ದಕ್ಷಿಣ ಆಪ್ರಿಕಾದಲ್ಲಿ ಮಹಿಳೆಯೊಬ್ಬರು 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ದ. ಆಪ್ರಿಕಾದ ಗೌಟೆಂಗ್ ನಿವಾಸಿಯಾಗಿರುವ 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಅವರಿಗೆ ಪ್ರಿಟೋರಿಯಾ ನಗರದ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗಿದ್ದು , ಎಲ್ಲಾ ಮಕ್ಕಳು ಆರೋಗ್ಯದಲ್ಲಿವೆ ಎಂದು ಆಸ್ಪತ್ರೆ ತಿಳಿಸಿದೆ.
ಸ್ವಾಭಾವಿಕವಾಗಿ ಗರ್ಭಧರಿಸಿದ ಗೋಸಿಯಮ್ ತಮಾರಾ 29 ವಾರಗಳಲ್ಲಿ( ಏಳು ತಿಂಗಳು ಏಳು ದಿನ) ಹೆರಿಗೆ ನಡೆಸಲಾಗಿದ್ದು, ಏಳು ಗಂಡು ಮತ್ತು ಮೂರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮೊದಲು ಸ್ಕ್ಯಾನ್‌ಗಳು ವೈದ್ಯರು ಆರು ಮಕ್ಕಳನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದ್ದರು. ಬ್ರೂಣಗಳ ದಟ್ಟಣೆಯಿಂದ ಆ ಬಳಿಕ ಎಂಟು ಬ್ರೂಣಗಳಿರಬಹುದು ಎಂದು ಅಂದಾಜಿಸಲಾಗಿತ್ತು.
ಗರ್ಭಧಾರಣೆಯು ಆರಂಭದಲ್ಲಿ ಆರೋಗ್ಯ ಬಿಗಡಾಯಿಸಿತ್ತು. ವಿಪರೀತ ಕಾಲು ನೋವು ಮತ್ತು ಎದೆಯುರಿ ಅನುಭವಿಸಿದ್ದು ಹೆಚ್ಚಿನ ಅಪಾಯದಿಂದ ಗರ್ಭಧಾರಣೆಯಿಂದ ಮುಂದುವರಿಯುವುದಿಲ್ಲ ಎಂಬ ಆತಂಕವೂ ಕಾಡಿತ್ತು. ಆ ಬಳಿಕ ನಾವು ಅವಳಿ ಅಥವಾ ತ್ರಿವಳಿ ಮಕ್ಕಳಾಗಬಹುದು ಎಂದುಕೊಂಡಿದ್ದೆವು. ಆದರೆ ವೈದ್ಯರು ಹತ್ತು ಮಕ್ಕಳು ಎಂದು ಹೇಳಿದಾಗ ಆಶ್ಚರ್ಯವಾಯಿತು. ಯಾವುದೇ ತೊಂದರೆಯಿಲ್ಲದೇ ಮಕ್ಕಳು ಜನಿಸಿದವು. ಮಕ್ಕಳು ಆರೋಗ್ಯಕರವಾಗಿವೆ ಎಂದು ದಂಪತಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಮೂಲತಃ ಎಕುರ್ಹುಲೇನಿ ಮೆಟ್ರೋಪಾಲಿಟನ್ ಪುರಸಭೆಯ ನಗರದ ತೆಂಬಿಸಾ ಪಟ್ಟಣದಿಂದ ಬಂದ ಗೋಸಿಯಮ್, ಚಿಲ್ಲರೆ ಅಂಗಡಿ ವ್ಯವಸ್ಥಾಪಕರಾಗಿದ್ದು, ಈಗಾಗಲೇ ಆರು ವರ್ಷದ ಇಬ್ಬರು ಅವಳಿ ಮಕ್ಕಳನ್ನು ಹೊಂದಿದ್ದಾರೆ. ಸದ್ಯ ಮಕ್ಕಳು ವಿಶೇಷ ಆರೈಕೆ ನಿಗಾ ಘಟಕದಲ್ಲಿ ಇರಿಸಲಾಗಿದೆ.