ದಾವಣಗೆರೆ,- ನಗರದ ಸರ್ ಮಿರ್ಜಾಇಸ್ಮಾಯಿಲ್ ಲೇಔಟ್ (ಮಂಡಕ್ಕಿ ಭಟ್ಟಿ)
..ಬಳ್ಳಾರಿ ವಿಭಾಗ.ಉ. ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ್
ಜಹೀರ್ ಭಾಷಾ ಭೇಟಿ ನೀಡಿ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಕೋವಿಡ್-19
ಪರಿಹಾರವಾಗಿ ನೀಡುವ 2000 ಸಾವಿರ ರೂಪಾಯಿಗಳನ್ನು ಮಂಡಕ್ಕಿ ಭಟ್ಟಿ
ಕಾರ್ಮಿಕರು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ತಿಳುವಳಿಕೆ
ನೀಡಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್,
ದಾವಣಗೆರೆ ಕಾರ್ಮಿಕ ನಿರೀಕ್ಷಕರಾದ ರಾಜಶೇಖರ್ ಹಿರೇಮಠ್, ಮಂಡಕ್ಕಿ
ಭಟ್ಟಿಯ ಅಧ್ಯಕ್ಷರಾದ ಮುನ್ನಸಾಬ್, ಪಾಲಿಕೆಯ ಸದಸ್ಯರಾದ
ಎ.ಬಿ.ರಹೀಂಸಾಬ್, ಕೆ.ಚಮನ್‍ಸಾಬ್ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ
ವಿಭಾಗದ ಜಿಲ್ಲಾಧ್ಯಕ್ಷರಾದ ಹೆಚ್. ಸುಭಾನ್ ಸಾಬ್ ಸೇರಿದಂತೆ ಅನೇಕರು
ಮುಖಂಡರು ಭಾಗವಹಿಸಿದ್ದರು.