ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ
ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರ ಅವಲಂಬಿತ ನಿಕಟಸಂಬಂಧಿ
ಕುಟುಂಬದವರಿಗೆ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳು ಹಾಗೂ
ಸಂಬಂಧಪಟ್ಟ ವಾರ್ಡ್‍ಗಳಲ್ಲಿ ಲಸಿಕೆಯ ಲಭ್ಯತೆಗನುಗುಣವಾಗಿ ಕೋವಿಡ್-
19 ನಿರೋಧಕ ಲಸಿಕೆ ನೀಡಲಾಗುವುದು.
ಮುಖ್ಯಮಂತ್ರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಮತ್ತು ಭಾರತ
ಸರ್ಕಾರದ ಮಾರ್ಗಸೂಚಿಯಂತೆ ಆರೋಗ್ಯ ಕಾರ್ಯಕರ್ತರ
ಅವಲಂಬಿತ ವಿಕಟಸಂಬಂಧಿ ಕುಟುಂಬದವರಿಗೆ ಕೋವಿಡ್-19 ಲಸಿಕೆ ನೀಡಲು
ಆದೇಶಿಸಲಾಗಿದೆ.
ಹೀಗಾಗಿ, ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿ 8000 ಡೋಸಸ್
ಮುಂಚೂಣಿ ಕಾರ್ಯಕರ್ತರಿಗೆ (ಫ್ರಂಟ್ ಲೈನ್ ವರ್ಕರ್ಸ್) ಹಾಗೂ 6000
ಡೋಸಸ್ 45 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ತಾಲ್ಲೂಕುವಾರು
ಹಂಚಿಕೆಯಾಗಿದ್ದು, ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳು ಹಾಗೂ
ಸಂಬಂಧಪಟ್ಟ ವಾರ್ಡ್‍ಗಳಲ್ಲಿ ಲಸಿಕೆಯ ಲಭ್ಯತೆಗನುಗುಣವಾಗಿ ಕೋವಿಡ್-
19 ಲಸಿಕೆಯನ್ನು ನೀಡಲಾಗುವುದು ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ
ಡಾ.ಮೀನಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.