ಶಿವಮೊಗ್ಗ, ಜೂನ್ 10: ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ವೃತ್ತಿನಿರತ ಮಹಿಳಾ ಬ್ಯೂಟಿಷಿಯನ್‍ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸಹಾಯಧನ, ಆಹಾರದ ಕಿಟ್, ವ್ಯಾಕ್ಸಿನೇಷನ್, ಕಾರ್ಮಿಕರ ಕಾರ್ಡ್ ಸೌಲಭ್ಯ ದೊರಕಿಸಿಕೊಡುವಂತೆ ಶಿವಮೊಗ್ಗ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ನಾಗವೇಣಿ (ವಾಣಿ), ಎ.ಎಸ್. ಅಪರ್ಣಾ, ಟಿ.ಆರ್. ಭಾಗ್ಯಾ,ಎಸ್.ಆರ್. ಸುಷ್ಮಾ, ಜಿ. ಗಂಗಾ, ಗೀತಾ, ಪದ್ಮಾ, ನಿಮಿತಾ ಮತ್ತಿತರರು ಇದ್ದರು.