಲ್ ಟ್ರಸ್ಟ್ ಶಿವಮೊಗ್ಗ ಇವರ ವತಿಯಿಂದ ಕರೋನ ವಾರಿಯರ್ಸ್‌ ಮತ್ತು ಸಂಕಷ್ಟದಲ್ಲಿರುವವರಿಗೆ ಹಾಗ್ಗು ಪತ್ರಕರ್ತ ರಿಗೂ ಆಹಾರ ಕಿಟ್ ವಿತರಿಸಿ ಮಾನವೀಯ ಮೌಲ್ಯ ಮೆರೆದ ಸಂಸದ ರಾಘವೇಂದ್ರ

ಶಿಕಾರಿಪುರ ಪಟ್ಟಣದ ಮಂಗಳ ಭವನದಲ್ಲಿ ಮಂಗಳವಾರ ಕರೋನ ವಾರಿಯರ್ಸ್‌ಗಳಾದ ಆಶಾ ಕಾರ್ಯಕರ್ತರು, ಗ್ಯಾಸ್ ಸಿಲಿಂಡರ್ ವಿತರಕರು,ಅಂಗನವಾಡಿ ಕಾರ್ಯಕರ್ತೆರು, ಪೋಲಿಸರು, ಪುರಸಭೆ ಸಿಬ್ಬಂದಿಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟನೆ ನಡಸಿ ಮಾತನಾಡಿದ ಸಂಸದ ರಾಘವೇಂದ್ರ B.Y ಅವರು ಕೋವಿಡ್ ಮೊದಲನೇ ಎರನೇ ಅಲೆಯಲ್ಲಿ ಸೇವೆಯನ್ನು ಮಾಡುತ್ತಿರುವ ಕರೋನ ವಾರಿಯರ್ಸ್‌ಗಳಿಗೆ ಅಭಿನಂದನ ಸಲ್ಲಿಸುತ್ತೇನೆ ಎಂದರು.

ಸಂಕಷ್ಟದ ಸಮಯದಲ್ಲಿ ಸೇವಾ ವಿಕಾಸ ಪ್ರೇರಣಾ ಎಜುಕೇಶನ್ ವತಿಯಿಂದ ಕಿಟ್ ವಿತರಣೆ ಸುಮಾರು 5000 ಕುಟುಂಬವನ್ನು ಆಯ್ಕೆ ಮಾಡಿ ಕಿಟ್ ನೀಡಲಾಗುತ್ತಿದೆ

ಕೋವಿಡ್ ಸಾಂಕ್ರಾಮಿಕ ರೋಗ ಇಡೀ ದೇಶವನ್ನು ವ್ಯಾಪಿಸಿದೆ ಈ ಸಂದರ್ಭದಲ್ಲಿ ಸಂಕಷ್ಟದ ದಲ್ಲಿ ಇರವವರಿಗೆ ಸಹಕರಿಬಮ ಒಂದು ಕೋಟಿ ವ್ಯಾಕ್ಸಿನ್ ಆಗಮಿಸಲಿದೆ ಎಂದರು.

ರಾಜಕೀಯ ಪಕ್ಷ ಎಂದರೇ ಚುನಾವಣೆಗೆ ಮಾತ್ರ ಸೀಮಿತವಲ್ಲ ತಮ್ಮ ವ್ಯಾಪ್ತಿಯಲ್ಲಿ ಜನರಗೆ ಅನುಕೂಲ ಆಗುವ ದೃಷ್ಠಿಯಿಂದ ಎಲ್ಲಾ ಕಾರ್ಯಕರ್ತರು ಜನರಿಗೆ ಸೇವೆ ಮಾಡಬೇಕು ಮೂರನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತದೆ ಜನರು ಹೆಚ್ಚು ಜಾಗೃತಿ ವಹಿಸಬೇಕು ಎಂದರು.

ಶಿಕಾರಿಪುರ ತಾಲ್ಲೂಕಿನಲ್ಲಿ ಆರೋಗ್ಯದ ದೃಷ್ಟಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ‌ ಎಂದರು.

ಈ ಸಂದರ್ಭದಲ್ಲಿ ಕರೋನಾ ವಾರಿಯರ್ಸ್‌ ಮತ್ತು ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮವನ್ನು ವಿತರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಂಐಡಿಬಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಆರ್ ಎಸ್ಎಸ್ ಹಿರಿಯರಾದ ಎಸ.ಬಿ‌ ಮಠದ್,ನಾರಾಯಣ ರಾವ್, ಪ್ರೇರಣಾ ಎಜುಕೇಷನ್ ಟ್ರಸ್ಟ್ ನ ತೇಜಸ್ವಿನಿ ರಾಘವೇಂದ್ರ, ಬಿಜೆಪಿ ಮುಖಂಡರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *