ಹೊನ್ನಾಳಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆಂದು ಒಂದಿಬ್ಬರು ತಿರುಕನ ಕನಸು ಕಾಣುತ್ತಿದ್ದು, ಇಂತಹ ಗೊಂದಲಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಳಾದ ಅರುಣ್ ಸಿಂಗ್ ತೆರೆ ಎಳೆದಿದ್ದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ತಾಲೂಕಿನ ಅರಬಗಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯತ್ವ ಬದಲಾವಣೆಯ ಕುರಿತು ಚರ್ಚೆಯೇ ಆಗಿಲ್ಲಾ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೇಯೇ ಇಲ್ಲಾ ಎಂದಿದ್ದಾರೆ ಎಂದರು.
ಒಂದಿಬ್ಬರು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೇ, ನಾವು ಸಿಎಂ ಆಗುತ್ತೇವೆಂದು ತಿರುಕನ ಕನಸು, ಹಗಲು ಗನಸು ಕಾಣುತ್ತಿದ್ದು ನಾಯಕತ್ವ ಬದಲಾವಣೆಯ ಗೊಂದಲಕ್ಕೆ ಅರುಣ್ ಸಿಂಗ್ ಅವರು ತೆರೆ ಎಳೆದಿದ್ದಾರೆಂದರು.
ಕೆಲವರಿಗೆ ತಮ್ಮ ಪಕ್ಕದ ಕ್ಷೇತ್ರಕ್ಕೆ ಬಂದು ಶಾಸಕರನ್ನು ಗೆಲ್ಲಿಸುವ ಶಕ್ತಿ ಇಲ್ಲಾ, ಇನ್ನೋಬ್ಬರು ಕ್ಷೇತ್ರದ ಅವರೇ ಜನರ ಮದ್ಯೇ ಇಲ್ಲಾ ಅಂತಹವರು ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಮಾತನಾಡುತ್ತಾರೆ, ಅವರು ತಮ್ಮನ್ನು ತಾವು ಸ್ವಯಂ ಘೋಷಿತ ನಾಯಕರು ಎಂದು ಕೊಂಡಿದ್ದು, ಇದೀಗ ಅರುಣ್ ಸಿಂಗ್ ಅವರು, ನಾಯಕತ್ವ ಗೊಂದಲಕ್ಕೆ ತೆರೆ ಎಳೆದಿದ್ದು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕೊರೊನಾ ಸಂದರ್ಭದಲ್ಲಿ ಯಡಿಯೂರಪ್ಪನವರು ತಮ್ಮ ಆರೋಗ್ಯವ್ನೂ ಲೆಕ್ಕಿಸದೇ ರಾಜ್ಯದ ಜನರ ಆರೋಗ್ಯ ರಕ್ಷಣೆ ಮಾಡ ಬೇಕೆಂದು ಲಸಿಕೆ ಸೇರಿದಂತೆ ಕೃಷಿ ಕಾರ್ಮಿಕರು, ಕೊರೊನಾ ವಾರಿಯರ್ಸಗಳಿಗೆ, ಅಸಂಘಟಿತ ಕಾರ್ಮಿಕರಿಗೆ ಪ್ಯಾಕೇಜ್ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿದ್ದು ರಾಷ್ಟ್ರೀಯ ನಾಯಕರೇ ಅವರ ಆಡಳಿತವನ್ನು ಮೆಚ್ಚಿದ್ದಾರೆ, ಆದರೇ ಒಂದಿಬ್ಬರು ವಿನಾಃ ಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆಂದರು.
ಶಾಸಕರು ಜನರ ಸೇವಕರಾಗಿ ಕಾವಲುಗಾರರಾಗಿ ಕೆಲಸ ಮಾಡ ಬೇಕು ಅದನ್ನು ಬಿಟ್ಟು ಕೆಲವರು ದೆಹಲಿಗೆ ಹೋಗುವಾಗ ಮದ್ಯಮಗಳಿಗೆ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿ ಹೋಗಿ ದೆಹಲಿಯಲ್ಲಿ ರಾಷ್ಟ್ರೀಯ ನಾಯಕ ಗೆಟ್ ಮುಟ್ಟಿ ಬಂದು ಪೋಟೋ ಹಾಕಿ ಗೊಂದಲ ಸೃಷ್ಟಿ ಮಾಡುತ್ತಿದ್ದು ಇದಕ್ಕೆಲ್ಲಾ ಅರುಣ್ ಸಿಂಗ್ ತೆರೆ ಎಳೆದಿದ್ದಾರೆಂದರು.
ನನಗೆ ರಾಜಕಾರಣದ ಬಗ್ಗೆ ನಾಚಿಕೆಯಾಗುತ್ತಿದೇ ಎಂದ ರೇಣುಕಾಚಾರ್ಯ, ಅರುಣ್ ಸಿಂಗ್ ಅವರು ನಾಯಕತ್ವ ಬದಲಾವಣೆಯ ಅಪಸ್ಪರ ಕೈ ಬಿಡ ಬೇಕು, ಕೋವಿಡ್ ಸಂದರ್ಭದಲ್ಲಿ ಸಿಎಂ ಕೈ ಬಲ ಪಡಿಸ ಬೇಕೆಂದು ಹೇಳಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡ ಬೇಕಿದೆ ಎಂದರು.
ಯಾರೂ ಕೂಡ ಹಡಗಿನಲ್ಲಿ ಕೂತು ಹೋಲು ಕೊರೆಯ ಬಾರದು, ಇದರಿಂದ ಹಡಗೇ ಮುಳುತ್ತದೆ, ಆಗಾಗೀ ಇಂತಹ ದುಸ್ಸಾಹಕ್ಕೆ ಕೈ ಹಾಕ ಬೇಡಿ ಎಂದು ಮನವಿ ಮಾಡಿದ ರೇಣುಕಾಚಾರ್ಯ ಯಡಿಯೂರಪ್ಪ ಎಂದರೇ ನಾಯಕತ್ವ ಅಂತಹವರ ಬಗ್ಗೆ ಮೊನ್ನ ಮೊನ್ನೆ ಬಂದ ಕೆಲವರು ಅಪಸ್ಪರ ಎತ್ತುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲಾ ಎಂದರು.
ಅರುಣ್ ಸಿಂಗ್ ಅವರು ಈ ತಿಂಗಳು ರಾಜ್ಯಕ್ಕೆ ಬರುತ್ತಿದ್ದು ಎಲ್ಲಾ ಶಾಸಕರು ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ಬೆಳವಣಿಗೆ, ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ 2023 ರ ಚುನಾವಣೆಗೆ ಗೆಲ್ಲುವ ಬಗ್ಗೆ ಚರ್ಚೆ ಮಾಡಿ ಯಡಿಯೂರಪ್ಪನವರೊಂದಿಗೆ ನಾವಿದ್ದೇವೆಂದು ಸಾರುವ ಕೆಲಸ ಮಾಡುತ್ತೇವೆ ಎಂದರು. ಯಡಿಯೂರಪ್ಪನವರ ನಾಯಕತ್ವದ ಬಗ್ಗೆ 65 ಕ್ಕೂ ಹೆಚ್ಚು ಜನರು ಸಹಿ ಮಾಡಿದ ಪತ್ರ ನನ್ನ ಬಳಿ ರಾಜ್ಯಾಧ್ಯಕ್ಷರ ಮಾತಿಗೆ ಬೆಲೆ ಕೊಟ್ಟು ನಾನು ಸಹಿ ಸಂಗ್ರಹ ನಿಲ್ಲಿಸಿದ್ದು, ಇನ್ನು ಮುಂದೆ ರಾಜಕೀಯ ಮಾತನಾಡ ಬಾರದು ಎಂದು ನಿರ್ಧರಿಸಿದ್ದೇನೆ ಎಂದರು.

Leave a Reply

Your email address will not be published. Required fields are marked *