ಮಾಡಿಕೊಳ್ಳಲು ಸೂಚನೆ

ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ
ಯೋಜನೆ(ಖ-WಃಅIS) ಅಡಿ 2021-22 ನೇ ಸಾಲಿನ ಮುಂಗಾರು ಹಂಗಾಮಿನ
ಬೆಳೆಗಳ ಸಂಯೋಜನೆಗಳನ್ನು ಅಧಿಸೂಚಿಸಿ ತೋಟಗಾರಿಕಾ
ಬೆಳೆಗಳಾದ ಅಡಿಕೆ, ದಾಳಿಂಬೆ, ವೀಳ್ಯೆದೆಲೆ, ಕಾಳುಮೆಣಸು ಮತ್ತು
ಮಾವು ಬೆಳೆಗಳಿಗೆ ನೋಂದಣಿ ಮಾಡಿಸುವಂತೆ ತೋಟಗಾರಿಕೆ
ಇಲಾಖೆಯು ರೈತರಿಗೆ ಸೂಚನೆ ನೀಡಿದೆ.
ದಾವಣಗೆರೆ ಜಿಲ್ಲೆಗೆ ಎಸ್.ಬಿ.ಐ ಜನರಲ್ ಇನ್ಸುರೆನ್ಸ್ ಕಂಪನಿಯನ್ನು
ಹವಾಮಾನ ಆಧಾರಿತ ಬೆಳೆ ವಿಮೆಗಾಗಿ ವಿಮಾ ಸಂಸ್ಥೆಯನ್ನಾಗಿ
ನಿಗದಿಪಡಿಸಲಾಗಿದೆ.
 ಜಿಲ್ಲೆಯ ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಹರಿಹರ,
ಮತ್ತು ಜಗಳೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ತೋಟಗಾರಿಕೆ
ಬೆಳೆಗಳಾದ ಅಡಿಕೆ, ದಾಳಿಂಬೆ, ವೀಳ್ಯೆದೆಲೆ, ಕಾಳುಮೆಣಸು ಮತ್ತು
ಮಾವು ಬೆಳೆಗಳು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ
ಒಳಪಟ್ಟಿರುತ್ತವೆ.
 ಅಡಿಕೆ ಬೆಳೆಗೆ ಪ್ರತಿ ಹೆಕ್ಟರ್‍ಗೆ ರೂ.128000 ವಿಮಾ ಮೊತ್ತವಿದ್ದು,
ಪ್ರೀಮಿಯಂ ಮೊತ್ತ ರೂ.6400 ಗಳಾಗಿರುತ್ತದೆ. ದಾಳಿಂಬೆ ಬೆಳೆಗೆ

ಪ್ರತಿ ಹೆಕ್ಟರ್‍ಗೆ ರೂ.127000 ವಿಮಾ ಮೊತ್ತವಿದ್ದು, ಪ್ರೀಮಿಯಂ
ಮೊತ್ತ ರೂ.6350. ವೀಳ್ಯದೆಲೆ ಬೆಳೆಗೆ ಪ್ರತಿ ಹೆಕ್ಟರ್‍ಗೆ ರೂ.117000
ವಿಮಾ ಮೊತ್ತವಿದ್ದು, ಪ್ರೀಮಿಯಂ ಮೊತ್ತ ರೂ.5850. ಕಾಳುಮೆಣಸು
ಬೆಳೆಗೆ ಪ್ರತಿ ಹೆಕ್ಟರ್‍ಗೆ ರೂ.47000 ವಿಮಾ ಮೊತ್ತವಿದ್ದು, ಪ್ರೀಮಿಯಂ
ಮೊತ್ತ ರೂ.2350. ಮಾವು ಬೆಳೆಗೆ ಪ್ರತಿ ಹೆಕ್ಟರ್‍ಗೆ ರೂ.80000 ವಿಮಾ
ಮೊತ್ತವಿದ್ದು, ಪ್ರೀಮಿಯಂ ಮೊತ್ತ ರೂ.4000 ಗಳಾಗಿರುತ್ತದೆ.
ಮರುವಿನ್ಯಾಸಗೊಳಿಸಲಾದ ಹವಮಾನ ಆಧಾರಿತ ಬೆಳೆ ವಿಮಾ
ಯೋಜನೆಯಡಿ 2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ
ದಾವಣಗೆರೆ ಜಿಲ್ಲೆಗೆ ತೋಟಗಾರಿಕೆ ಬೆಳೆಗಳನ್ನು ನೋಂದಾಯಿಸಲು ಅಡಿಕೆ,
ದಾಳಿಂಬೆ, ವೀಳ್ಯೆದೆಲೆ, ಕಾಳುಮೆಣಸು ಬೆಳೆಗಳಿಗೆ ಜೂನ್ 30 ಹಾಗೂ
ಮಾವು ಬೆಳೆಗೆ ಜುಲೈ 31 ಕೊನೆಯ ದಿನಾಂಕವಾಗಿರುತ್ತದೆ.
ಆಸಕ್ತ ರೈತರು ಸಮೀಪದ ಬ್ಯಾಂಕ್ ಶಾಖೆ, ಗ್ರಾಮ ಪಂಚಾಯಿತಿ
ಕಛೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ
ಕೇಂದ್ರಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ದಾವಣಗೆರೆ
ತೋಟಗಾರಿಕೆ ಉಪನಿರ್ದೇಶಕರು 08192-297090, ದಾವಣಗೆರೆ ಹಿರಿಯ
ಸಹಾಯಕ ತೋಟಗಾರಿಕೆ ನಿರ್ದೇಶಕರು:9482129648 ಹಾಗೂ ದೂರವಾಣಿ
ಸಂಖ್ಯೆ: 08192-250153, ಚನ್ನಗಿರಿ: 9449759777 ಹಾಗೂ ದೂರವಾಣಿ ಸಂಖ್ಯೆ:
08192-228170. ಹೊನ್ನಾಳಿ :8296358345 ಹಾಗೂ ದೂರವಾಣಿ ಸಂಖ್ಯೆ: 08188-
252990, ನ್ಯಾಮತಿ :8296358345 ಹಾಗೂ ದೂರವಾಣಿ ಸಂಖ್ಯೆ:08188-252990,
ಹರಿಹರ :7625078054 ಹಾಗೂ ದೂರವಾಣಿ ಸಂಖ್ಯೆ:08192-242803,
ಜಗಳೂರು :9353175240 ಹಾಗೂ ದೂರವಾಣಿ ಸಂಖ್ಯೆ:08196-227389
ಇವರನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕಾ ಉಪನಿರ್ದೇಶಕ
ಲಕ್ಮೀಕಾಂತ್ ಬೊಮ್ಮಣ್ಣನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You missed